ಬ್ರೇಕಿಂಗ್ ನ್ಯೂಸ್
16-10-20 05:27 pm Bangalore Correspondent ಕರ್ನಾಟಕ
ಬೆಂಗಳೂರು, ಅಕ್ಟೋಬರ್ 16: ಉಪ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಆಪರೇಶನ್ ಶುರು ಮಾಡಿದೆ. ನಿಗೂಢ ಕಾರ್ಯಾಚರಣೆಗಿಳಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಆರ್.ಆರ್ ನಗರ ಕ್ಷೇತ್ರದ ಜೆಡಿಎಸ್ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಪಕ್ಷಕ್ಕೆ ಸೆಳೆದುಕೊಂಡು ಶಾಕ್ ಕೊಟ್ಟಿದ್ದಾರೆ.
ಈಗಾಗ್ಲೇ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ರಂಗೇರಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ಹಣಾಹಣಿ ಏರ್ಪಟ್ಟಿದೆ. ಬಿಜೆಪಿಯಿಂದ ಕೊನೆಗೂ ಹಳೆಮುಖ, ದೊಡ್ಡ ಕುಳ ಮುನಿರತ್ನಗೆ ಟಿಕೆಟ್ ನೀಡಿದ್ದು ಇತ್ತ ಕಾಂಗ್ರೆಸಿನಲ್ಲೂ ನಡುಕ ಸೃಷ್ಟಿಸಿತ್ತು. ಆದರೆ, ಡಿಕೆಶಿ ಆರಂಭದಿಂದಲೇ ತನ್ನ ಆಪ್ತ ಜೆಡಿಎಸ್ ಮುಖಂಡ, ಹನುಮಂತರಾಯಪ್ಪ ಮೂಲಕ ಕ್ಷೇತ್ರಕ್ಕೆ ಕೈ ಹಾಕಿದ್ದರು. ಆಬಳಿಕ ಹನುಮಂತ ಪುತ್ರಿ, ಮಾಜಿ ಐಎಎಸ್ ಅಧಿಕಾರಿ ಡಿಕೆ ರವಿ ಪತ್ನಿ ಕುಸುಮಾಗೆ ಟಿಕೆಟ್ ನೀಡಿ ಅಚ್ಚರಿ ಮೂಡಿಸಿದ್ದರು. ಇದೀಗ ಜೆಡಿಎಸ್ ಪಕ್ಷದ ಹುರಿಯಾಳುಗಳನ್ನೇ ಸೆಳೆದುಕೊಂಡು ಶಾಕ್ ನೀಡಿದ್ದಲ್ಲದೆ ಗೌಡ್ರ ಪಕ್ಷದ ಮತಗಳನ್ನು ಕಾಂಗ್ರೆಸಿಗೆ ಬರುವಂತೆ ಮಾಡಿದ್ದಾರೆ. ಡಿಕೆಶಿ ಈ ನಡೆ, ಇಡೀ ಚುನಾವಣೆ ತಂತ್ರಕ್ಕೇ ಹೊಸ ತಿರುವು ನೀಡಲಿದೆ ಎನ್ನಲಾಗಿದೆ.


ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಬೆಟ್ಟಸ್ವಾಮಿಗೌಡ ಹಾಗೂ ಜೆಡಿಎಸ್ನ ಬಹುತೇಕ ಪದಾಧಿಕಾರಿಗಳು ಈಗ ಡಿಕೆ ಶಿವಕುಮಾರ್ ಜೊತೆಯಾಗಿದ್ದಾರೆ. ಇವರೆಲ್ಲ ಇಂದೇ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.
ಡಿಕೆಶಿ ಮತ್ತು ಟೀಂ ಅತ್ಯಂತ ರಹಸ್ಯವಾಗಿ ಆಪರೇಷನ್ ಹಸ್ತ ಮಾಡಿದ್ದು, ಹೆಚ್ಡಿಕೆಗೆ ಶಾಕ್ ನೀಡಿದ್ದಾರೆ. ಆರ್.ಆರ್ ನಗರ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳೇ ಅಧಿಕ. ಒಂದು ಲಕ್ಷದಷ್ಟು ಒಕ್ಕಲಿಗ ಮತಗಳಿದ್ದು ಅವೇ ನಿರ್ಣಾಯಕ. ಇತ್ತ ಬಿಜೆಪಿಯಲ್ಲೂ ಒಳಗಿಂದೊಳಗೇ ಮುನಿಸಿದ್ದು ಇದು ಕೂಡ ಕಾಂಗ್ರೆಸಿಗೆ ವರದಾನ ಆಗಲಿದೆ ಎನ್ನಲಾಗುತ್ತಿದೆ.
Bangalore RR Nagara By-Elections Kpcc President DK Shivakumar gives Surprise to team JDS through operation Astha.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm