ಬ್ರೇಕಿಂಗ್ ನ್ಯೂಸ್
08-09-22 07:30 pm Source: Vijayakarnataka ಡಿಜಿಟಲ್ ಟೆಕ್
ಆಪಲ್ ಸಂಸ್ಥೆಯು ಆಯೋಜಿಸಿದ್ದ 'ಫಾರ್ ಔಟ್' ಹೆಸರಿನ ಕಾರ್ಯಕ್ರದಲ್ಲಿ ಇಂದು ಐಫೋನ್ 14 ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗಿದ್ದು, ನಿರೀಕ್ಷೆಯಂತೆಯೇ 'ಐಫೋನ್ 14' ಸರಣಿಯಲ್ಲಿ iPhone 14, iPhone 14 Plus, iPhone 14 Pro ಮತ್ತು iPhone 14 Pro Max ಎಂಬ ನಾಲ್ಕು ಮಾದರಿ ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಇವುಗಳಲ್ಲಿ ಐಫೋನ್ 14 ಪ್ರವೇಶ ಮಟ್ಟದ ಸಾಧನವಾಗಿ ಬಿಡುಗಡೆಗೊಂಡಿದ್ದರೆ, ಐಫೋನ್ 14 ಪ್ಲಸ್ ಮಾತ್ರ ಪ್ರವೇಶ ಮಟ್ಟದಲ್ಲಿ ದೊಡ್ಡ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್ ಆಗಿ ಮಾರುಕಟ್ಟೆಗೆ ಬಂದಿವೆ. ಹಾಗಾಗಿ, ಈ ಲೇಖನದಲ್ಲಿ ಪ್ರವೇಶ ಮಟ್ಟದ ಐಫೋನ್ 14 ಮತ್ತು ಐಫೋನ್ 14 ಪ್ಲಸ್ ಸಾಧನಗಳು ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬುದನ್ನು ತಿಳಿಯೋಣ.
iPhone 14 ಮತ್ತು ಐಫೋನ್ 14 ಪ್ಲಸ್ ಪೋನ್‌ಗಳ ವಿಶೇಷಣಗಳು ಮತ್ತು ವೈಶಿಷ್ಟ್ಯಗಳು
ಐಫೋನ್ 14 ಸರಣಿಯಲ್ಲಿ ಮೂಲ ಸ್ಮಾರ್ಟ್‌ಫೋನ್ ಆಗಿರುವ ಐಫೋನ್ 14 ಸಾಧನವು ಮುಂಭಾಗದಲ್ಲಿ ಸೆರಾಮಿಕ್ ಶೀಲ್ಡ್ ಹಾಗೂ ಫ್ಲಾಟ್-ಎಡ್ಜ್ ಏರೋಸ್ಪೇಸ್-ಗ್ರೇಡ್ ಅಲ್ಯೂಮಿನಿಯಂ ಫ್ರೇಮ್ ಜೊತೆಗೆ ಗ್ಲಾಸ್ ಬ್ಯಾಕ್ ಮತ್ತು ಅಲ್ಯೂಮಿನಿಯಂ ವಿನ್ಯಾಸವನ್ನು ಹೊಂದಿದೆ. ಮಾತ್ರೆಯಾಕಾದ ಪಂಚ್ ಡಿಸ್‌ಪ್ಲೇಯು 6.1-ಇಂಚಿನಷ್ಟು ದೊಡ್ಡದಾಗಿದ್ದು, ಇದು ಕಳೆದ ವರ್ಷದ ಹ್ಯಾಂಡ್‌ಸೆಟ್‌ಗೆ ಹೋಲಿಸಿದರೆ ಹೆಚ್ಚು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಡಿಸ್‌ಪ್ಲೇಯು 1200nits ಬ್ರೈಟ್‌ನೆಸ್, ಹ್ಯಾಪ್ಟಿಕ್ ಟಚ್, P3 ವೈಡ್ ಕಲರ್, ಟ್ರೂ ಟೋನ್, 20,00,000:1 ಕಾಂಟ್ರಾಸ್ಟ್, ಓಲಿಯೋಫೋಬಿಕ್ ಕೋಟಿಂಗ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳಿಂದ ಕೂಡಿದೆ. ಹುಡ್ ಅಡಿಯಲ್ಲಿ, ಐಫೋನ್ 14 ಫೋನಿನಲ್ಲಿ ಕಳೆದ ವರ್ಷದ ಐಫೋನ್ 13 ನಲ್ಲಿ ನೀಡಲಾಗಿದ್ದ ಅದೇ A15 ಬಯೋನಿಕ್ SoC ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಆದರೆ, ಆಪಲ್ ಅಧಿಕೃತವಾಗಿ RAM ಎಷ್ಟು ಮತ್ತು ಬ್ಯಾಟರಿ ಸಾಮರ್ಥ್ಯ ಎಷ್ಟು ಎಂಬುದನ್ನು ಬಹಿರಂಗಪಡಿಸಿಲ್ಲ.
ಕ್ಯಾಮೆರಾ ವಿಭಾಗದಲ್ಲಿ, iPhone 14 ಪೋನಿನಲ್ಲಿ 12MP ಮುಖ್ಯ ಹಾಗೂ 12MP ಅಲ್ಟ್ರಾ ವೈಡ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ 12-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾವು 1.9um ಸಂವೇದಕ, 120° ಫೀಲ್ಡ್ ಆಫ್ ವ್ಯೂ ಮತ್ತು f/1.7 ಅಪರ್ಚರ್ ಅಪರ್ಚರ್ ಲೆನ್ಸ್ ಜೊತೆಗೆ ಸಂಯೋಜನೆಗೊಂಡಿದ್ದರೆ, 12MP ಮುಖ್ಯ ಕ್ಯಾಮೆರಾವನ್ನು 26 mm, ƒ/1.5ಅಪರ್ಚರ್ ಲೆನ್ಸ್ ಜೊತೆಗೆ ಸಂಯೋಜಿಸಲಾಗಿದೆ. ಕ್ಯಾಮೆರಾ ವೈಶಿಷ್ಟ್ಯಗಳಲ್ಲಿ, 2x ಆಪ್ಟಿಕಲ್ ಜೂಮ್ ಔಟ್; 5x ವರೆಗೆ ಡಿಜಿಟಲ್ ಜೂಮ್, ಟ್ರೂ ಟೋನ್ ಫ್ಲಾಶ್, ಫೋಟೊನಿಕ್ ಎಂಜಿನ್, ಡೀಪ್ ಫ್ಯೂಷನ್, ಸ್ಮಾರ್ಟ್ HDR 4, ಸುಧಾರಿತ ಬೊಕೆ, ಪನೋರಮಾ (63MP ವರೆಗೆ), ಆಟೊ ಇಮೇಜ್ ಸ್ಟೆಬಿಲೈಜೇಶನ್ ಮತ್ತು ಅಲ್ಟ್ರಾ ವೈಡ್ ಲೆನ್ಸ್ ಕರೆಕ್ಷನ್ ನಂತಹ ವೈಶಿಷ್ಟ್ಯಗಳಿವೆ ಎಂದು ಆಪಲ್ ತಿಳಿಸಿದೆ. ಇಷ್ಟೇ ಅಲ್ಲದೇ, ಈ ಫೋನ್ ಆಕ್ಷನ್ ಮೋಡ್ ಎಂದು ಕರೆಯಲ್ಪಡುವ ಹೊಸ ಸ್ಥಿರೀಕರಣ ವೈಶಿಷ್ಟ್ಯದೊಂದಿಗೆ ಸುಧಾರಿತ ವೀಡಿಯೊ ರೆಕಾರ್ಡಿಂಗ್ ಒಳಗೊಂಡಿದೆ
ವೀಡಿಯೊವನ್ನು ಉತ್ತಮವಾಗಿ ಸೆರೆಹಿಡಿಯಲು iPhone 14 ಪೋ ಮೋಷನ್ ಸೆನ್ಸರ್‌ಗಳನ್ನು ಬಳಸುತ್ತದೆ. ಇದರ ಸಹಾಯದಿಂದ ಈಗ 4K ನಲ್ಲಿ 30fps ಮತ್ತು 4K ನಲ್ಲಿ 24fps ನಲ್ಲಿ ವಿಡಿಯೋಗಳನ್ನು ಸೆರೆಹಿಡಿಯಬಹುದು ಮತ್ತು ಇದು ಕಡಿಮೆ-ಬೆಳಕಿನ ಕಾರ್ಯಕ್ಷಮತೆಯನ್ನು ಹೊಂದಿದೆ ಎಂದು ಆಪಲ್ ತಿಳಿಸಿದೆ. ಆಪಲ್ ತಿಳಿಸಿರುವಂತೆ, 24 fps, 25 fps, 30 fps ಅಥವಾ 60 fps ನಲ್ಲಿ 4K ವೀಡಿಯೊ ರೆಕಾರ್ಡಿಂಗ್ ಸಾಧ್ಯವಾದರೆ, 25 fps, 30 fps ಅಥವಾ 60 fps ನಲ್ಲಿ 1080p HD ವಿಡಿಯೋ ರೆಕಾರ್ಡಿಂಗ್ ಹಾಗೂ 30 fps ನಲ್ಲಿ 720p HD ವಿಡಿಯೋ ರೆಕಾರ್ಡಿಂಗ್ ಸಾಧ್ಯವಾಗಲಿದೆ ಎಂದು ಹೇಳಿದೆ. ಇನ್ನುಳಿದಂತೆ, ವಿಡಿಯೋ ರೆಕಾರ್ಡಿಂಗ್‌ಗಾಗಿ ಟೈಮ್-ಲ್ಯಾಪ್ಸ್ ವೀಡಿಯೊ, 2x ಆಪ್ಟಿಕಲ್ ಜೂಮ್ ಔಟ್3x ವರೆಗೆ ಡಿಜಿಟಲ್ ಜೂಮ್, ಸಿನಿಮ್ಯಾಟಿಕ್ ವಿಡಿಯೋ ಸ್ಟೆಬಿಲೈಜೆಶನ್ ವೈಶಿಷ್ಟ್ಯಗಳಿವೆ. ವಿಶೇಷವಾಗಿ ಈ ಫೋನಿನಲ್ಲಿ 4K ವೀಡಿಯೊವನ್ನು ರೆಕಾರ್ಡ್ ಮಾಡುವಾಗ 8MP ಸ್ಟಿಲ್ ಫೋಟೋಗಳನ್ನು ತೆಗೆದುಕೊಳ್ಳಬಹುದು.!
iPhone 14 ಪೋನಿನಲ್ಲಿ ಮುಖ ಗುರುತಿಸಲು TrueDepth ಕ್ಯಾಮರಾವನ್ನು ಸಕ್ರಿಯಗೊಳಿಸಲಾಗಿದೆ. ಇತರೆ ವೈಶಿಷ್ಟ್ಯಗಳಲ್ಲಿ, GPS, GLONASS, QZSS, Digital compass ಮತ್ತು BeiDou ಸಂಪರ್ಕಗಳನ್ನು ನೀಡಲಾಗಿದೆ. AAC, MP3, Apple Lossless, FLAC, Dolby Digital, Dolby Digital Plus ಮತ್ತು Dolby Atmos ಆಡಿಯೋ ಸಪೋರ್ಟ್ ಇದೆ. ಸಂದೇಶಗಳನ್ನು ಕಳುಹಿಸಲು, ರಿಮೈಂಡರ್‌ಗಳನ್ನು ಹೊಂದಿಸಲು ಸಿರಿಯನ್ನು ಬಳಸಬಹುದು ಎಂದು ಆಪಲ್ ತಿಳಿಸಿದೆ. 15W ವರೆಗೆ ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಅನ್ನು ಹೊಂದಿರುವ ಈ ಫೋನ್ ಪ್ರಸ್ತುತ ವಿಶ್ವದ ಅತ್ಯಂತ ವೈಯಕ್ತಿಕ ಮತ್ತು ಸುರಕ್ಷಿತ ಮೊಬೈಲ್ ಆಪರೇಟಿಂಗ್ ಸಿಸ್ಟಮ್ iOS 16 ನಲ್ಲಿ ಕಾರ್ಯನಿರ್ವಹಿಸಲಿದೆ ಮತ್ತು 10 ಪ್ರತಿಶತದಷ್ಟು ಪ್ರಕಾಶಮಾನವಾಗಿರುವ ಸುಧಾರಿತ ಟ್ರೂ ಟೋನ್ ಫ್ಲ್ಯಾಷ್ ಅನ್ನು iPhone 14 ಪೋನಿನಲ್ಲಿ ತರಲಾಗಿದೆ ಎಂದು ಆಪಲ್ ತಿಳಿಸಿದೆ.
iPhone 14 Plus ಸ್ಮಾರ್ಟ್‌ಫೋನಿನ ವಿಶೇಷಣಗಳು!
ದೊಡ್ಡ ಡಿಸ್‌ಪ್ಲೇ ಮತ್ತು ಬ್ಯಾಟರಿ ಬ್ಯಾಕಪ್ ಹೊರತುಪಡಿಸಿ ಐಫೋನ್ 14 ನಂತಹುದೇ ಫೀಚರ್ಸ್‌ಗಳನ್ನು ಐಫೋನ್ 14 ಪ್ಲಸ್ ಫೋನ್ ಕೂಡ ಒಳಗೊಂಡಿದೆ. ಐಫೋನ್ 14 ಪ್ಲಸ್ ಫೋನ್ 6.7 ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, ಇದು ಕೂಡ 1200nits ಬೆಂಬಲವನ್ನು ಹೊಂದಿದೆ. ಹುಡ್ ಅಡಿಯಲ್ಲಿ, ಐಫೋನ್ 14 ಪ್ಲಸ್ ಫೋನ್ ಕೂಡ A15 ಬಯೋನಿಕ್ SoC ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಐಫೋನ್ 14 ಮತ್ತು ಐಫೋನ್ 14 ಪ್ಲಸ್ ಎರಡೂ ಮಾದರಿಯ ಫೋನ್‌ಗಳು ಒಂದೇ ರೀತಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿವೆ. ಐಫೋನ್ 14 ಗೆ ಹೋಲಿಸಿದರೆ ಐಫೋನ್ 14 ಪ್ಲಸ್ ಫೋನ್ ದೀರ್ಘ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವುದಾಗಿ ಆಪಲ್ ಹೇಳಿಕೊಂಡಿದೆ. ಆದರೆ, ಈ ಎರಡೂ ಫೋನ್‌ಗಳ ಬ್ಯಾಟರಿ ಸಾಮರ್ಥ್ಯ ಎಷ್ಟು ಎಂಬ ಬಗ್ಗೆ ಮಾತ್ರ ಮಾಹಿತಿ ಒದಗಿಸಿಲ್ಲ.
iPhone 14 ಮತ್ತು ಐಫೋನ್ 14 ಪ್ಲಸ್ ಪೋನ್‌ಗಳ ಬೆಲೆ ಮತ್ತು ಲಭ್ಯತೆ!
ಜಾಗತಿಕವಾಗಿ ಐಫೋನ್ 14 ಫೋನಿನ ಆರಂಭಿಕ ಬೆಲೆಯು $799 (ಭಾರತದಲ್ಲಿ ಆರಂಭಿಕ ಬೆಲೆ 79,900 ರೂ.) ಗಳಾಗಿದ್ದು, ಮುಂಗಡ-ಕೋರಿಕೆ ಲಭ್ಯತೆಯು ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 16 ರಿಂದ ಖರೀದಿಗೆ ಲಭ್ಯವಾಗಲಿದೆ. ಐಫೋನ್ 14 ಪ್ಲಸ್ ಫೋನಿನ ಆರಂಭಿಕ ಬೆಲೆಯು $899 (ಭಾರತದಲ್ಲಿ ಆರಂಭಿಕ ಬೆಲೆ 89,900 ರೂ.) ಗಳಾಗಿದ್ದು, ಮುಂಗಡ-ಕೋರಿಕೆ ಲಭ್ಯತೆಯು ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 7 ರಿಂದ ಖರೀದಿಗೆ ಲಭ್ಯವಾಗಲಿದೆ.
Apple Iphone 14, Iphone 14 Plus Full Phone Specifications Details.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
01-05-25 09:29 pm
Mangalore Correspondent
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
Mangalore Kudupu Murder Case, Police Suspende...
01-05-25 12:23 pm
Congress Harish Kumar, Kudupu Murder case, Ma...
30-04-25 11:26 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am