ಬ್ರೇಕಿಂಗ್ ನ್ಯೂಸ್
14-08-23 06:04 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 14: ವಿವಾದಾತ್ಮಕ ಹೇಳಿಕೆಯಿಂದಾಗಿ ಜಾತಿ ನಿಂದನೆ ಆರೋಪದ ಪ್ರಕರಣ ಎದುರಿಸುತ್ತಿರುವ ಚಿತ್ರನಟ ಉಪೇಂದ್ರಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿ ಚಿತ್ರನಟ ಉಪೇಂದ್ರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಮತ್ತು ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಉಪೇಂದ್ರ ಅಲಿಯಾಸ್ ಬಿ.ಎಂ. ಉಪೇಂದ್ರ ಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಉಪೇಂದ್ರ ಪರ ಹಿರಿಯ ವಕೀಲ ಉದಯ ಹೊಳ್ಳ ಅವರು, ಅರ್ಜಿದಾರರು ಗಾದೆ ಮಾತನ್ನು ಮಾತ್ರವೇ ಉಲ್ಲೇಖಿಸಿದ್ದಾರೆ. ಮಾತಿನ ಹಿಂದೆ ಬೇರೆ ಯಾವುದೇ ದುರುದ್ದೇಶ ಇರಲಿಲ್ಲ. ಆದ್ದರಿಂದ, ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಬರಿ ಇದೊಂದೇ ಗಾದೆ ಮಾತು ಪ್ರಯೋಗಿಸಿದರೋ ಹೇಗೆ ಎಂಬುದನ್ನು ಕೇಳಿ ಎರಡೂ ಕಡೆಯ ವಕೀಲರಿಂದ ಪ್ರಕರಣದ ವಿವರ ಕೇಳಿದರು. ನಂತರ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿ ಎಫ್ ಐ ಆರ್ ಗೆ ಮಧ್ಯಂತರ ತಡೆ ನೀಡಿ ಆದೇಶ ಮಾಡಿದ್ದಾರೆ. ಇದರೊಂದಿಗೆ ಬಂಧನ ಭೀತಿ ಎದುರಿಸುತ್ತಿದ್ದ ಉಪೇಂದ್ರ ನಿಟ್ಟುಸಿರು ಬಿಟ್ಟಿದ್ದಾರೆ. ಉಪೇಂದ್ರ ವಿರುದ್ಧ ಬೆಂಗಳೂರಿನ ಸಿ.ಕೆ. ಅಚ್ಚುಕಟ್ಟು ಮತ್ತು ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೊದಲ ದೂರನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಧುಸೂದನ್ ಎಂಬವರು ನೀಡಿದ್ರೆ, ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಭೈರಪ್ಪ ಹರೀಶ್ ಕುಮಾರ್ ಎರಡನೇ ದೂರು ನೀಡಿದ್ದರು. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಉಪೇಂದ್ರ ಅವರಿಗೆ ನೋಟಿಸ್ ನೀಡಿದ್ದರು. ಇದಲ್ಲದೆ, ವಿವಿಪುರಂ ವಿಭಾಗದ ಎಸಿಪಿ ನಾಗರಾಜ್ ನೇತೃತ್ವದ ಪೊಲೀಸರ ತಂಡವು ಕತ್ರಿಗುಪ್ಪೆಯಲ್ಲಿ ಉಪೇಂದ್ರ ನಿವಾಸಕ್ಕೆ ತೆರಳಿ ಸ್ಥಳ ಮಹಜರು ನಡೆಸಿದ್ದರು.
ಫೇಸ್ಬುಕ್ ಲೈವ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಉಪೇಂದ್ರ ಅವರು, "ಊರೆಂದರೆ ಹೊಲಗೇರಿ ಕೂಡ ಇರುತ್ತೆ" ಎಂದು ಹೇಳಿದ್ದರು. ತನ್ನ ಊರಿನ ಬಗ್ಗೆ ವಿವರಣೆ ನೀಡುತ್ತಿದ್ದ ಸಂದರ್ಭದಲ್ಲಿ ಈ ರೀತಿಯ ಶಬ್ದಗಳನ್ನು ಬಳಕೆ ಮಾಡಿದ್ದು ದಲಿತರನ್ನು ಅವಮಾನಿಸಿದಂತೆ ಎಂದು ಕೆಲವರು ಆಕ್ಷೇಪಿಸಿದ್ದರು. ದಲಿತ ಸಮುದಾಯದ ಜಾತಿ ಭಾವನೆಗಳಿಗೆ ಘಾಸಿ ಉಂಟು ಮಾಡಿದ್ದಾರೆ. ಒಬ್ಬ ನಟನಾಗಿ ರಾಜ್ಯದಾದ್ಯಂತ ಹೆಸರು ಮಾಡಿರುವ ಉಪೇಂದ್ರ ಎಲ್ಲರಿಗೂ ಮಾದರಿಯಾಗಿ ಇರಬೇಕಿತ್ತು. ನಟನನ್ನು ಅನುಕರಣೆ ಮಾಡುವವರು ಇದನ್ನೇ ಮುಂದುವರೆಸಿದಲ್ಲಿ ಸಾರ್ವಜನಿಕ ಸ್ವಾಸ್ಥ್ಯ ಹಾಳಾಗುವ ಸಾಧ್ಯತೆ ಇರುತ್ತದೆ ಎಂದು ಬೆಂಗಳೂರಿನ ಸಮತಾ ಸೈನಿಕ ದಳದವರು ಹಿಂದುಳಿದ ವರ್ಗದ ಸಮಾಜ ಕಲ್ಯಾಣ ಇಲಾಖೆಗೆ ದೂರು ನೀಡಿದ್ದರು.
After two First Information Reports (FIRs) were filed against Kannada actor Upendra for alleged derogatory comments about Dalits during a Facebook Live session, Karnataka police visited his residence, issuing an investigative notice. However, Upendra obtained a temporary stay from the Karnataka High Court regarding the investigation.
18-04-26 05:59 pm
HK News Staffer
ದುಬೈನಲ್ಲಿ ಕಚೇರಿ, ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ...
18-04-26 02:43 pm
ರಾಹುಲ್ ಗಾಂಧಿ ದ್ವಿಪೌರತ್ವ ; ಬ್ರಿಟಿಷ್ ಪ್ರಜೆಯೆಂದು...
18-04-26 10:20 am
ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ...
17-04-26 07:27 pm
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
18-04-26 11:39 pm
HK News Desk
ಗಲ್ಫ್ ಸಂಘರ್ಷ ಸದ್ಯಕ್ಕೆ ತೆರೆ ; ಹೊರ್ಮುಜ್ ಜಲಸಂಧಿ...
18-04-26 10:31 am
ದುರಂತ ಅಂತ್ಯ ಕಂಡ ವಿಚ್ಛೇದನ ಕಲಹ ; ಪತ್ನಿಗೆ ಗುಂಡಿಕ...
17-04-26 08:08 pm
ಹೊಟ್ಟೆನೋವೆಂದು ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿಗೆ ಬಿ...
17-04-26 11:27 am
250 ರೋಹಿಂಗ್ಯಾಗಳಿದ್ದ ಬೋಟ್ ಅಂಡಮಾನ್ ಸಮುದ್ರದಲ್ಲಿ...
16-04-26 01:09 pm
20-04-26 01:02 pm
HK News Staffer
ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳು ಖಾಸಗಿ ತೆಕ್ಕ...
19-04-26 10:41 pm
ಪುತ್ತೂರು ಜಾತ್ರೆ ; ಸುಡುಮದ್ದು ಉತ್ಸವದಲ್ಲಿ ಬೆಂಕಿ...
18-04-26 11:31 pm
ಕುಂಪಲದಲ್ಲಿ ಏಕಾಏಕಿ ಕುಸಿದು ಬಿದ್ದ ಭಾರೀ ಗಾತ್ರದ ಆವ...
18-04-26 11:09 pm
ದಾವಣಗೆರೆ ಫಲಿತಾಂಶ ಏನಾಗುತ್ತೆಂದು ಹೇಳಲು ನಾನು ಜ್ಯೋ...
18-04-26 08:10 pm
20-04-26 11:13 am
HK News Staffer
ಬೈಕಿನಲ್ಲಿ 46 ಲಕ್ಷ ಮೌಲ್ಯದ ಡ್ರಗ್ಸ್ ಇಟ್ಟುಕೊಂಡು ವ...
19-04-26 10:23 pm
ಶಿವಮೊಗ್ಗ ; ಹುಟ್ಟುಹಬ್ಬದ ಪಾರ್ಟಿ ವೇಳೆ ಚಿಕನ್ ಮೂಳೆ...
19-04-26 02:58 pm
15 ವರ್ಷಗಳ ಹಿಂದೆ ಜೈಲಿನಿಂದ ತಪ್ಪಿಸಿಕೊಂಡು ಮುಂಬೈ,...
19-04-26 02:24 pm
ಅಂಬ್ಲಮೊಗರು ; ಸ್ನೇಹಿತರೊಂದಿಗೆ ಕೆರೆ ನೀರಲ್ಲಿ ಆಟವಾ...
19-04-26 10:20 am