ಬ್ರೇಕಿಂಗ್ ನ್ಯೂಸ್
12-09-23 06:14 pm HK News Desk ಕರ್ನಾಟಕ
ಶಿವಮೊಗ್ಗ, ಸೆ.12: ಸಿದ್ದರಾಮಯ್ಯ ಅವರು ಸಾಯೋದು ಬೇಡ, ಅವರ ಹೆಣ ಬಿಜೆಪಿ ಕಚೇರಿಗೆ ಬರೋದು ಬೇಡ. ಅವರು ಹೆಚ್ಚು ದಿನ ಬದುಕಬೇಕು. ಆದರೆ, ಅವರು ಮೊದಲ ಸಲ ಸರ್ಕಾರ ಕಾರು ಹತ್ತಿದ್ದು ಬಿಜೆಪಿ ಬೆಂಬಲಿತ ಸರ್ಕಾರದಿಂದ ಎನ್ನುವುದನ್ನು ಮರೆಯಬಾರದು ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಬೇಗ ಸಾಯಬಾರದು. ಬಹಳ ವರ್ಷ ಬದುಕಿರಬೇಕು. ಜನರ ಪರವಾಗಿ ಹಿಂದುಳಿದವರ ಪರವಾಗಿ ಹೋರಾಟ ಮಾಡಲಿ. ನಾವಂತೂ ಬೇಡ ಅನ್ನೋದಿಲ್ಲ. ಯಾವ ಕಾರಣಕ್ಕೂ ನೀವು ಸಾಯೋದೂ ಬೇಡ, ನಿಮ್ಮ ಹೆಣ ಬಿಜೆಪಿ ಕಚೇರಿಗೆ ಬರೋದು ಬೇಡ. ಆದರೆ, ನೀವು ಮೊದಲ ಸಲ ಸರಕಾರಿ ಕಾರು ಹತ್ತಿದ್ದು, ಬಿಜೆಪಿ ಬೆಂಬಲಿತ ಸರ್ಕಾರದಿಂದ ಎಂಬುದನ್ನ ನೆನಪು ಮಾಡಿಕೊಳ್ಳಿ ಎಂದು ಟಾಂಗ್ ನೀಡಿದರು.

ರಾಮಕೃಷ್ಣ ಹೆಗಡೆ ಸರ್ಕಾರ ಬಂದಾಗ ನೀವು ಅಂದು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದೀರಿ. ಅಂದು ಬಿಜೆಪಿಯ 19 ಶಾಸಕರು ಬೇಷರತ್ ಬೆಂಬಲ ನೀಡಿದ್ದಕ್ಕೆ ಕಾಂಗ್ರೆಸ್ಸೇತರ ಸರ್ಕಾರವಾಗಿ ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರ ಅಧಿಕಾರಕ್ಕೆ ಬಂತು. ಅಂದು ನೀವು ಮೊದಲನೇ ಸರಕಾರಿ ಕಾರ್ ಪಡೆದಿದ್ರಿ. ಅಂದು ಕೋಮುವಾದಿ ಪಕ್ಷ ಎಂದು ನಿಮಗೆ ಗೊತ್ತಾಗಲಿಲ್ವಾ? ಆ ಸರ್ಕಾರಿ ಕಾರ್ ಹತ್ತಿ ಮಜಾ ಮಾಡುವಾಗ ಎಲ್ಲಿ ಹೋಗಿತ್ತು ನಿಮ್ಮ ಸಿದ್ದಾಂತ? ಎಂದು ಕಿಡಿಕಾರಿದರು.
ಬಿಜೆಪಿ ಬೆಂಬಲ ತೆಗೆದುಕೊಂಡು ನೀವು ಸಮಾಜವಾದಿಯಾದ್ರಿ, ನಾವು ಈಗ ಕೋಮುವಾದಿ ಅಂತ ಕರೆಸಿಕೊಳ್ಳುತ್ತಿದ್ದೇವೆ. ಜೆಎಚ್ ಪಟೇಲ್ ಸರ್ಕಾರ ಕೂಡ ಬಿಜೆಪಿ ಬೆಂಬಲ ಪಡೆದುಕೊಂಡಿತ್ತು. ಅಂದು ಸಿದ್ದರಾಮಯ್ಯನವರಿಗೆ ಬಿಜೆಪಿ ಕೋಮುವಾದಿ ಎಂದು ಗೊತ್ತಾಗಲಿಲ್ವಾ? ಅವಕಾಶವಾದಿ ರಾಜಕಾರಣಿ ಸಿದ್ದರಾಮಯ್ಯಗೆ ಮಜಾ ಮಾಡೋದಕ್ಕೆ ಬಿಜೆಪಿ ಬೇಕಿತ್ತಾ? ಆಗ ಸಮಾಜವಾದಿತನ ಇತ್ತಾ ಎಂದು ವಾಗ್ದಾಳಿ ನಡೆಸಿದರು.
ನಿಮ್ಮ ಹೆಣ ನಮಗೆ ಬೇಡ. ನೀವು ಬೇಗ ಸಾಯಬೇಡಿ. ಬಹಳ ದಿನ ಬದುಕಿ ಎಂದು ಮತ್ತೆ ನಾನು ಹೇಳುತ್ತೇನೆ. ಆದರೆ, ನಮ್ಮ ಬಲದಿಂದ ಅಂದು ಸರ್ಕಾರಿ ಕಾರ್ ಪಡೆದಿದ್ದಕ್ಕಾಗಿ ಇಂದು ನೀವು ರಾಜ್ಯದ ಜನರ ಕ್ಷಮೆ ಕೇಳಬೇಕು. ಅಂದು ಬಿಜೆಪಿ ಬೆಂಬಲ ಪಡೆದಿದ್ದು ನಿಜ ಎಂದು ಜನರಿಗೆ ಹೇಳಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ ಎಂದು ಕೆಎಸ್ ಈಶ್ವರಪ್ಪ ಹೇಳಿದರು.
ಬಿಜೆಪಿ ಕೋಮುವಾದಿ ಅಂತಾ ಸಿದ್ದರಾಮಯ್ಯಗೆ ಯಾವಾಗ ಗೊತ್ತಾಯಿತು?
ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಅನೇಕ ಸುಳ್ಳುಗಳನ್ನ ಹೇಳುತ್ತಾರೆ. ಆದರೆ, ಅವುಗಳ ಬಗ್ಗೆ ನಾನು ಚಕಾರ ಎತ್ತೋದಿಲ್ಲ. ಆದರೆ, ಬಿಜೆಪಿಯನ್ನು ಕೋಮುವಾದಿ ಎಂದು ಘೋಷಣೆ ಮಾಡಿಕೊಂಡು ಓಡಾಡುತ್ತಿದ್ದಾರೆ. ಆದರೆ, ಬಿಜೆಪಿ ಕೋಮುವಾದಿ ಎಂದು ಸಿದ್ದರಾಮಯ್ಯ ಅಂತವರಿಗೆ ಗೊತ್ತಾಗಿದ್ದು ಯಾವಾಗ? ಅಧಿಕಾರ ಪಡೆದುಕೊಂಡು ಬೆಂಬಲಿತ ಸರ್ಕಾರ ಜೊತೆಗೆ ಸವಲತ್ತು ಅನುಭವಿಸುವಾಗ ಏಕೆ ಬಿಜೆಪಿ ಕೋಮುವಾದಿ ಎನಿಸಲಿಲ್ಲ. ಈಗ ನಿಮಗೆ ಬಿಜೆಪಿ ಕೋಮುವಾದಿ ಅಂತ ಅನ್ನಿಸಿರುವುದು ದುರಂತ ಎಂದು ಈಶ್ವರಪ್ಪ ಕಿಡಿಕಾರಿದರು.
Former Minister KS Eshwarappa has said that Chief Minister Siddaramaiah should not die early and neither he nor his party wants it.He was responding to a question on Siddaramaiah's statement in Shivamogga on Tuesday that "not even my dead body will go to the BJP office".
23-06-26 05:58 pm
HK News Staffer
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
Cross Voting Row, Vijayendra: ಅಡ್ಡ ಮತದಾನ ; ಧರ...
21-06-26 02:18 pm
23-06-26 12:21 pm
HK News Staffer
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ;...
18-06-26 07:17 pm
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
23-06-26 06:02 pm
HK News Staffer
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
23-06-26 02:15 pm
HK News Staffer
ಮಗಳಿಗೆ ಬುದ್ಧಿ ಹೇಳಿದ್ದೇ ತಪ್ಪಾಯ್ತಾ ? ಲಿವ್-ಇನ್...
23-06-26 12:57 pm
ಅಕ್ರಮ ಪೊಲೀಸ್ ಕ್ಲಿಯರೆನ್ಸ್ ; ಮೂರೇ ದಿನದಲ್ಲಿ ಸಿಸಿ...
22-06-26 10:21 pm
ಉಡುಪಿಯಲ್ಲಿ ಮಕ್ಕಳಿಲ್ಲದ ದಂಪತಿಗೆ ಮಗು ಮಾರಾಟ; ವೈದ್...
22-06-26 08:01 pm
ಹಂದಿ ಜ್ವರಕ್ಕೆ ಕಾರವಾರದ ವ್ಯಕ್ತಿ ಮಂಗಳೂರಿನಲ್ಲಿ ಬಲ...
22-06-26 07:58 pm