ಬ್ರೇಕಿಂಗ್ ನ್ಯೂಸ್
21-05-22 04:19 pm HK News Desk ಕ್ರೈಂ
ಕೊಚ್ಚಿ, ಮೇ 21: ಅಫ್ಘಾನಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ತರಲಾಗುತ್ತಿದ್ದ ಬರೋಬ್ಬರಿ 1500 ಕೋಟಿ ರೂಪಾಯಿ ಮೌಲ್ಯದ 218 ಕೇಜಿ ಹೆರಾಯಿನ್ ಮಾದಕ ದ್ರವ್ಯವನ್ನು ಲಕ್ಷದ್ವೀಪ ಸಮುದ್ರ ಬಳಿ ಡಿಆರ್ ಐ ಮತ್ತು ಇಂಡಿಯನ್ ಕೋಸ್ಟ್ ಗಾರ್ಡ್ ಅಧಿಕಾರಿಗಳು ವಿಶೇಷ ಕಾರ್ಯಾಚರಣೆಯಲ್ಲಿ ಪತ್ತೆ ಮಾಡಿದ್ದಾರೆ.
ಕಳೆದ ಹಲವಾರು ತಿಂಗಳಿಂದ ಲಭಿಸಿದ್ದ ಮಾಹಿತಿಯಂತೆ ಡ್ರಗ್ಸ್ ಭಾರತಕ್ಕೆ ಬರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಲಕ್ಷದ್ವೀಪ ಸಮುದ್ರದಲ್ಲಿ ಡಿಆರ್ ಐ ಮತ್ತು ಕೋಸ್ಟ್ ಗಾರ್ಡ್ ಪಡೆ ಜಂಟಿ ಕಾರ್ಯಾಚರಣೆ ಆರಂಭಿಸಿತ್ತು. ಮೇ 7ರಿಂದ ಆಪರೇಶನ್ ಖೋಜ್ ಬೀನ್ ಹೆಸರಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಲಕ್ಷದ್ವೀಪ ಆಸುಪಾಸಿನಲ್ಲಿ ಕಂಡುಬರುವ ಬೋಟ್ ಗಳನ್ನು ತಪಾಸಣೆಯಲ್ಲಿ ತೊಡಗಿದ್ದರು. ಮೇ 18ರಂದು ಭಾರತದ ನೋಂದಣಿಯ ಪ್ರಿನ್ಸ್ ಮತ್ತು ಲಿಟಲ್ ಜೀಸಸ್ ಹೆಸರಿನ ಎರಡು ಬೋಟ್ ಗಳು ಕಂಡುಬಂದಿದ್ದು ತಪಾಸಣೆ ನಡೆಸಿದ್ದಾರೆ. ಲಕ್ಷದ್ವೀಪ ಸಮುದ್ರದ ಅಗಟ್ಟಿ ದ್ವೀಪದ ಬಳಿ ಎರಡು ಬೋಟ್ ಪತ್ತೆಯಾಗಿದ್ದು, ಅದರಲ್ಲಿ ನೋಡಿದಾಗ ಅಗಾಧ ಪ್ರಮಾಣದಲ್ಲಿ ಡ್ರಗ್ಸ್ ಸ್ಟೋರೇಜ್ ಇರುವುದನ್ನು ಪತ್ತೆ ಮಾಡಿದ್ದಾರೆ.

ಎರಡು ಮೀನುಗಾರಿಕಾ ಬೋಟಿನ ಅಡಿಭಾಗದಲ್ಲಿ ಯಾರಿಗೂ ಕಾಣಿಸದಂತೆ ಪ್ಲಾಸ್ಟಿಕ್ ಚೀಲಗಳಲ್ಲಿ ಹೆರಾಯಿನ್ ಅಡಗಿಸಿಡಲಾಗಿತ್ತು. 218 ಕೇಜಿ ಹೆರಾಯಿನ್ ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1526 ಕೋಟಿ ರೂಪಾಯಿ ಬೆಲೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಕಾರ್ಯಾಚರಣೆಗೆ ಇಂಡಿಯನ್ ಕೋಸ್ಟ್ ಗಾರ್ಡ್ ಪಡೆಯ ಐಸಿಜಿ ಸುಜೀತ್ ಹೆಸರಿನ ಹಡಗನ್ನು ಬಳಸಲಾಗಿತ್ತು. ಎರಡು ಬೋಟಿನಲ್ಲಿ 20 ಮಂದಿ ಕಾರ್ಮಿಕರಿದ್ದು ಅವರನ್ನು ಕೋಸ್ಟ್ ಗಾರ್ಡ್ ಪಡೆ ವಶಕ್ಕೆ ಪಡೆದಿದೆ. ಎರಡು ಬೋಟ್ ಮತ್ತು ಕಾರ್ಮಿಕರನ್ನು ಕೇರಳದ ಕೊಚ್ಚಿಯಲ್ಲಿರುವ ಕೋಸ್ಟ್ ಗಾರ್ಡ್ ನೆಲೆಗೆ ಕರೆತರಲಾಗಿದೆ. 218 ಕೇಜಿ ಹೆರಾಯಿನನ್ನು ತಲಾ ಒಂದು ಕೇಜಿ ಚೀಲದಂತೆ ಪ್ಯಾಕೆಟ್ ಮಾಡಲಾಗಿತ್ತು. ಬೋಟ್ ಮೂಲಕ ತಮಿಳುನಾಡಿಗೆ ಡ್ರಗ್ಸ್ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗುತ್ತಿದೆ.

ಕೋಸ್ಟ್ ಗಾರ್ಡ್ ಮತ್ತು ಡಿಆರ್ ಐ ಅಧಿಕಾರಿಗಳು ಒಂದು ತಿಂಗಳ ಅಂತರದಲ್ಲಿ 2500 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಸಮುದ್ರ ಮಾರ್ಗದಲ್ಲಿ ಭಾರೀ ಕಳ್ಳಸಾಗಾಣಿಕೆ ಆಗುತ್ತಿದ್ದು ಕಳೆದ ಎಪ್ರಿಲ್ 20ರಂದು 205 ಕೇಜಿ ಹೆರಾಯಿನ್ ವಶಕ್ಕೆ ಪಡೆಯಲಾಗಿತ್ತು. ಎಪ್ರಿಲ್ 29ರಂದು 396 ಕೇಜಿ ಹೆರಾಯಿನ್ ಲೇಸ್ಡ್ ಮತ್ತು 62 ಕೇಜಿ ಹೆರಾಯಿನ್ ವಶಕ್ಕೆ ಪಡೆಯಲಾಗಿತ್ತು. ಇದೀಗ ಮೇ 18ರಂದು ಮತ್ತೊಂದು ಬೃಹತ್ ಕಾರ್ಯಾಚರಣೆಯಲ್ಲಿ ಡ್ರಗ್ಸ್ ಕಳ್ಳಸಾಗಣೆ ಪತ್ತೆಯಾಗಿದೆ.
In yet another narcotics haul, the Indian Coast Guard (ICG) and the Directorate of Revenue Intelligence (DRI) jointly seized 218 kg of heroin worth Rs 1,526 crore smuggled in from Afghanistan which was being taken through sea route.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 10:48 pm
Mangalore Correspondent
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
05-11-25 09:39 pm
Mangalore Correspondent
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm