ಬ್ರೇಕಿಂಗ್ ನ್ಯೂಸ್
28-11-20 04:32 pm Headline Karnataka News Network ಕರ್ನಾಟಕ
ಕಾರವಾರ, ನ.28: ಸಿದ್ದರಾಮಯ್ಯ ಮಾದಕ ದ್ರವ್ಯದ ಹಣದಿಂದ ಸರಕಾರ ನಡೆಸಿದ್ದರೆ, ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಿ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೆ ಏನೋ ಸ್ವಲ್ಪ ಹೆಚ್ಚು ಕಮ್ಮಿ ಆಗಿದೆ, ಅವರನ್ನು ಆಸ್ಪತ್ರೆಗೆ ಸೇರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಮಾದಕ ದ್ರವ್ಯದ ಹಣದಿಂದ ಸರಕಾರ ನಡೆಸಿದ್ದರು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿಕೆಗೆ ಡಿಕೆಶಿ ಈ ರೀತಿ ತಿರುಗೇಟು ನೀಡಿದರು. ಶನಿವಾರ ಕಾರವಾರಕ್ಕೆ ಆಗಮಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ಹಿಂದಿನ ಸರಕಾರದಲ್ಲಿ ನಾನು ಕೂಡ ಭಾಗವಾಗಿದ್ದೆ. ನನ್ನ ಮೇಲೂ ಎಫ್‌ಐಆರ್ ಹಾಕಲಿ. ನಮ್ಮ ಸರಕಾರದಲ್ಲಿದ್ದವರು ಇದೀಗ ಅವರ ಸರಕಾರದಲ್ಲೂ ಇದ್ದಾರಲ್ಲ, ಅವರ ಮೇಲೂ ಎಫ್‌ಐಆರ್ ದಾಖಲಿಸಲಿ ಎಂದು ಕುಟುಕಿದರು.
ಕಟೀಲು ತಮ್ಮ ಸ್ಥಾನದ ಗೌರವಕ್ಕೆ ಸರಿಯಾಗಿ ನಡೆದುಕೊಳ್ಳುವುದನ್ನು ಕಲಿಯಲಿ. ಅವರಿಗೆ ರಾಜಕೀಯದ ಅಲ್ಪಸ್ವಲ್ಪ ಪರಿಜ್ಞಾನ ಇದೆ ಎಂದು ತಿಳ್ಕೊಂಡಿದ್ದೆ. ಈ ರೀತಿಯ ಮಾತುಗಳಿಂದ ಅವರ ಸ್ಥಾನಕ್ಕೇ ಕಳಂಕ ಎಂದರು.
ಸಿಎಂ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆ ಪ್ರಕರಣದ ಹಿಂದೆ ಗೌಪ್ಯವಾದ ವಿಚಾರಗಳು ಅಡಗಿವೆ. ಆದ್ದರಿಂದ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು. ಅದು ಸರಕಾರದ ಮಟ್ಟದಲ್ಲಿ ನಡೆದರೆ ಪ್ರಯೋಜನವಿಲ್ಲ ಎಂದು ಕೆಪಿಸಿಸಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರಾಜ್ಯ ಸರಕಾರದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಬಿಜೆಪಿಯವರ ಆಂತರಿಕ ವಿಚಾರಗಳಲ್ಲಿ ನಾವು ತಲೆ ಹಾಕುವುದಿಲ್ಲ. ನಮ್ಮ ಪಕ್ಷದಿಂದ ಅಲ್ಲಿಗೆ ಹೋದ ಕೆಲವರು ಬಿಜೆಪಿಗೇನು ಮಾಡಬೇಕೋ ಅದನ್ನು ಮಾಡ್ತಾರೆ. ನಾವು ಅನುಭವಿಸಿದ್ದನ್ನು ಅವರೂ ಅನುಭವಿಸ್ತಾರೆ ಎಂದು ಹೇಳಿದರು.
Congress Dk Shivakumar has mocked at Naleen Kumar Kateel saying he's mentally not well.
09-08-25 08:00 pm
HK Staff
ಎರಡು ವಂದೇ ಭಾರತ್, ಮೆಟ್ರೋ ಯಲ್ಲೋ ಲೈನ್ ಅನಾವರಣಕ್ಕೆ...
09-08-25 07:28 pm
Siddaramaiah,Ibrahim: ಸಿದ್ದರಾಮಯ್ಯ ಎರಡು ಬಾರಿ ಮ...
09-08-25 03:32 pm
Fraud Case, Dhruva Sarja, Mumbai: ಆಕ್ಷನ್ ಪ್ರಿ...
09-08-25 01:40 pm
ನೂರಾರು ಕೊಲೆ ಮಾಡಿಸಲು ಧರ್ಮಸ್ಥಳದ ಧರ್ಮಾಧಿಕಾರಿ ದಾವ...
08-08-25 06:23 pm
09-08-25 07:38 pm
HK Staff
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
09-08-25 08:10 pm
Mangalore Correspondent
Father Muller Medical College, Hospital, Mang...
09-08-25 04:22 pm
Dharmasthala,16th Spot at Bahubali Hill: ಧರ್ಮ...
09-08-25 02:16 pm
Udupi, Talaq; ವರದಕ್ಷಿಣೆ ಕಿರುಕುಳ ; ವಿದೇಶದಿಂದ ಮ...
09-08-25 11:36 am
Roshan Saldanha, ED Raid, Mangalore, Fraud: ರ...
08-08-25 11:10 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm