ಬ್ರೇಕಿಂಗ್ ನ್ಯೂಸ್
24-08-23 09:21 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 24: ಯಾವ ಪುರುಷಾರ್ಥಕ್ಕೆ ಈ ಕೋರ್ ಕಮಿಟಿಯನ್ನು ಉಳಿಸಿಕೊಂಡಿದ್ದೀರಿ.. ಕೋರ್ ಕಮಿಟಿ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಕವಡೆ ಕಾಸಿನ ಕಿಮ್ಮತ್ತು ಇದೆಯೇ.. ಈತನಕ ಕೋರ್ ಕಮಿಟಿ ಸಭೆಯ ನಿರ್ಣಯ ಜಾರಿಗೆ ಬಂದಿದ್ದು ಇದೆಯೇ ಎಂದು ಮಾಜಿ ಮುಖ್ಯಮಂತ್ರಿಯೊಬ್ಬರು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಹಿರಿಯ ನಾಯಕರನ್ನೇ ತರಾಟೆಗೆತ್ತಿಕೊಂಡ ಘಟನೆ ನಡೆದಿದ್ದು, ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸೋಮವಾರ ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿತ್ತು. ಕಮಿಟಿಯ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿಯೊಬ್ಬರು ಕರ್ನಾಟಕವನ್ನು ಕಡೆಗಣಿಸುತ್ತಿರುವ ರಾಷ್ಟ್ರೀಯ ನಾಯಕರ ನಡೆಯ ಬಗ್ಗೆ ತೀವ್ರ ಆಕ್ಷೇಪ ಎತ್ತಿದ್ದಾರೆ. ಅಲ್ಲದೆ, ರಾಜ್ಯ ನಾಯಕರ ಅಸಹಾಯಕತೆ ಬಗ್ಗೆಯೂ ಕಿಡಿ ನುಡಿಗಳನ್ನು ಆಡಿದ್ದಾರೆಂದು ತಿಳಿದುಬಂದಿದೆ.
ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ರಾಜ್ಯ ಬಿಜೆಪಿ ನಾಯಕರೇ ಮಕಾಡೆ ಮಲಗಿಬಿಟ್ಟಿದ್ದಾರೆ. ಇದಲ್ಲದೆ, ರಾಷ್ಟ್ರೀಯ ನಾಯಕರು ರಾಜ್ಯ ಬಿಜೆಪಿಯನ್ನೇ ಕಡೆಗಣಿಸಿದ್ದು, ಯಾವುದೇ ನಿರ್ಧಾರವನ್ನೂ ಕೈಗೊಳ್ಳದೆ ನಿರ್ಲಕ್ಷ್ಯ ತೋರಿರುವ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ತೀವ್ರ ಅಸಹನೆ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಅಸಹನೆ, ಸಿಟ್ಟನ್ನು ನೋಡಿದ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ ತೀವ್ರ ವಿಚಲಿತರಾಗಿದ್ದಾರೆ.
ಸಭೆಯ ಆರಂಭದಲ್ಲಿಯೇ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರನ್ನು ಮಾಜಿ ಮುಖ್ಯಮಂತ್ರಿ ತರಾಟೆಗೆ ಎತ್ತಿಕೊಂಡಿದ್ದಾರೆ. ಜೋಷಿಯವರೇ ಸದ್ಯಕ್ಕೆ ನೀವೇ ನಮ್ಮ ದೆಹಲಿ ಪ್ರತಿನಿಧಿಯಾಗಿದ್ದೀರಿ. ಆದರೆ ನೀವು ಏನು ಮಾಡುತ್ತಿದ್ದೀರಿ. ಫಲಿತಾಂಶ ಪ್ರಕಟವಾಗಿ ಮೂರು ತಿಂಗಳು ಕಳೆದರೂ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕವಾಗಿಲ್ಲ ಎಂದರೆ ಏನರ್ಥ. ನೋಡಿ ಜನ ನಿಮ್ಮ ಬಗ್ಗೆಯೂ ಮಾತನಾಡಲು ಪ್ರಾರಂಭಿಸಿದ್ದಾರೆ. ದಿವಂಗತ ಅನಂತ ಕುಮಾರ್ ಜೊತೆಗೆ ನಿಮ್ಮನ್ನು ಹೋಲಿಕೆ ಮಾಡುತ್ತಿದ್ದಾರೆ. ಅನಂತ ಕುಮಾರ್ ಬದುಕಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದು ಬಹಿರಂಗವಾಗಿಯೇ ನಿಮ್ಮ ಬಗ್ಗೆ ವ್ಯಂಗ್ಯ ಮಾಡುತ್ತಿದ್ದಾರೆ. ಮೊದಲು ಈ ಬಗ್ಗೆ ದೆಹಲಿ ನಾಯಕರಿಗೆ ಮನವರಿಕೆ ಮಾಡಿಕೊಡಿ ಎಂದು ಎಚ್ಚರಿಕೆ ನೀಡಿದ್ದಾರೆಂದು ತಿಳಿದುಬಂದಿದೆ.
ಇದೇ ವೇಳೆ, ಇನ್ನಿಬ್ಬರು ನಾಯಕರು ಕೂಡ ರಾಷ್ಟ್ರೀಯ ನಾಯಕರಿಗೆ ರಾಜ್ಯ ಬಿಜೆಪಿಯ ಬಗ್ಗೆ ವಾಸ್ತವ ತಿಳಿಸಿ ಎಂದು ಜೋಷಿಯವರಿಗೆ ಒತ್ತಡ ಹೇರಿದ್ದಾರೆ. ಆಗ ಒಂದಿಬ್ಬರು ಹಿರಿಯ ನಾಯಕರು ದಿಲ್ಲಿಗೆ ಬನ್ನಿ. ನಾವು ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ವಾಸ್ತವ ತಿಳಿಸೋಣ ಎಂದು ಜೋಷಿ ಭರವಸೆ ನೀಡಿದ್ದಾರೆ. ಇಷ್ಟಾದರೂ ಸುಮ್ಮನಾಗದ ಮಾಜಿ ಮುಖ್ಯಮಂತ್ರಿ, ನಾವು ಯಾಕಾಗಿ ಈ ಕೋರ್ ಕಮಿಟಿ ಸಭೆ ನಡೆಸಬೇಕು. ಇದೊಂದು ಕಣ್ಣೊರೆಸುವ ತಂತ್ರ ಅಷ್ಟೇ. ಇದು ನಾಮ್ಕೇವಾಸ್ತೆ ಸಭೆ. ನಾವು ಈ ಸಮಿತಿಯಲ್ಲಿ ಕೈಗೊಂಡ ಯಾವುದಾದ್ರೂ ನಿರ್ಣಯ ಜಾರಿಯಾಗಿದ್ದು ಇದೆಯೇ.. ವಿಧಾನ ಪರಿಷತ್, ರಾಜ್ಯಸಭೆಗೆ ನಾವು ಕಳಿಸಿದ ಹೆಸರನ್ನು ಮೇಲಿನವರು ಒಪ್ಪಿಕೊಂಡಿದ್ದು ಇದೆಯೇ.. ಹಾಗಿದ್ದ ಮೇಲೆ ಈ ಕೋರ್ ಕಮಿಟಿ ಸಭೆ ನಡೆಸುವುದಾದರೂ ಯಾಕೆ.. ಮೊದಲು ಈ ಕೋರ್ ಕಮಿಟಿಯನ್ನೇ ವಿಸರ್ಜನೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಗಿ ತಿಳಿದುಬಂದಿದೆ.
ಮೊನ್ನೆ ನಡೆದ ಸಭೆಯಲ್ಲಿ ವಿಪಕ್ಷ ನಾಯಕನ ಬಗ್ಗೆ ಆಗಲೀ, ರಾಜ್ಯಾಧ್ಯಕ್ಷರ ಆಯ್ಕೆ ವಿಚಾರ ಆಗಲೀ ಚರ್ಚೆಗೆ ಬಂದಿರಲಿಲ್ಲ. ಬದಲಿಗೆ, ಕೋರ್ ಕಮಿಟಿ ಸದಸ್ಯರೇ ಒಬ್ಬರಿಗೊಬ್ಬರು ಅಸಹನೆ ವ್ಯಕ್ತಪಡಿಸಿದ್ದು, ರಾಷ್ಟ್ರೀಯ ನಾಯಕರು ತಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ಆಕ್ಷೇಪ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
Former CM slams about BJP core committee meeting, says whats the use of core committee, slams leaders. Amid trading of barbs between the Congress and the BJP over the speculated desertions from the saffron party, the former Minister and BJP legislator S.T. Somashekar and Janata Dal (Secular) leader Ayanur Manjunath met Congress leaders, raising speculation over their political moves.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
04-09-25 11:07 pm
Mangalore Correspondent
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
Mangalore, Loudspeaker Ban: ರಾತ್ರಿ ವೇಳೆ ಧ್ವನಿ...
04-09-25 07:39 pm
KMC Attavar Performs Rare, Life-Saving Surger...
03-09-25 11:03 pm
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm