ಬ್ರೇಕಿಂಗ್ ನ್ಯೂಸ್
01-12-20 01:57 pm Headline Karnataka News Network ಕರ್ನಾಟಕ
ಬೆಂಗಳೂರು, ಡಿ.1: ನಮ್ಮಿಂದ ಸಹಾಯ ಪಡೆದು, ಸರಕಾರ ರಚಿಸಿಕೊಂಡು ಅಧಿಕಾರ ಅನುಭವಿಸುತ್ತಿರುವ ಮಂದಿ ನನ್ನ ಕಷ್ಟಕಾಲದಲ್ಲಿ ಸಹಾಯಕ್ಕೆ ಬರಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದ್ದಾರೆ.
ಈ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್, ನಾನೇನು ಸಚಿವ ಸ್ಥಾನಕ್ಕೆ ಕಾಯುತ್ತಿರುವ ಮನುಷ್ಯ ಅಲ್ಲ. ರಾಜಕಾರಣವನ್ನು ವ್ಯವಹಾರದ ರೂಪದಲ್ಲಿ ತೆಗೆದುಕೊಂಡವನೂ ನಾನಲ್ಲ. ಸಾಂಸ್ಕೃತಿಕ ಹೋರಾಟದ ಪ್ರತೀಕವಾಗಿ ರಾಜಕೀಯ ಮಾಡುತ್ತಾ ಬಂದವನು. ಸಚಿವನಾಗಿ, ಶಾಸಕನಾಗಿ ನನ್ನ ಕಾರ್ಯ ವೈಖರಿ ಜನರಿಗೆ ಗೊತ್ತಿದೆ. ಆದರೆ ನನ್ನ ಕಷ್ಟಕಾಲದಲ್ಲಿ ಎಲ್ಲರೂ ಕೈಬಿಟ್ಟರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಚುನಾವಣೆಗೆ ಕೋರ್ ಕಮಿಟಿ ಮೊದಲ ಪಟ್ಟಿ ಕಳುಹಿಸಿದ್ದಾಗ ನನ್ನ ಹೆಸರಿತ್ತು. ಆದರೆ, ಆಬಳಿಕ ಪಟ್ಟಿಯಲ್ಲಿ ಹೆಸರು ಮಾಯವಾಗಿತ್ತು. ಇದು ಹೇಗಾಯ್ತು ಎನ್ನುವುದು ನನಗೆ ತಿಳಿದಿಲ್ಲ. ನನ್ನ ಹೆಸರನ್ನು ಯಾಕಾಗಿ ಪಟ್ಟಿಯಿಂದ ತೆಗೆಸಿದರು ಎನ್ನುವುದೂ ತಿಳಿದಿಲ್ಲ ಎಂದು ಪರೋಕ್ಷವಾಗಿ ಸಂಘ ಪರಿವಾರದ ವಿರುದ್ಧ ಅಸಮಾಧಾನ ತೋಡಿಕೊಂಡರು. ಹೈಕೋರ್ಟ್ ತೀರ್ಪು ಸಚಿವ ಸ್ಥಾನಕ್ಕೆ ಮಾತ್ರ ಸೀಮಿತ. ಪರಿಷತ್ ಸದಸ್ಯತ್ವ ಸ್ಥಾನಕ್ಕೆ ತೊಂದರೆಯಿಲ್ಲ.
ಈ ಬಗ್ಗೆ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸುತ್ತೇನೆ ಎಂದ ಅವರು, ಹಾಗೆ ನೋಡಿದರೆ ಆರಂಭದಲ್ಲಿ ಸಂಘ ಪರಿವಾರದ ಬೆಂಬಲ ಸಿಕ್ಕಿತ್ತು. ಈಗ ಕಷ್ಟಕಾಲದಲ್ಲಿ ಮಾತ್ರ ನೆರವು ಸಿಗಲಿಲ್ಲ. ಅಡ್ವೊಕೇಟ್ ಜನರಲ್ ಕೂಡ ಅನಾದರ ತೋರಿದರು ಎಂದು ಹೇಳಿಕೊಂಡರು.
ಈ ಬಗ್ಗೆ ಯಡಿಯೂರಪ್ಪ ಅವರೊಡನೆ ಮಾತುಕತೆ ನಡೆಸುತ್ತೇನೆ. ನನ್ನ ಜೊತೆಗೆ ಬಿಜೆಪಿಗೆ ಬಂದವರೆಲ್ಲ ನನ್ನ ಜೊತೆಗಿದ್ದಾರೆ. ರಮೇಶ್ ಜಾರಕಿಹೊಳಿ, ಆರ್.ಅಶೋಕ್, ಎಸ್.ಟಿ. ಸೋಮಶೇಖರ್ ಸೇರಿ ಹಲವರು ಫೋನ್ ಮಾಡಿ ವಿಚಾರಿಸಿದ್ದಾರೆ ಎಂದು ವಿಶ್ವನಾಥ್ ಹೇಳಿದರು.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am