ಬ್ರೇಕಿಂಗ್ ನ್ಯೂಸ್
12-11-20 12:49 pm Headline Karnataka News Network ಕರ್ನಾಟಕ
ಧಾರವಾಡ, ನವೆಂಬರ್ 11 : ಅಕ್ರಮ ಚಟುವಟಿಕೆಗಳನ್ನು ತಡೆಯಬೇಕಾದ ಆರಕ್ಷಕರೇ ಅಂದರ್ ಬಾಹರ್ ಆಡಲು ಹೋಗಿ ಸಿಕ್ಕಿಬಿದ್ದಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡ ತಾಲೂಕಿನ ಗರಗ ಪೊಲೀಸ್ ಠಾಣಾ ವ್ಯಾಪ್ತಿಯ ಮುಮ್ಮಿಗಟ್ಟಿ ಎಂಬಲ್ಲಿ ಉಡುಪಿ ಹೋಟೆಲ್ ಬಳಿಯ ಕೋಣೆಯೊಂದರಲ್ಲಿ 10 ಜನ ಪೊಲೀಸರು ಜೂಜು ಆಡುತ್ತಿದ್ದರು. ಈ ವೇಳೆ ಧಾರವಾಡ ಡಿವೈಎಸ್‍ಪಿ ತಂಡ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದೆ. ಆದರೆ, ದಾಳಿ ವಿಚಾರ ಗೊತ್ತಾದ ಕಳ್ಳ ಪೊಲೀಸರು ಪರಾರಿಯಾಗಿದ್ದಾರಂತೆ.
ಪ್ರಕರಣ ಸಂಬಂಧ ಗರಗ ಗ್ರಾಮದ ಅನಿಲ್ ಉಳವಣ್ಣವರ್ ನನ್ನು ಗರಗ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನಿಲ್ ಜೊತೆ ಸೇರಿಕೊಂಡು ಗರಗ ಠಾಣೆಯ ಪೊಲೀಸರೇ ಆದ ಆತ್ಮಾನಂದ ಬೆಟಗೇರಿ, ಮಂಜುನಾಥ ನಾಗಾವಿ, ಸಶಸ್ತ್ರ ಮೀಸಲು ಪಡೆಯ ಪೊಲೀಸರಾದ ಮೈನುದ್ದೀನ್ ಮುಲ್ಲಾ, ಶಂಕರ ಭಜಂತ್ರಿ, ಬಸವರಾಜ ಮಠದ, ವರ್ಧಮಾನ ಹಟಿಂಗಳಿ, ಆರ್.ಎಸ್.ಜಂಗನವರ, ಹುಲಿಗೆಪ್ಪ ದೊಡಮನಿ, ಮಲ್ಲಿಕಾರ್ಜುನ ಶಿರೂರ ಹಾಗೂ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸ್ ಪೇದೆ ಸೈಯದಸಾಬ್ ಇಸ್ಮಾಯಿಲ್ ಎಂಬವರು ಅಂದರ್ ಬಾಹರ್ ಆಡುತ್ತಿದ್ದರು ಎನ್ನಲಾಗುತ್ತಿದೆ.
ಮಾಹಿತಿ ಮೇರೆಗೆ ಸ್ವತಃ ಡಿವೈಎಸ್‍ಪಿ ರವಿ ನಾಯಕ್ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಹತ್ತೂ ಜನ ಪೊಲೀಸರು ಪರಾರಿಯಾಗಿದ್ದಾರೆ. ಈ ವೇಳೆ 35 ಸಾವಿರ ರೂಪಾಯಿ, 1 ಮೊಬೈಲ್ ಹಾಗೂ 5 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
10 police personals of caught playing Gambling in Dharwad when Dysp Raided the spot. It is said all of them have escaped from the spot. 35 thousand cash two Wheeler's and Mobile phones have been confiscated.
02-05-25 01:40 pm
Bangalore Correspondent
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:10 pm
Mangalore Correspondent
Udupi crime, Attempt, Suhas Shetty Murder: ಉಡ...
02-05-25 12:44 pm
Suhas Shetty Murder, Liquor Ban: ಸುಹಾಸ್ ಶೆಟ್ಟ...
02-05-25 12:23 pm
Suhas Shetty Murder, Bajpe, Mangalore: ಟಾರ್ಗೆ...
02-05-25 03:52 am
Suhas Shetty murder, Mangalore Bandh: ಸುಹಾಸ್...
02-05-25 03:29 am
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm