ಭಾರತದಲ್ಲಿ ಏಪ್ರಿಲ್ ತಿಂಗಳ 4G ಸ್ಪೀಡ್ ರಿಪೋರ್ಟ್!..ಯಾವ ಕಂಪೆನಿಗೆ ಮೊದಲ ಸ್ಥಾನ?

16-05-22 08:01 pm       Source: Vijayakarnataka   ಡಿಜಿಟಲ್ ಟೆಕ್

ಟೆಲಿಕಾಂ ದೈತ್ಯ ಕಂಪೆನಿಗಳಲ್ಲಿ ಒಂದಾದ ವಿಐ (ವೊಡಾಫೋನ್‌-ಐಡಿಯಾ) 8.2 Mbps ನೊಂದಿಗೆ ಸರಾಸರಿ 4G ಅಪ್‌ಲೋಡ್ ವೇಗದೊಂದಿಗೆ ಚಾರ್ಟ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಏಪ್ರಿಲ್ ತಿಂಗಳ...

ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ 4G ಡೌನ್‌ಲೋಡ್ ವೇಗದಲ್ಲಿ 2 Mbps ಜಿಗಿತದೊಂದಿಗೆ ತನ್ನ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದರೆ, ಟೆಲಿಕಾಂ ದೈತ್ಯ ಕಂಪೆನಿಗಳಲ್ಲಿ ಒಂದಾದ ವಿಐ (ವೊಡಾಫೋನ್‌-ಐಡಿಯಾ) 8.2 Mbps ನೊಂದಿಗೆ ಸರಾಸರಿ 4G ಅಪ್‌ಲೋಡ್ ವೇಗದೊಂದಿಗೆ ಚಾರ್ಟ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಏಪ್ರಿಲ್ ತಿಂಗಳ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಜಿಯೋದ ಸರಾಸರಿ 4G ಡೌನ್‌ಲೋಡ್ ವೇಗ 23.1 Mbps ಇದೆ. ಮಾರ್ಚ್ ತಿಂಗಳಲ್ಲಿ ಜಿಯೋ ಸರಾಸರಿ 4G ಡೌನ್‌ಲೋಡ್ ವೇಗ 21.1 Mbps ಆಗಿದೆ.

ಟೆಲಿಕಾಂ ದೈತ್ಯ ಕಂಪೆನಿಗಳಲ್ಲಿ ಒಂದಾದ ವೊಡಾಫೋನ್ ಐಡಿಯಾದ 4G ಡೌನ್‌ಲೋಡ್ ವೇಗವು ಸತತ ಎರಡನೇ ತಿಂಗಳು ಕಡಿಮೆಯಾಗಿದೆ ಎಂದು ಡೇಟಾ ತೋರಿಸುತ್ತದೆ. ಫೆಬ್ರವರಿಯಲ್ಲಿ 18.4 Mbps ಡೌನ್‌ಲೋಡ್ ವೇಗದಿಂದ ಏಪ್ರಿಲ್‌ನಲ್ಲಿ 17.7 Mbps ಗೆ ವೊಡಾಫೋನ್ ಐಡಿಯಾದ 4G ಡೌನ್‌ಲೋಡ್ ವೇಗ ಇಳಿದಿದೆ. ವೊಡಾಫೋನ್ ಐಡಿಯಾ ಜೊತೆಗೆ, ಸರ್ಕಾರಿ ನೇತೃತ್ವದ ಬಿಎಸ್‌ಎನ್‌ಎಲ್‌ ವೇಗವು 5.9 Mbps ಗೆ ಇಳಿದಿದೆ. ಮಾರ್ಚ್‌ನಲ್ಲಿ, ಏರ್‌ಟೆಲ್‌ನ ಡೌನ್‌ಲೋಡ್ ವೇಗವು 14.3 Mbps ನಿಂದ 13.7 Mbps ಗೆ ಕುಸಿದಿತ್ತು. ಏಪ್ರಿಲ್‌ನಲ್ಲಿ ವೇಗವು 14.1 ಎಂಬಿಪಿಎಸ್‌ಗೆ ಏರಿಕೆಯಾಗಿದ್ದರೂ, ಫೆಬ್ರವರಿಯಲ್ಲಿ ಅದರ 15 Mbps ವೇಗಕ್ಕೆ ಹೋಲಿಸಿದರೆ, ಇದು ಇನ್ನೂ ಹಿಂದುಳಿದಿದೆ.

Jio adds nearly 45 lakh new customers in June, Vodafone Idea loses 48.2  lakh | The News Minute

ಪ್ರತಿ ಬಾರಿಯಂತೆ, ಮುಖೇಶ್ ಅಂಬಾನಿ ಅವರ ನೇತೃತ್ವದ ಕಂಪನಿ ರಿಲಯನ್ಸ್ ಜಿಯೋ ಸರಾಸರಿ 4G ಡೌನ್‌ಲೋಡ್ ವೇಗದಲ್ಲಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಅನ್ನು ಹಿಂದಿಕ್ಕಿದೆ. ಏಪ್ರಿಲ್ ತಿಂಗಳಿನಲ್ಲಿ, ಜಿಯೋದ 4G ಡೌನ್‌ಲೋಡ್ ವೇಗವು ಏರ್‌ಟೆಲ್‌ಗಿಂತ 9.0 mbps ಮತ್ತು ವೊಡಾಫೋನ್ ಐಡಿಯಾ ಗಿಂತ 5.4 mbps ಹೆಚ್ಚಾಗಿದೆ. ರಿಲಯನ್ಸ್ ಜಿಯೋ ಕಳೆದ ಹಲವಾರು ವರ್ಷಗಳಿಂದ ಸರಾಸರಿ 4G ಡೌನ್‌ಲೋಡ್ ವೇಗದಲ್ಲಿ ಸತತವಾಗಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, ವೊಡಾಫೋನ್ ಐಡಿಯಾ ಇಂಡಿಯಾ ಎರಡನೇ ಸ್ಥಾನವನ್ನು ಮುಂದುವರೆಸಿದೆ ಮತ್ತು ಭಾರ್ತಿ ಏರ್‌ಟೆಲ್ ಅನ್ನು ಮೂರನೇ ಸ್ಥಾನಕ್ಕೆ ತಳ್ಳಿದೆ.

Best Prepaid Plans Under Rs 200 from Airtel, Jio and Vi

ವೊಡಾಫೋನ್ ಐಡಿಯಾ 8.2 Mbps ನೊಂದಿಗೆ ಸರಾಸರಿ 4G ಅಪ್‌ಲೋಡ್ ವೇಗದೊಂದಿಗೆ ಚಾರ್ಟ್‌ನಲ್ಲಿ ಅಗ್ರಸ್ಥಾನದಲ್ಲಿದೆ. ರಿಲಯನ್ಸ್ ಜಿಯೋ ತನ್ನ ಅಪ್‌ಲೋಡ್ ವೇಗ 7.6 ಎಂಬಿಪಿಎಸ್‌ನೊಂದಿಗೆ ಎರಡನೇ ಸ್ಥಾನಯನ್ನು ಪಡೆದಿದೆ. ರಿಲಯನ್ಸ್ ಜಿಯೋ ಮಾತ್ರ ಅಪ್‌ಲೋಡ್ ವೇಗವನ್ನು ಹೆಚ್ಚಿಸಿಕೊಂಡ ಕಂಪನಿಯಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್‌ ಅಪ್‌ಲೋಡ್ ವೇಗದಲ್ಲಿ ಯಾವುದೇ ಬದಲಾವಣೆ ಇಲ್ಲ. ಅದೇ ಸಮಯದಲ್ಲಿ, ಬಿಎಸ್‌ಎನ್‌ಎಲ್‌ ಅಪ್‌ಲೋಡ್ ವೇಗವು 5 Mbps ಗೆ ಇಳಿದಿದೆ. ಭಾರ್ತಿ ಏರ್‌ಟೆಲ್ ಸರಾಸರಿ 4G ಅಪ್‌ಲೋಡ್ ವೇಗದಲ್ಲಿ ಮೂರನೇ ಸ್ಥಾನದಲ್ಲಿದೆ. ಏಪ್ರಿಲ್ ತಿಂಗಳಲ್ಲಿ ಕಂಪನಿಯು ಸರಾಸರಿ 6.1 Mbps ಅಪ್‌ಲೋಡ್ ವೇಗವನ್ನು ದಾಖಲಿಸಿದೆ.

Jio Tops 4g Download Speed Chart, Vodafone Idea In Upload In April.