ಬ್ರೇಕಿಂಗ್ ನ್ಯೂಸ್
21-06-22 07:49 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಸ್ಮಾರ್ಟ್‌ವಾಚ್ ಬ್ರ್ಯಾಂಡ್ Ambrane ತನ್ನ ವಿನೂತನ Ambrane Wise Roam ಸ್ಮಾರ್ಟ್‌ವಾಚ್ ಅನ್ನು ಭಾರತದಲ್ಲಿಂದು ಬಿಡುಗಡೆಗೊಳಿಸಿದೆ. 1.28-ಇಂಚಿನ ವೃತ್ತಾಕಾರದ ಪ್ರದರ್ಶನ ವಿನ್ಯಾಸದಲ್ಲಿ Ambrane Wise Roam ಸ್ಮಾರ್ಟ್‌ವಾಚ್ ಅನ್ನು ದೇಶದಲ್ಲಿ ಪರಿಚಯಿಸಲಾಗಿದ್ದು, IP68 ನೀರು ಮತ್ತು ಧೂಳಿನ ನಿರೋಧಕ ರೇಟಿಂಗ್, 10 ದಿನಗಳ ಬ್ಯಾಟರಿ ಅವಧಿಯನ್ನು ನೀಡುವ 260 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವುದು ಸೇರಿದಂತೆ, ಅನೇಕ ಆರೋಗ್ಯ ಮತ್ತು ಫಿಟ್‌ನೆಸ್ ವೈಶಿಷ್ಟ್ಯಗಳನ್ನು ಹೊತ್ತು Ambrane Wise Roam ಸ್ಮಾರ್ಟ್‌ವಾಚ್ ಮಾರುಕಟ್ಟೆಗೆ ಬಂದಿದೆ. ಹಾಗಾದರೆ, ನೂತನ Ambrane Wise Roam ಸ್ಮಾರ್ಟ್‌ವಾಚ್ ಹೇಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
Ambrane Wise Roam ಸ್ಮಾರ್ಟ್‌ವಾಚ್ ವೈಶಿಷ್ಟ್ಯಗಳು
ಮೊದಲೇ ಹೇಳಿದಂತೆ, ನೂತನ Ambrane Wise Roam ಸ್ಮಾರ್ಟ್‌ವಾಚ್ 240x240 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯದ 1.28-ಇಂಚಿನ ವೃತ್ತಾಕಾರದ 2.5D ಬಾಗಿದ ಗಾಜಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 450 ನಿಟ್‌ಗಳ ಗರಿಷ್ಠ ಹೊಳಪನ್ನು ಹೊಂದಿದ್ದು, ಇದು ಹೊಳಪನ್ನು ಮಂದಗೊಳಿಸುವ ಥಿಯೇಟರ್ ಮೋಡ್ ಸಹಾಯದಿಂದ ಸ್ವಯಂಚಾಲಿತವಾಗಿ ಹಗಲು ಬೆಳಕನ್ನು ಹೊಂದಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. IP68 ನೀರು ಮತ್ತು ಧೂಳಿನ ನಿರೋಧಕ ರೇಟಿಂಗ್ ಅನ್ನು ಹೊಂದಿರುವ ಈ ಸಾಧನವು Bluetooth v5 ಅನ್ನು ಬೆಂಬಲಿಸಲಿದೆ. ಇದು ಬ್ಲೂಟೂತ್ ಕರೆ ಮಾಡುವ ಸೌಲಭ್ಯವನ್ನು ಸಹ ತಂದಿದೆ. Android ಮತ್ತು iOS ನೊಂದಿಗೆ ಹೊಂದಿಕೊಳ್ಳುವ ಈ ಸ್ಮಾರ್ಟ್‌ವಾಚ್ ಅನ್ನು ಬಳಕೆದಾರರ ಉತ್ತಮ ಅನುಭವಕ್ಕಾಗಿ Da Fit ಅಪ್ಲಿಕೇಶನ್ ಜೊತೆ ಜೋಡಿಸಲಾಗಿದೆ.

Ambrane Wise Roam ಸ್ಮಾರ್ಟ್‌ವಾಚ್‌ನಲ್ಲಿ 60 ಕ್ರೀಡಾ ವಿಧಾನಗಳು, 100 ಕ್ಕೂ ಹೆಚ್ಚು ವಾಚ್ ಫೇಸ್‌ಗಳು, ಹೃದಯ ಬಡಿತ ಮಾನಿಟರಿಂಗ್, SpO2, ರಕ್ತದೊತ್ತಡ, ಮತ್ತು ಋತುಚಕ್ರದ ಟ್ರ್ಯಾಕರ್ ಸೇರಿದಂತೆ ಅನೇಕ ಆರೋಗ್ಯ ಟ್ರ್ಯಾಕಿಂಗ್ ಮತ್ತು ಮೇಲ್ವಿಚಾರಣಾ ವೈಶಿಷ್ಟ್ಯಗನ್ನು ತರಲಾಗಿದೆ. ಇನ್‌ಬಿಲ್ಟ್ ಮೈಕ್ ಮತ್ತು ಸ್ಪೀಕರ್‌ನೊಂದಿಗೆ ಬ್ಲೂಟೂತ್ ಕರೆ ಮಾಡುವ ಈ ಸ್ಮಾರ್ಟ್‌ವಾಚ್, ಸೆಡೆಂಟರಿ ಅಲರ್ಟ್, ಹವಾಮಾನ, ಅಲಾರಾಂ, ಟೈಮರ್, ಫ್ಲ್ಯಾಷ್‌ಲೈಟ್ ಮತ್ತು ಫೋನ್ ಫೈಂಡ್ ಸೇರಿದಂತೆ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಪ್ರದರ್ಶಿಸುತ್ತದೆ. ಹಾಗೆಯೇ, ಈ ಸಾಧನವು ರಿಮೋಟ್, ಕ್ಯಾಮೆರಾ, ಮ್ಯೂಸಿಕ್ ಪ್ಲೇಯರ್‌ಗಾಗಿ ಸ್ಮಾರ್ಟ್ ನಿಯಂತ್ರಣಗಳೊಂದಿಗೆ ಸಂದೇಶ ಅಧಿಸೂಚನೆಗಳು ಮತ್ತು ಧ್ವನಿ ಸಹಾಯದ ಬೆಂಬಲದೊಂದಿಗೆ ಬರುತ್ತದೆ.

Ambrane Wise Roam ಸ್ಮಾರ್ಟ್‌ವಾಚ್ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Ambrane Wise Roam ಸ್ಮಾರ್ಟ್‌ವಾಚ್ ಅನ್ನು 5,999 ರೂ.ಗಳ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿಯಾದರೂ ಸಹ 2,499 ರೂ.ಗಳ ಪರಿಚಯಾತ್ಮಕ ಬೆಲೆಯಲ್ಲಿ ಸ್ಮಾರ್ಟ್‌ವಾಚ್ ಅನ್ನು ಮಾರಾಟ ಮಾಡುತ್ತಿರುವುದಾಗಿ ಕಂಪೆನಿ ತಿಳಿಸಿದೆ. Ambrane ಇಂಡಿಯಾದ ಕಂಪೆನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಫರ್ನ್ ಗ್ರೀನ್, ಜೇಡ್ ಬ್ಲ್ಯಾಕ್ ಮತ್ತು ಸ್ಟೋನ್ ಗ್ರೇ ಮೂರು ಬಣ್ಣಗಳಲ್ಲಿ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಜೇಡ್ ಬ್ಲ್ಯಾಕ್ ಮತ್ತು ಸ್ಟೋನ್ ಗ್ರೇ ಎರಡು ಬಣ್ಣಗಳಲ್ಲಿ Ambrane Wise Roam ಸ್ಮಾರ್ಟ್‌ವಾಚ್ ಅನ್ನು ಮಾರಾಟ ಮಾಡಲಾಗುತ್ತಿದ್ದು, ಆಯ್ದ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಶೇಕಡಾ 10 ರಷ್ಟು ರಿಯಾಯಿತಿ ಸೇರಿದಂತೆ ಹಲವು ಪ್ರಯೋಜನೆಗಳನ್ನು ಪಡೆಯಬಹುದು ಎಂದು Ambrane ಕಂಪೆನಿ ತಿಳಿಸಿದೆ.
Ambrane Wise Roam With Launched In India.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm