ಬ್ರೇಕಿಂಗ್ ನ್ಯೂಸ್
01-10-20 11:14 am Headline Karnataka News Network ಕರ್ನಾಟಕ
ತುಮಕೂರು, ಅಕ್ಟೋಬರ್ 1: ಯಲಹಂಕ ತಹಸೀಲ್ದಾರ್ ರಘುಮೂರ್ತಿಯನ್ನು ಸಸ್ಪೆಂಡ್ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. 17 ಎಕ್ರೆ 35 ಗುಂಟೆ ಸರಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಸಿಕ್ಕಿಬಿದ್ದಿದ್ದಾನೆ.. ಈ ರಘುಮೂರ್ತಿ ಎಷ್ಟು ಕೋಟಿ ಕೊಟ್ಟು ಯಲಹಂಕಕ್ಕೆ ಬಂದಿದ್ದ ಎನ್ನೋದು ಗೊತ್ತಾ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನನ್ನ ಸರಕಾರ ಇದ್ದಾಗ ಯಲಹಂಕದಲ್ಲಿ ಇದೇ ಗಿರಾಕಿ ತನ್ನ ಪೋಸ್ಟಿಂಗ್ ಮಾಡುವಂತೆ ಯಾರೋ ಕಾರ್ಯಕರ್ತರ ಜೊತೆ ಬಂದಿದ್ದ. ಒಂದು ಪೋಸ್ಟಿಂಗ್ ಮಾಡಿದರೆ ಒಂದು ಕೋಟಿ ರೂ. ಕೊಡುತ್ತಾರೆ ಎಂದಿದ್ರು ಕಾರ್ಯಕರ್ತರು. ಆದರೆ, ಅಂದು ನಾನು ಒಪ್ಪಿಕೊಂಡಿರಲಿಲ್ಲ. ಹೀಗೆ ಕೋಟಿ ಕೊಟ್ಟು ಬರುವವರು ತಿರುಗಿ ಹಣ ಮಾಡಬೇಕಿದ್ದರೆ ಜನರನ್ನೇ ಸುಲಿಯಬೇಕಲ್ಲ.. ಸರಕಾರಿ ಆಸ್ತಿಯನ್ನ ಉಳಿಸ್ತಾನಾ ಅಂತ ಕೇಳಿ, ವಾಪಸ್ ಕಳಿಸಿದ್ದೆ. ನಮ್ಮ ಕಾರ್ಯಕರ್ತರಿಗೆ ಹಾಗೆ ಮಾಡಲು ಬಿಡಲಿಲ್ಲ.. ನಮ್ಮ ಸರಕಾರ ಹೋದ ಮೇಲೆ ಬಿಜೆಪಿಯವರು ಬಂದ್ರು. ಬಿಜೆಪಿಯವ್ರು ಈ ಭ್ರಷ್ಟನನ್ನು 24 ಗಂಟೆಯಲ್ಲಿ ಪೋಸ್ಟಿಂಗ್ ಮಾಡಿದ್ರು. ಒಂದೂವರೆ ಕೋಟಿ ಪೇಮೆಂಟ್ ಕೊಟ್ಟು ಪೋಸ್ಟಿಂಗ್ ಮಾಡ್ಕೊಂಡಿದ್ದಾನೆ. ಅದರಲ್ಲಿ ಅಲ್ಲಿಯ ಶಾಸಕರಿಗೆ 50 ಲಕ್ಷ ರೂ. ಹಣ ಹೋಗಿತ್ತು. ಎಲ್ಲವೂ ಗೊತ್ತಿದೆ ಎಂದು ಆರೋಪಿಸಿದರು.
ಒಂದೂವರೆ ಕೋಟಿ ತಗಂಡು ಈ ಪೋಸ್ಟಿಂಗ್ ಮಾಡಿದ್ದಕ್ಕೆ ಈಗ ನೂರು ಕೋಟಿ ಬೆಲೆಬಾಳುವ ಆಸ್ತಿಯನ್ನು ನುಂಗಿ ಹಾಕಿದ್ದಾನೆ. ಇದು ಯಾರ ಅಪ್ಪನ ಮನೇದ್ದು.. ಇದು ಸರಕಾರ... ಈಗ ಇವನನ್ನು ಸಸ್ಪೆಂಡ್ ಮಾಡಲು ಶಿಫಾರಸ್ಸು ಮಾಡಿದ್ದಾರೆ ಕುಮಾರಸ್ವಾಮಿ ಹೇಳಿದರು.
video
03-11-25 05:17 pm
Bangalore Correspondent
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
03-11-25 10:47 pm
Mangalore Correspondent
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm