ಬ್ರೇಕಿಂಗ್ ನ್ಯೂಸ್
11-08-22 10:15 pm Source: Vijayakarnataka ಡಿಜಿಟಲ್ ಟೆಕ್
ಭಾರತದಲ್ಲಿ 5G ಸೇವೆಗಳು ಆರಂಭವಾಗುತ್ತಿರುವ ಈ ಸಮಯದಲ್ಲಿ ಮೊಟೊರೊಲಾ ಕಂಪೆನಿಯು ಹಲವು 5G ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿದ್ದು, ಇಂದು ದೇಶದಲ್ಲಿ ಮೊಟೊರೊಲಾ ಕಂಪೆನಿಯ ಮತ್ತೊಂದು ಬಹುನಿರೀಕ್ಷಿತ 5G ಸ್ಮಾರ್ಟ್‌ಪೋನ್ Moto G32 ಬಿಡುಗಡೆಯಾಗಿದೆ. ಕಳೆದ ಹಲವು ದಿನಗಳಿಂದಲೂ ವದಂತಿಗಳಿಂದಲೇ ಸುದ್ದಿಯಾಗಿದ್ದ Moto G32 ಸ್ಮಾರ್ಟ್‌ಪೋನ್ ಅನ್ನು ಇಂದು ಸರಳ ಸಮಾರಂಭದಲ್ಲಿ ದೇಶದಲ್ಲಿ ಪರಿಚಯಿಸಲಾಗಿದ್ದು, Qualcomm Snapdragon 695 SoC ಪ್ರೊಸೆಸರ್, 12 5G ಬ್ಯಾಂಡ್‌ಗಳಿಗೆ ಬೆಂಬಲ, 50-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, Dolby Atmos ಸ್ಟಿರಿಯೊ ಸ್ಪೀಕರ್ ಮತ್ತು 5,000mAh ಬ್ಯಾಟರಿಯಂತಹ ವೈಶಿಷ್ಟ್ಯಗಳನ್ನು ಹೊತ್ತು Moto G32 ಸ್ಮಾರ್ಟ್‌ಪೋನ್ ಎಂಟ್ರಿ ನೀಡಿದೆ. ಹಾಗಾದರೆ, ಬಹುನಿರೀಕ್ಷಿತ 5G ಸ್ಮಾರ್ಟ್‌ಪೋನ್ Moto G32 ಸಾಧನ ಹೇಗಿದೆ ಮತ್ತು ಬೆಲೆಗಳು ಎಷ್ಟು ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.

Moto G62 ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು
ನೂತನ Moto G62 ಸ್ಮಾರ್ಟ್‌ಫೋನ್ 6.5-ಇಂಚಿನ ಫುಲ್ HD+ (1,080x2,400 ಪಿಕ್ಸೆಲ್‌ಗಳು) LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 20:9 ಆಕಾರ ಅನುಪಾತದಲ್ಲಿದ್ದು, 120Hz ರಿಫ್ರೆಶ್ ರೇಟ್ ಮತ್ತು 405ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಹುಡ್ ಅಡಿಯಲ್ಲಿ, Qualcomm Snapdragon 695 SoC ಪ್ರೊಸೆಸರ್‌ನಿಂದ ಚಾಲಿತವಾಗಿರುವ Moto G62 ಸ್ಮಾರ್ಟ್‌ಫೋನ್ ಅನ್ನು 8GB RAM ಮತ್ತ 128GB ಆಂತರಿಕ ಮೆಮೊರಿಯೊಂದಿಗೆ ಜೋಡಿಸಲಾಗಿದೆ. ಫೋಟೋಗಳು ಮತ್ತು ವೀಡಿಯೊಗಳಿಗಾಗಿ, Moto G62 ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಕ್ವಾಡ್-ಪಿಕ್ಸೆಲ್ ತಂತ್ರಜ್ಞಾನ ಮತ್ತು PDAF ವೈಶಿಷ್ಟ್ಯವಿರುವ f/1.8 ಅಪಾರ್ಚರ್ ಲೆನ್ಸ್‌ನೊಂದಿಗಿನ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, f/2.2 ಅಪಾರ್ಚರ್ ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ 8-ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು f/2.4 ಅಪರ್ಚರ್ ಲೆನ್ಸ್‌ನೊಂದಿಗೆ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನು ಮುಂಭಾಗದಲ್ಲಿ ಕ್ವಾಡ್-ಪಿಕ್ಸೆಲ್ ತಂತ್ರಜ್ಞಾನವನ್ನು ಹೊಂದಿರುವ 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವ್ನು ನೀಡಲಾಗಿದೆ.

Moto G62 ಸ್ಮಾರ್ಟ್‌ಫೋನಿನ ಕನೆಕ್ಟಿವಿಟಿ ಆಯ್ಕೆಗಳು ಡ್ಯುಯಲ್-ಬ್ಯಾಂಡ್ Wi-Fi, 5G (12 5G ಬ್ಯಾಂಡ್‌ಗಳು), 4G LTE, ಬ್ಲೂಟೂತ್ v5.1, 3.5mm ಹೆಡ್‌ಫೋನ್ ಪೋರ್ಟ್ ಮತ್ತು USB ಟೈಪ್-C ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ರೀಡರ್, ಸಾಮೀಪ್ಯ ಸಂವೇದಕ, ವೇಗವರ್ಧಕ, ಸುತ್ತುವರಿದ ಬೆಳಕಿನ ಸಂವೇದಕ, ಗೈರೊಸ್ಕೋಪ್ ಮತ್ತು ಇ-ದಿಕ್ಸೂಚಿ ಸಂವೇದಕಗಳ ಜೊತೆಗೆ ಬಯೋಮೆಟ್ರಿಕ್ ಭದ್ರತೆಗಾಗಿ ಹ್ಯಾಂಡ್‌ಸೆಟ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ನೀಡಲಾಗಿದೆ. 20W ಫಾಸ್ಟ್ ಚಾರ್ಜಿಂಗ್ ಬೆಂಬಲದ ಜೊತೆಗೆ 5,000mAh ಬ್ಯಾಟರಿ, ಡ್ಯುಯಲ್-ಸಿಮ್ (ನ್ಯಾನೊ), ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಡ್ಯುಯಲ್ ಮೈಕ್ರೊ ಫೋನ್‌ಗಳು, ಬಯೋಮೆಟ್ರಿಕ್ ಭದ್ರತೆಗಾಗಿ ಹ್ಯಾಂಡ್‌ಸೆಟ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕ, ಥಿಂಕ್‌ಶೀಲ್ಡ್ ಮೊಬೈಲ್ ಸೆಕ್ಯುರಿಟಿ, ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP52 ರೇಟಿಂಗ್ ಮತ್ತು ಮೈಕ್ರೋ SD ಕಾರ್ಡ್ ಸಹಾಯದಿಂದ 1TB ವರೆಗೆ ಮೆಮೊರಿಯನ್ನು ವಿಸ್ತರಿಸಬಹುದಾದ ಹಲವು ವೈಶಿಷ್ಟ್ಯಗಳನ್ನು Moto G62 ಸ್ಮಾರ್ಟ್‌ಫೋನ್ ಹೊಂದಿದೆ.

ಭಾರತದಲ್ಲಿ Moto G62 ಸ್ಮಾರ್ಟ್‌ಫೋನಿನ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Moto G62 ಸ್ಮಾರ್ಟ್‌ಫೋನನ್ನು 17,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. 6GB RAM + 128GB ಸ್ಟೋರೇಜ್ ಮಾದರಿಯ Moto G62 ಫೋನ್ 17,999 ರೂ.ಗಳಿಗೆ, 8GB RAM + 128GB ಸ್ಟೋರೇಜ್ ಮಾದರಿಯ Moto G62 ಫೋನ್ 19,999 ರೂ.ಗಳ ಬೆಲೆ ಹೊತ್ತು ಬಿಡುಗಡೆಯಾಗಿದೆ. ಇದೇ ಆಗಸ್ಟ್ 19 ರಿಂದ ಫ್ಲಿಪ್‌ಕಾರ್ಟ್ ಮತ್ತು ಪ್ರಮುಖ ಆಫ್‌ಲೈನ್ ಔಟ್‌ಲೆಟ್‌ಗಳಲ್ಲಿ Moto G62 ಸ್ಮಾರ್ಟ್‌ಫೋನ್ ಮಾರಾಟಕ್ಕೆ ಬರುತ್ತಿದ್ದು, ಫ್ರಾಸ್ಟೆಡ್ ಬ್ಲೂ ಮತ್ತು ಮಿಡ್ನೈಟ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಈ ಸ್ಮಾರ್ಟ್‌ಫೋನನ್ನು ಖರೀದಿಸಬಹುದು ಎಂದು ಕಂಪೆನಿ ತಿಳಿಸಿದೆ. ಇನ್ನು Moto G62 ಸ್ಮಾರ್ಟ್‌ಫೋನಿನ ಬಿಡುಗಡೆಯ ಕೊಡುಗೆಯಾಗಿ HDFC ಬ್ಯಾಂಕ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಶೇ.10 ರಷ್ಟು ಇನ್‌ಸ್ಟಂಟ್ ಡಿಸ್ಕೌಂಟ್ ಅನ್ನು ಒದಗಿಸಲಾಗಿದೆ.
Moto G62 5g Smartphone Launched In India, Price, Specifications.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm