ಬ್ರೇಕಿಂಗ್ ನ್ಯೂಸ್
29-07-23 09:10 pm Mangalore Correspondent ಕರ್ನಾಟಕ
ಸುಳ್ಯ, ಜುಲೈ 29: ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಕಳೆದ ಮೂರು ವರ್ಷಗಳಿಂದ ದಿನಸಿ ಸಾಮಗ್ರಿಗಳನ್ನು ಯಾವುದೇ ಟೆಂಡರ್ ನಡೆಸದೆ ನಿಯಮಬಾಹಿರವಾಗಿ ಖರೀದಿಸಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಂಗಳೂರಿನ ಬಜಾರ್ ಒಂದರಿಂದ ಸಾಮಗ್ರಿ ಖರೀದಿಸಿದ್ದು, ಇದರಿಂದ ಪ್ರತಿವರ್ಷ ಸುಮಾರು 5 ಕೋಟಿ ರೂಪಾಯಿ ಹೆಚ್ಚುವರಿ ಪಾವತಿಯಾಗುತ್ತಿದ್ದು ದೇವಸ್ಥಾನಕ್ಕೆ ಭಾರೀ ನಷ್ಟ ಉಂಟಾಗುತ್ತಿದೆ ಎಂದು ಸುಬ್ರಹ್ಮಣ್ಯದ ಕಾಂಗ್ರೆಸ್ ಮುಖಂಡ ಹರೀಶ್ ಇಂಜಾಡಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೆಂಡರ್ ನಡೆಸದೇ ಸಾಮಗ್ರಿ ಖರೀದಿ ಬಗ್ಗೆ ಕಳೆದ ಬಿಜೆಪಿ ಸರಕಾರದ ಅವಧಿಯ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ಪ್ರಶ್ನಿಸಿದ್ದರು. ಅಂದಿನ ಮುಜರಾಯಿ ಸಚಿವರು ಕ್ರಮದ ಭರವಸೆ ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿಯಿಂದ ಹಾಲಿ ಮುಜರಾಯಿ ಸಚಿವರಿಗೆ ಮನವಿ ಸಲ್ಲಿಸಿದ ನಿಟ್ಟಿನಲ್ಲಿ ಸಚಿವರು ಆಯುಕ್ತರಿಗೆ ಪತ್ರ ಬರೆದು ನಿಯಮಾನುಸಾರ ಇ-ಹರಾಜು ನಡೆಸುವಂತೆ ಸೂಚನೆ ನೀಡಿದ್ದರು. ಅದರಂತೆ ಆಯುಕ್ತರಿಂದ ಜು.20ರಂದು ದೇವಳದ ಕಚೇರಿಗೆ ಪತ್ರ ಬಂದಿದ್ದರೂ, ಜು.24ರಂದು ನಡೆದ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಮಂಡಿಸದೇ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷರು ಉದ್ದೇಶಪೂರ್ವಕವಾಗಿ ಕಾನೂನುಬಾಹಿರ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದರು.
ಮೂರು ವರ್ಷಗಳಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಮಾಸ್ಟರ್ ಪ್ಲ್ಯಾನ್‌ನ ಯಾವುದೇ ಕಾಮಗಾರಿಗಳು ನಿರೀಕ್ಷಿತ ವೇಗದಲ್ಲಿ ನಡೆದಿಲ್ಲ. ಹಲವು ವರ್ಷಗಳಿಂದ ಸೋರುತ್ತಿರುವ ದೇವಳದ ಸುತ್ತುಪೌಳಿಯನ್ನು ನಿರ್ಮಿಸುವಲ್ಲಿ ಆಡಳಿತ ವಿಫಲವಾಗಿದೆ. ಎರಡು ವರ್ಷಗಳಿಂದ ಮಾಸ್ಟರ್ ಪ್ಲ್ಯಾನ್ ಸಮಿತಿ ಸಭೆ ನಡೆಸಿಲ್ಲ. ದೇವಳಕ್ಕೆ ಸೇರಿದ ಹಲವಾರು ಅಂಗಡಿಗಳ ಕೋಟ್ಯಂತರ ರೂ. ಬಾಡಿಗೆ ವಸೂಲಾತಿಯಾಗಿಲ್ಲ. ದೇವಳದ ಕಾಯಂ ನೌಕರರಿಗೆ ಶಾಸನಬದ್ಧವಾಗಿ ದೊರೆಯಬೇಕಾದ ಶೇ.17 ಮಧ್ಯಂತರ ಪರಿಹಾರ ದೊರಕಿಸುವಲ್ಲಿ ಆಡಳಿತ ಸಮಿತಿ ವಿಫಲವಾಗಿದೆ ಎಂದು ಆರೋಪಿಸಿದರು.
ಮಾಜಿ ಸದಸ್ಯ ಅಶೋಕ್ ನೆಕ್ರಾಜೆ, ಕಾಂಗ್ರೆಸ್ ಮುಖಂಡರಾದ ಬಾಲಕೃಷ್ಣ ಮರಿಲ್, ಶಿವರಾಮ ರೈ, ಲಕ್ಷ್ಮೀಶ ಗಬ್ಬಲಡ್ಕ, ಮೋಹನದಾಸ ರೈ, ಪವನ್ ಕುಮಾರ್, ಸೌಮ್ಯ, ಭಾರತಿ, ಶೇಷಕುಮಾರ ಶೆಟ್ಟಿ, ಮಾಧವ ದೇವರಗದ್ದೆ, ಗೋಪಾಲಕೃಷ್ಣ ಭಟ್, ಮನೋಜ್ ಕೈಕಂಬ, ಸುಬ್ರಹ್ಮಣ್ಯ ರಾವ್, ರತನ್ ಉಪಸ್ಥಿತರಿದ್ದರು.
ಸರ್ಕಾರದ ಆದೇಶ ಇದೆ - ಸ್ಪಷ್ಟನೆ
ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ದೇವಳದ ಆಡಳಿತದ ವತಿಯಿಂದ ದಿನಸಿ ಖರೀದಿಗೆ ಮಂಗಳೂರಿನ ಬಜಾರ್‌ಗೆ ನೀಡಿಲ್ಲ. ಸರಕಾರದ ಆದೇಶ ಇರುವುದರಿಂದ ಮತ್ತು ಉತ್ತಮ ಸಾಮಗ್ರಿ ಬರಬೇಕೆಂಬ ಉದ್ದೇಶದಿಂದ ಗುತ್ತಿಗೆ ನೀಡಲಾಗಿದೆ. ಹೊಸತಾಗಿ ಟೆಂಡರ್ ಮಾಡುವುದಾದರೆ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಪತ್ರ ಬಂದಿದ್ದರೆ ಅದು ಅಧಿಕಾರಿಗಳಿಗೆ ಗೊತ್ತಿರಬಹುದು. ಸುತ್ತು ಪೌಳಿ ವಿಚಾರದಲ್ಲೂ ತುರ್ತು ಸಭೆ ನಡೆಸಲಾಗಿದೆ. ಅರ್ಚಕರು, ಶಿಲ್ಪಿಗಳಿಂದ ಸಲಹೆ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Kukke Subrahmanya temple items purchased without any tender, questions Congress Harish.
06-09-25 08:28 pm
HK News Desk
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am