ಬ್ರೇಕಿಂಗ್ ನ್ಯೂಸ್
02-09-21 05:48 pm Gizbot, Mantesh ಡಿಜಿಟಲ್ ಟೆಕ್
ಪ್ರಸ್ತುತ ಸ್ಮಾರ್ಟ್‌ಫೋನ್‌ಗಳು ಆಪ್ತ ಜೊತೆಗಾರ ಎನಿಸಿವೆ. ಪ್ರಮುಖ ಹಾಗೂ ಖಾಸಗಿ ಮಾಹಿತಿಗಳು, ಫೋಟೊಗಳು, ಫೈಲ್‌ಗಳು ಇತ್ಯಾದಿಗಳನ್ನು ಬಳಕೆದಾರರು ಫೋನಿನಲ್ಲಿ ಸ್ಟೋರ್ ಮಾಡಿ ಇಟ್ಟಿರುತ್ತಾರೆ. ಬಳಕೆದಾರರ ಖಾಸಗಿ ಮಾಹಿತಿಯ ಸುರಕ್ಷತೆ ದೃಷ್ಠಿಯಿಂದ ಹಲವು ಸೆಕ್ಯುರಿಟಿ ಆಯ್ಕೆಗಳನ್ನು ಇಂದಿನ ಆಂಡ್ರಾಯ್ಡ್ ಫೋನ್‌ಗಳು ಒಳಗೊಂಡಿವೆ. ಆದಾಗ್ಯೂ ಕೆಲವು ಬಳಕೆದಾರರು ಇವುಗಳ ಬಗ್ಗೆ ಹೆಚ್ಚು ಆಸಕ್ತಿ ತೋರುವುದಿಲ್ಲ. ಆದರೆ ಇತರರು ಫೋನ್ ಜಾಲಾಡದಂತೆ ತಡೆಯಲು ಆಂಡ್ರಾಯ್ಡ್‌ನಲ್ಲಿರುವ ಈ ಫೀಚರ್ ಬಳಕೆ ಮಾಡುವುದು ಉತ್ತಮ.
ಹೌದು, ಕೆಲವರಿಗೆ ಒಪ್ಪಿಗೆ ಪಡೆಯದೇ ಫೋನ್ ಪರಿಶೀಲಿಸುವ ರೂಢಿ ಹೊಂದಿರುತ್ತಾರೆ. ಅವರು ಆತ್ಮೀಯರಾಗಿದ್ದರೇ, ಫೋನ್ ಮುಟ್ಟಬೇಡಿ ಎಂದು ಹೇಳುವುದು ಸರಿ ಅನಿಸುವುದಿಲ್ಲ. ಆದರೆ ಫೋನಿನಲ್ಲಿರುವ ಕೆಲವು ಉಪಯುಕ್ತ ಫೀಚರ್/ಆಯ್ಕೆಗಳನ್ನು ಬಳಕೆ ಮಾಡುವ ಮೂಲಕ ಇಂತಹ ಸಂದರ್ಭಗಳಲ್ಲಿ ನಿರಾತಂಕವಾಗಿರಬಹುದು ಹಾಗೂ ಸುರಕ್ಷತೆ ಹೆಚ್ಚಿಸಿಕೊಳ್ಳಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದೆ ತಿಳಿಯೋಣ ಬನ್ನಿರಿ.
ಪಿನ್ ದಿ ಸ್ಕ್ರೀನ್ ಫೀಚರ್
ಆಂಡ್ರಾಯ್ಡ್ ಫೋನ್‌ಗಳಲ್ಲಿ ಪಿನ್ ದಿ ಸ್ಕ್ರೀನ್ ಅಥವಾ ಸ್ಕ್ರೀನ್ ಪಿನ್ನಿಂಗ್ ಎಂಬ ವಿಶೇಷ ಫೀಚರ್ ನೀಡಲಾಗಿದೆ. ಈ ಆಯ್ಕೆಯನ್ನು ಬಳಕೆ ಮಾಡುವ ಮೂಲಕ ಒಪ್ಪಿಗೆಯಿಲ್ಲದೆ ನಿಮ್ಮ ಅನ್ಲಾಕ್ ಮಾಡಿದ ಫೋನ್ ಅನ್ನು ಯಾರೂ ಬಳಸಲು ಸಾಧ್ಯವಾಗುವುದಿಲ್ಲ. ಈ ಫೀಚರ್ ಆಂಡ್ರಾಯ್ಡ್ 5.0 ಮತ್ತು ಅದಕ್ಕಿಂತ ಮೇಲ್ಪಟ್ಟ ಇತ್ತೀಚಿಗಿನ ಎಲ್ಲ ಹೊಸ ಆವೃತ್ತಿಗಳಲ್ಲಿ ಲಭ್ಯ ಇರುವುದು.
ಏನಿದು ಪಿನ್ ದಿ ಸ್ಕ್ರೀನ್ ಫೀಚರ್
ಈ ಫೀಚರ್‌ನ ಪ್ರಮುಖ ಕಾರ್ಯವೆಂದರೆ ನೀವು ಆಪ್ ಅನ್ನು ಲಾಕ್ ಮಾಡಬಹುದು ಅಥವಾ ಪಿನ್ ಮಾಡಬಹುದು. ಈ ರೀತಿ ಮಾಡುವುದರಿಂದ ಫೋನಿನಲ್ಲಿ ನೀವು ಅನುಮತಿ ನೀಡುವವರೆಗೆ ಆಪ್ ಅನ್ನು ತೆರೆಯಲು ಇತರರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ನಿಮ್ಮ ಫೋನಿನಲ್ಲಿ ಯಾವುದೇ ಅಪ್ಲಿಕೇಶನ್‌ಗಳನ್ನು ಇತರರು ಪರಿಶೀಲಿಸದಂತೆ ತಡೆಯಲು ಆ ಅಪ್ಲಿಕೇಶನ್‌ನಲ್ಲಿ ಪಿನ್ ದಿ ಸ್ಕ್ರೀನ್ ಗೆ ಹಾಕುವುದು ಉತ್ತಮ.
* ಪಿನ್ ದಿ ಸ್ಕ್ರೀನ್ ಫೀಚರ್ ಎಲ್ಲಾ ಆಂಡ್ರಾಯ್ಡ್ 5.0 ಅಥವಾ ನಂತರದ ಓಎಸ್‌ಗಳಲ್ಲಿ ಸಪೋರ್ಟ್ ಮಾಡುತ್ತದೆ.
* ಸ್ಕ್ರೀನ್ ಪಿನ್ ಅಥವಾ ಸ್ಕ್ರೀನ್ ಪಿನ್ನಿಂಗ್ ಹೆಸರಿನಿಂದ ಈ ಆಯ್ಕೆ ಇದೆ.
* ಫೋನ್ ಸೆಟ್ಟಿಂಗ್‌ಗಳಲ್ಲಿ ಈ ಆಯ್ಕೆ ಇದೆ. ಅದಕ್ಕಾಗಿ ಫೋನಿನ ಸೆಟ್ಟಿಂಗ್ಸ್ ನಲ್ಲಿ ಸೆಕ್ಯುರಿಟಿ ಮತ್ತು ಲಾಕ್ ಸ್ಕ್ರೀನ್ ಆಯ್ಕೆ ಸೆಲೆಕ್ಟ್ ಮಾಡಿ.
* ಸೆಕ್ಯುರಿಟಿ ಮತ್ತು ಲಾಕ್ ಸ್ಕ್ರೀನ್ ಮೇಲೆ ಕ್ಲಿಕ್ ಮಾಡಿದ ನಂತರ, ಪ್ರೈವಸಿಗೆ ಸಂಬಂಧಿಸಿದ ಹಲವು ಆಯ್ಕೆಗಳು ಇಲ್ಲಿ ಕಾಣಿಸುತ್ತವೆ. ನಂತರ ಕೆಳಭಾಗದಲ್ಲಿ ಸ್ಕ್ರೀನ್ ಪಿನ್ನಿಂಗ್ ಆಯ್ಕೆ ಕಾಣಿಸುತ್ತದೆ.
* ನಂತರ ಸ್ಕ್ರೀನ್ ಪಿನ್ನಿಂಗ್ ಆಯ್ಕೆಯನ್ನು ಟ್ಯಾಪ್ ಮಾಡಿ ಹಾಗೂ ಆನ್ ಮಾಡಿ.
* ಫೋನ್‌ನಲ್ಲಿ ನೀವು ಪಿನ್ ಮಾಡಲು ಬಯಸುವ ಆಪ್ ಅನ್ನು ತೆರೆಯಿರಿ, ನಂತರ ಕ್ಲೋಸ್ ಮಾಡಿ
* ತದ ನಂತರ ಇತ್ತೀಚಿನ ಆಪ್ಸ್ ಆಯ್ಕೆಗೆ ಹೋಗಿ ಮತ್ತು ಪಿನ್ ಮಾಡಲು ಬಯಸುವ ಆಪ್ ಮೇಲೆ ದೀರ್ಘವಾಗಿ ಒತ್ತಿರಿ. ಬಳಿಕ ಪಿನ್ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ.
* ಪಿನ್ ಮಾಡಿದ ಆಪ್ ಹೊರತುಪಡಿಸಿ ಬೇರೆ ಯಾವುದೇ ಆಪ್‌ಗಳು ಫೋನ್‌ನಲ್ಲಿ ತೆರೆಯುವುದಿಲ್ಲ.
* ನಂತರ ಪಿನ್ ಆಯ್ಕೆಯನ್ನು ತೆಗೆದುಹಾಕಲು, ನೀವು ಹೋಮ್ ಮತ್ತು ಬ್ಯಾಕ್ ಬಟನ್‌ಗಳನ್ನು ಏಕಕಾಲದಲ್ಲಿ ಒತ್ತಿ ಮತ್ತು ಲಾಕ್‌ಸ್ಕ್ರೀನ್ ಪಾಸ್‌ವರ್ಡ್ ಬಳಸಿ.
10-08-25 06:27 pm
Bangalore Correspondent
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
ಬೆಂಗಳೂರಿನಲ್ಲಿ ಮತ್ತೊಂದು ಹೊಸ ಸ್ಟೇಡಿಯಂ ; 80 ಸಾವಿ...
09-08-25 08:00 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm