ಬ್ರೇಕಿಂಗ್ ನ್ಯೂಸ್
01-09-23 06:13 pm HK News Desk ಕರ್ನಾಟಕ
ಕೋಲಾರ, ಸೆಪ್ಟೆಂಬರ್ 1: ಮಾನವ ಹಕ್ಕು ಸಂಘಟನೆ ಹೆಸರಲ್ಲಿ ವಿಧವೆ ಮಹಿಳೆಯೊಬ್ಬರಿಗೆ 15 ಲಕ್ಷ ರೂಪಾಯಿ ಹಣ ವಂಚನೆ ನಡೆಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಈ ಕುರಿತು ವಂಚನೆಗೊಳಗಾದ ಬೆಂಗಳೂರು ಕಾಡುಗೋಡಿ ಮೂಲದ ಮಹಿಳೆ ಶಾಂತಕುಮಾರಿ ಎಂಬುವರು 15 ಲಕ್ಷ lರೂಪಾಯಿ ವಂಚನೆ ಮಾಡಿರುವ ನ್ಯಾಷನಲ್ ಆ್ಯಂಟಿ ಕ್ರೈಂ ಮತ್ತು ಹ್ಯೂಮನ್ ರೈಟ್ಸ್ ಸಂಘಟನೆಯ ರಾಜ್ಯಾಧ್ಯಕ್ಷ ಜಾನ್ ಸಾಮುವೆಲ್ ಕಿಮ್, ಜೆ ವಿರುದ್ಧ ಕೋಲಾರ ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಜೊತೆಗೆ ಸಂಘಟನೆ ಹೆಸರಲ್ಲಿ ಅಮಾಯಕ ಜನರನ್ನು ವಂಚಿಸುತ್ತಿರುವ ವ್ಯಕ್ತಿ ವಿರುದ್ಧ ಕ್ರಮ ಕೈಗೊಂಡು ನಮ್ಮ ಹಣ ವಾಪಸ್ ಕೊಡಿಸುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವಂಚನೆಗೊಳಗಾದ ಮಹಿಳೆ ಶಾಂತಕುಮಾರಿ, ಜಾನ್ ಸಾಮುವೆಲ್ ಎಂಬುವರು ಹ್ಯೂಮನ್ ರೈಟ್ಸ್ ಸಂಘಟನೆ ಹೆಸರಲ್ಲಿ ಅಮಾಯಕ ಜನರನ್ನು ಯಾಮಾರಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಾನು ಸೇರಿದಂತೆ ಹಲವಾರು ಜನ ಇವನ ವಂಚನೆಗೆ ಒಳಗಾಗಿದ್ದು ಮತ್ತಷ್ಟು ಜನ ಜಾನ್ ಸಾಮುವೆಲ್ ಮೋಸದ ಜಾಲಕ್ಕೆ ಸಿಲಕಬಾರದು ಎಂದು ಪೋಲಿಸರಿಗೆ ದೂರ ನೀಡಲಾಗಿದೆ ಹಾಗೆಯೇ ಇವರ ವಿರುದ್ಧ ಜನರು ಎಚ್ಚೆತ್ತುಕೊಳ್ಳಬೇಕೆಂದು ಹೋರಾಟ ಮಾಡಲು ಮುಂದೆ ಬಂದಿದ್ದೇನೆ ಎಂದರು.
ಪರಿಚಯಸ್ಥರ ಮೂಲಕ ಇವರು ಸಂಘಟನೆ ಸೇರಿದ ವೇಳೆ ನನಗೆ ಪೊಲೀಸ್ ಹಿರಿಯ ಅಧಿಕಾರಿಗಳು, ಸಚಿವರು, ಅಧಿಕಾರಿಗಳು, ನ್ಯಾಯಾಧೀಶರು ಪರಿಚಯ ಇದ್ದಾರೆಂದು ನಮ್ಮನ್ನು ನಂಬಿಕೆ ಬರುವಂತೆ ಮಾತನಾಡಿದ ವೇಳೆ ತಕರಾರು ಇದ್ದ ನಮ್ಮ ಜಮೀನಿನ ಸಮಸ್ಯೆ ಹೇಳಿದಾಗ ನನಗೆ ತಹಸೀಲ್ದಾರ್ ಗೊತ್ತು ಕೂಡಲೇ ಬಗೆಹರಿಸುತ್ತೇನೆ ಎಂದು ಹೇಳಿದ್ದನ್ನು ನಂಬಿ ತನ್ನ ಮನೆಯ ದಾಖಲೆಗಳನ್ನು ಬ್ಯಾಂಕ್ ನಲ್ಲಿಟ್ಟು ಸಾಲ ಪಡೆದು ಏಳು ಲಕ್ಷ ಹಣ ಕೊಟ್ಟಿದೆ.
ನಂತರ ಗಾರ್ಮೆಂಟ್ಸ್ ಫ್ಯಾಕ್ಟರಿ ಮಾಡಿಕೊಡುತ್ತೇನೆ ಎಂದು ಹೇಳಿ ಮತ್ತೆ 5 ಲಕ್ಷ ರೂಪಾಯಿ ಹಣ ಪಡೆದುಕೊಂಡ. ನಂತರ ತಮ್ಮ ಮನೆಯ ಪತ್ರಗಳ ಮೇಲೆ ಸಹಿ ಹಾಕಿಸಿಕೊಂಡು ಇದೀಗ ನಾವು ವಾಸವಿರುವ ಮನೆಯನ್ನು ಯಾರಿಗೋ ಮಾರಾಟ ಮಾಡಲು ಸಂಚು ರೂಪಿಸಿದ್ದಾರೆ.
ಹಲವರು ಈತನಿಂದ ಮೋಸ ;
ಅನುಮಾನ ಬಂದ ಜಾನ್ ಸಾಮುವೆಲ್ ವಿರುದ್ಧ ಪರಿಶೀಲನೆ ನಡೆಸಿದಾಗ ಹಲವಾರು ಮಹಿಳೆಯರು ಇವನಿಂದ ಮೋಸ ಹೋಗಿದ್ದಾರೆ ಎಂಬುದು ತಿಳಿದು ಬಂದಿದೆ. ವಂಚನೆಗೊಳಗಾದವರು ಇವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದರೆ ಬೆದರಿಕೆ ಒಡ್ಡುವ ಕೆಲಸ ಮಾಡುತ್ತಿದ್ದಾನೆ ಎಂದು ಆಪಾದಿಸಿದರು. ಸಂಘಟನೆ ಹೆಸರಲ್ಲಿ ಜನರು ಮೋಸ ಹೋಗಬಾರದು ಅದು ನಿಜವಾದ ಹ್ಯೂಮನ್ ರೈಟ್ಸ್ ಸಂಘಟನೆ ಅಲ್ಲ ನಕಲಿ ಸಂಘಟನೆ ಎಂದು ಮನವಿ ಮಾಡಿದರು.
ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಕಿರಣಬಾಬು, ಸುಂದರ್ ರಾಜು ಉಪಸ್ಥಿತರಿದ್ದರು.
National Anti crime and Human rights of india president John Samuel Kim from Kolar alleged of fraud of 15 lakhs, case filed in Bangalore. Shanthakumari from Bangalore has filed a cheating case in the name of Human rights against John Samuel.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 10:59 pm
HK News Desk
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am