ಬ್ರೇಕಿಂಗ್ ನ್ಯೂಸ್
07-11-20 02:48 pm Bangalore Correspondent ಕರ್ನಾಟಕ
ಬೆಂಗಳೂರು, ನವೆಂಬರ್ 07: ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಕೆಎಎಸ್ ಅಧಿಕಾರಿ ಡಾ.ಬಿ. ಸುಧಾ ಎಂಬವರ ಮನೆ ಮತ್ತು ಕಚೇರಿ ಸೇರಿ ಏಕಕಾಲದಲ್ಲಿ ಆರು ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಹಿಂದೆ ಬೆಂಗಳೂರಿನಲ್ಲಿ ಬಿಡಿಎ ಭೂಸ್ವಾಧೀನಾಧಿಕಾರಿಯಾಗಿದ್ದ ಡಾ.ಸುಧಾ, ಈಗ ಐಟಿ ಬಿಟಿ ಕಚೇರಿಯಲ್ಲಿ ಅಧಿಕಾರಿಯಾಗಿದ್ದಾರೆ. ಬಿಡಿಎ ಅಧಿಕಾರಿಯಾಗಿದ್ದ ವೇಳೆ ಸಾಕಷ್ಟು ಅವ್ಯವಹಾರ ಮಾಡಿಕೊಂಡು ಅಕ್ರಮ ಆಸ್ತಿ ಗಳಿಸಿದ್ದಾರೆಂದು ಸಾರ್ವಜನಿಕರೊಬ್ಬರು ನ್ಯಾಯಾಲಯಕ್ಕೆ ದೂರು ನೀಡಿದ್ದರು. ಕೋರ್ಟ್ ನಿರ್ದೇಶನದಂತೆ ಭ್ರಷ್ಟಾಚಾರ ನಿಗ್ರಹ ದಳದ ಬೆಂಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ವಿವಿಧ ಜಿಲ್ಲೆಗಳ ಎಸಿಬಿ ಘಟಕದ ಅಧಿಕಾರಿಗಳು ಇಂದು ಬೆಳಗ್ಗೆಯೇ ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಕೊಡಿಗೇಹಳ್ಳಿ ಬಳಿಯಲ್ಲಿರುವ ನಿವಾಸ, ಯಲಹಂಕದ ನೆಹರೂ ಶಿವನಹಳ್ಳಿ ಎಂಬಲ್ಲಿ ಫ್ಯ್ಲಾಟ್, ಬಳ್ಳಾರಿ ರಸ್ತೆ ಬ್ಯಾಟರಾಯನಪುರದಲ್ಲಿರುವ ಪರಿಚಿತರ ಮನೆ, ಮೈಸೂರು ನಗರ ಶ್ರೀರಾಂಪುರದಲ್ಲಿರುವ ಪರಿಚಿತರ ಮನೆ, ಉಡುಪಿ ಜಿಲ್ಲೆಯ ಹೆಬ್ರಿ ರಸ್ತೆಯ ಚಾಂತಾರು ತೆಂಕಬೆಟ್ಟಿನಲ್ಲಿರುವ ವಾಸದ ಮನೆ ಹಾಗೂ ಶಾಂತಿನಗರದಲ್ಲಿರುವ ಐಟಿ ಬಿಟಿ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಕೇಜಿಗಟ್ಟಲೆ ಬಂಗಾರ, ಚಿನ್ನದ ಡಾಬಾ ಪತ್ತೆ
ಕೊಡಿಗೇಹಳ್ಳಿಯ ಮನೆಗೆ ದಾಳಿ ನಡೆಸಿದ್ದ ಅಧಿಕಾರಿಗಳಿಗೆ ಅಲ್ಲಿನ ಆಸ್ತಿ ನೋಡಿ ಶಾಕ್ ಆಗಿದೆ. ಮನೆಯಲ್ಲಿ ಕೇಜಿಗಟ್ಟಲೆ ಬಂಗಾರ, 10 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಚಿನ್ನದ ಡಾಬಾ, ಕಾಸಿನ ಸರ, ಉಂಗುರ ಸೇರಿ ಆಭರಣಗಳನ್ನು ಜಪ್ತಿ ಮಾಡಲಾಗಿದೆ. ಚಿನ್ನದ ಸರಗಳು ಮತ್ತು ಕಿವಿಯೋಲೆಗಳ ರಾಶಿಯೇ ಪತ್ತೆಯಾಗಿದೆ. ಸತತ 5 ಗಂಟೆಯಿಂದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಬಗೆದಷ್ಟು ಆಸ್ತಿ ಪತ್ತೆಯಾಗುತ್ತಿದೆ.
ಗಂಡನ ಹೆಸರಲ್ಲಿ ಉದ್ಯಮದಲ್ಲಿ ಭಾರೀ ಹೂಡಿಕೆ
ಉಡುಪಿ ಜಿಲ್ಲೆಯ ಬಾರ್ಕೂರಿನ ಸ್ಟೋಯಿನಿ ಪಾಯಸ್ ಎಂಬವರನ್ನು ಮದುವೆಯಾಗಿದ್ದ ಡಾ.ಸುಧಾ, ಉಡುಪಿಯಲ್ಲೂ ಈ ಹಿಂದೆ ಭೂ ಸ್ವಾಧೀನಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಈ ವೇಳೆ, ಉಡುಪಿ ಸೇರಿ ಹಲವು ಕಡೆ ಹಣ ಹೂಡಿಕೆ ಮಾಡಿದ್ದ ಸುಧಾ ಗಂಡನ ಹೆಸರಲ್ಲಿ ಹತ್ತಾರು ಉದ್ಯಮಗಳನ್ನು ಹೊಂದಿದ್ದರು. ಕುಂದಾಪುರದ ಕಂದಾವರದಲ್ಲಿ ಒಂದೂವರೆ ಕೋಟಿ ಬೆಲೆಯ ಆಸ್ತಿ ಹೊಂದಿರುವ ಸುಧಾ, ಬ್ರಹ್ಮಾವರದ ವಡ್ಡರ್ಸೆಯಲ್ಲಿ 82 ಲಕ್ಷ ರೂ. ಬೆಲೆಯ ಸೈಟ್ ಹೊಂದಿದ್ದಾರೆ ಎನ್ನಲಾಗುತ್ತಿದೆ.
Sleuths of Anti-Corruption Bureau (ACB) on Saturday raided houses of KAS officer B Sudha and seized 10 lakh cash, gold, documents pertaining to properties which are allegedly disproportionate to her known sources of income.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
06-08-25 01:06 pm
Wecare
Puttur Doctor Dr Keerthana Joshi, Suicide, Ma...
05-08-25 10:34 pm
Dharmasthala Case, Update, 11-12 spot: ಧರ್ಮಸ್...
05-08-25 08:22 pm
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
06-08-25 11:23 am
Mangalore Correspondent
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm