ಬ್ರೇಕಿಂಗ್ ನ್ಯೂಸ್
23-11-23 06:57 pm Bangalore Correspondent ಕರ್ನಾಟಕ
ಬೆಂಗಳೂರು, ನ.23: ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಉತ್ಪನ್ನಗಳಿಗೆ ಹಲಾಲ್ ಸರ್ಟಿಫಿಕೇಟ್ ನೀಡುವುದನ್ನು ನಿಷೇಧಿಸಿರುವ ಬೆನ್ನಲ್ಲೇ ಇಡೀ ದೇಶದಲ್ಲಿ ಅದೇ ರೀತಿಯ ನಿಷೇಧ ಹಾಕಬೇಕೆಂದು ಒತ್ತಾಯ ಕೇಳಿಬಂದಿದೆ. ಇಡೀ ದೇಶದಲ್ಲಿ ಹಲಾಲ್ ಪ್ರಮಾಣೀಕರಿಸುವ ಏಜೆನ್ಸಿಗಳನ್ನು ನಿಷೇಧ ಮಾಡಬೇಕೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೇಂದ್ರ ಸರಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಪಿಯೂಷ್ ಗೋಯಲ್ ಅವರಿಗೆ ಶಾಸಕ ಯತ್ನಾಳ್ ಪತ್ರ ಬರೆದಿದ್ದಾರೆ. ಭಾರತದಲ್ಲಿ ಹಲಾಲ್ ಸರ್ಟಿಫಿಕೇಟ್ ನೀಡುವ ಎಲ್ಲ ಏಜೆನ್ಸಿಗಳನ್ನ ನಿಷೇಧಿಸಬೇಕು. ಕೇಂದ್ರ ಸರಕಾರ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ.
ದೇಶದಲ್ಲಿ ಹಲವಾರು ಉತ್ಪನ್ನಗಳಿಗೆ ಇಸ್ಲಾಮಿಕ್ ಸಂಘಟನೆಗಳಾದ ಹಲಾಲ್ ಇಂಡಿಯಾ, ಜಮಿಯತ್ ಉಲೇಮಾ ಇ- ಹಿಂದ್ ಹಲಾಲ್ ಟ್ರಸ್ಟ್, ಗ್ಲೋಬಲ್ ಇಸ್ಲಾಮಿಕ್ ಶರಿಯಾ, ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಹಲಾಲ್ ಸರ್ಟಿಫಿಕೇಟ್ ಸರ್ವಿಸ್ ಇಂಡಿಯಾ ಪ್ರೈ. ಲಿಮಿಟೆಡ್, ಜಮಿಯತ್ ಉಲಮಾ ಇ- ಮಹಾರಾಷ್ಟ್ರ ಎಂಬೀ ಸಂಘಟನೆಗಳು ಹಲಾಲ್ ಸರ್ಟಿಫಿಕೇಟ್ ನೀಡುತ್ತಿವೆ. ಆಮೂಲಕ ಮುಸ್ಲಿಮರ ಆರ್ಥಿಕತೆಯನ್ನು ಕ್ರೋಡೀಕರಿಸುವುದಲ್ಲದೆ, ಇದರಿಂದ ಲಭಿಸುವ ಲಾಭವನ್ನು ಇಸ್ಲಾಮಿಕ್ ಉಗ್ರವಾದಕ್ಕೆ ಬಳಸುತ್ತಿದ್ದಾರೆ. ಮುಸ್ಲಿಮ್ ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ಈ ರೀತಿಯ ಕೆಲಸ ಆಗ್ತಾ ಇದೆ. ಈ ರೀತಿಯ ನಡೆ ನಮ್ಮ ದೇಶದ ಜಾತ್ಯಾತೀತ ಮೌಲ್ಯಗಳಿಗೆ ವಿರುದ್ಧವಾಗಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕು ಯತ್ನಾಳ್ ಒತ್ತಾಯಿಸಿದ್ದಾರೆ.
ಹಲಾಲ್ ಸರ್ಟಿಫಿಕೇಟ್ ಮೂಲಕ ಕ್ರೋಡೀಕರಿಸುವ ಹಣದಲ್ಲಿ ಭಯೋತ್ಪಾದಕ ಚಟುವಟಿಕೆ ಮತ್ತು ಇಂತಹ ಕೃತ್ಯದಲ್ಲಿ ಬಂಧಿತರಾದವರಿಗೆ ಕಾನೂನು ನೆರವು ನೀಡಲು ಬಳಕೆಯಾಗ್ತಿದೆ. ಮಾಂಸ, ಆಹಾರೋತ್ಪನ್ನಗಳು, ಹೊಟೇಲ್, ರೆಸ್ಟೋರೆಂಟ್, ಕಾಸ್ಮೆಟಿಕ್ ಉತ್ಪನ್ನಗಳು ಹೀಗೆ ದೇಶದಲ್ಲಿ ಹಲವಾರು ಉತ್ಪನ್ನಗಳಿಗೆ ಹಲಾಲ್ ಮಾರ್ಕ್ ನೀಡುವ ಮೂಲಕ ಮುಸ್ಲಿಮರನ್ನು ಸೆಳೆಯುವ ಪ್ರಯತ್ನ ನಡೆದಿದೆ. ಇದೊಂದು ಗಂಭೀರ ಆರ್ಥಿಕ ಜಿಹಾದ್ ಅನ್ನುವುದನ್ನು ಯತ್ನಾಳ್ ಪತ್ರದಲ್ಲಿ ವಿವರಿಸಿದ್ದಾರೆ.
2016ರಲ್ಲಿ ಗುಜ್ಜಾರ್ ಅಜ್ಮಿ ಎಂಬಾತ ಹಲಾಲ್ ಸರ್ಟಿಫಿಕೇಟ್ ಮೂಲಕ ದೊರೆಯುವ ಹಣವನ್ನು ಉಗ್ರರಿಗೆ ಜಾಮೀನು ದೊರಕಿಸಲು ಬಳಸಿಕೊಳ್ಳುತ್ತೇವೆ ಎಂದು ಹೇಳಿಕೆ ನೀಡಿದ್ದ. ದೇಶದ ಆಂತರಿಕ ಭದ್ರತೆಗೆ ಸವಾಲೊಡ್ಡುವ ರೀತಿಯ ಹೇಳಿಕೆ ಇದಾಗಿದ್ದಲ್ಲದೆ, ದೇಶದ್ರೋಹಿ ಚಟುವಟಿಕೆಗೆ ಸಾಕ್ಷಿ ಎನ್ನುವಂತಿದೆ. ಇದಲ್ಲದೆ, ಹಲಾಲ್ ಸರ್ಟಿಫಿಕೇಟ್ ನೀಡುವ ಪದ್ಧತಿಯೇ ಮುಸ್ಲಿಮರ ಷರಿಯಾ ಕಾನೂನಿನಡಿ ನಡೆಯುತ್ತಿದೆ. ದೇಶದಲ್ಲಿ ಫುಡ್ ಸೇಫ್ಟಿ ಮತ್ತು ಸ್ಟಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ ಎನ್ನುವ ಸಂಸ್ಥೆಯಿದ್ದು ಎಲ್ಲ ರೀತಿಯ ವಸ್ತು, ಸಾಮಗ್ರಿಗಳಿಗೆ ಪರವಾನಗಿ ನೀಡುತ್ತದೆ. ಹೆಚ್ಚುವರಿಯಾಗಿ ಹಲಾಲ್ ಸರ್ಟಿಫಿಕೇಟ್ ನೀಡುವುದನ್ನು ನಿರ್ಬಂಧಿಸಬೇಕಿದೆ ಎಂದು ಯತ್ನಾಳ್ ಹೇಳಿದ್ದಾರೆ.
ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಹಲಾಲ್ ಸರ್ಟಿಫಿಕೇಟ್ ವಿಚಾರದಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ರೀತಿಯ ನಡೆಗಳು ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತದೆ ಮತ್ತು ಒಂದು ಕೋಮನ್ನು ಗುರಿಯಾಗಿಸಿ ಆರ್ಥಿಕ ಶಕ್ತಿಯನ್ನು ಕ್ರೋಡೀಕರಿಸುತ್ತದೆ. ಇದು ಕಾನೂನು ರೀತ್ಯ ಅಪರಾಧವೆಂದು ಪೊಲೀಸರಿಗೆ ದೂರು ನೀಡಲಾಗಿತ್ತು.
Vijayapura City MLA Basanagouda Patil Yatnal has written to Union Minister for Consumer Affairs, Food and Public Distribution Piyush Goyal seeking a ban on halal certifying agencies in the country. This comes days after the Uttar Pradesh government banned halal-certified products in that state.
01-09-25 10:53 pm
Bangalore Correspondent
Karnataka Police, Warning to Social Media Use...
01-09-25 06:59 pm
ಎಸ್.ಐ.ಟಿ ರಚನೆ ಮಾಡಿದಾಗಲೇ ಬಿಜೆಪಿ ಯಾಕೆ ವಿರೋಧ ಮಾಡ...
01-09-25 05:03 pm
Yadagiri, Raid, Heart Attack: ಯಾದಗಿರಿ ; ಇಸ್ಪೀ...
01-09-25 04:55 pm
Sujatha Bhat, Latest News, Dharmasthala: ಚಿನ್...
01-09-25 01:25 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
01-09-25 10:01 pm
Mangalore Correspondent
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸೌ...
01-09-25 05:05 pm
Mangalore Pothole, Accident, Video Viral: ಕೆಪ...
31-08-25 10:34 pm
Ullal, Mangalore, UT Khader: ಹಡಿಲು ಬಿದ್ದ ಗದ್ದ...
31-08-25 08:20 pm
“Mangaluru’s Biggest Heart Care Offer: Indian...
31-08-25 01:56 pm
01-09-25 09:21 pm
Udupi Correspondent
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm
Mangalore Crime, Konaje Police, Raid, Liquor:...
01-09-25 01:58 pm
Mangalore Crime, Falnir Attack: ಪೊಲೀಸರಿಗೆ ಭಾರ...
31-08-25 10:55 pm
Mangalore Court, Sexual Abuse: ಮೂರೂವರೆ ವರ್ಷದ...
30-08-25 03:22 pm