ಬ್ರೇಕಿಂಗ್ ನ್ಯೂಸ್
06-05-22 10:38 pm Mangalore Correspondent ಕ್ರೈಂ
ಮಂಗಳೂರು, ಮೇ 6 : 85 ವರ್ಷದ ವೃದ್ಧ ಮಹಿಳೆಯ ಜಾಗ ಖರೀದಿ ನೆಪದಲ್ಲಿ ಮೂವರು ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಾಗ ಲಪಟಾಯಿಸಲು ಯತ್ನಿಸಿದ ಘಟನೆ ನಡೆದಿದ್ದು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಜ್ಪೆ ಬಳಿಯ ಕೊಂಪದವು ನಿವಾಸಿ ಕ್ರಿಸ್ತಿನ್ ಎಡ್ವಿನ್ ಜೋಸೆಫ್ ಗೊನ್ಸಾಲ್ವಿಸ್ ಎಂಬ 84 ವರ್ಷದ ಮಹಿಳೆಯು ತನ್ನ ಉಡುಪಿ ಜಿಲ್ಲೆಯ ತೋನ್ಸೆ ಗ್ರಾಮದಲ್ಲಿ 77 ಸೆಂಟ್ಸ್ ಜಾಗ ಹೊಂದಿದ್ದು ಅದನ್ನು ಮಾರಾಟ ಮಾಡುವುದಕ್ಕಾಗಿ ರಾಮ ಪೂಜಾರಿ ಎಂಬವರಲ್ಲಿ ಪಾರ್ಟಿ ನೋಡಲು ಹೇಳಿದ್ದರು. ಅದರಂತೆ, ಅಶೋಕ್ ಕುಮಾರ್ ಮತ್ತು ರೇಷ್ಮಾ ವಾಸುದೇವ ನಾಯಕ್ ಎಂಬವರನ್ನು ಜಾಗ ಖರೀದಿಸಲು ಮಾತುಕತೆ ನಡೆಸಿದ್ದರು. ಪ್ರತಿ ಸೆಂಟ್ಸ್ ಜಾಗಕ್ಕೆ 2.75 ಲಕ್ಷದಂತೆ ಖರೀದಿ ಒಪ್ಪಂದ ಆಗಿದ್ದು ಆರಂಭದಲ್ಲಿ ಆರು ತಿಂಗಳ ಕರಾರು ನಡೆಸಿ 30 ಲಕ್ಷ ಅಡ್ವಾನ್ಸ್ ಹಣ ನೀಡಲಾಗಿತ್ತು. ಕರಾರಿನ ಪ್ರಕಾರ ಆರು ತಿಂಗಳಲ್ಲಿ ಜಾಗದ ಪೂರ್ತಿ ಹಣ ನೀಡಬೇಕಾಗಿತ್ತು.
ಆದರೆ ಹಣ ಪೂರ್ತಿ ನೀಡಲು ಸಾಧ್ಯವಾಗದ ಕಾರಣ ಮೊದಲಿಗೆ 40 ಸೆಂಟ್ ಜಾಗವನ್ನು ಮಾತ್ರ ರಿಜಿಸ್ಟರ್ ಮಾಡಿಕೊಳ್ಳಲು ಮಾತುಕತೆ ನಡೆಸಲಾಗಿತ್ತು. ಅದಕ್ಕೆ ಜಾಗದ ಒಡತಿ ಕ್ರಿಸ್ತಿನ್ ಎಡ್ವುನ್ ಒಪ್ಪಿದ್ದರು. ಅದರಂತೆ ಉಳಿದ ಹಣವನ್ನು ಕೊಟ್ಟು ರಿಜಿಸ್ಟರ್ ಮಾಡಬೇಕಿತ್ತು. ಈ ನಡುವೆ ಬೆಂಗಳೂರು ತೆರಳಿದ್ದ ಮಹಿಳೆಗೆ ಜಾಗವನ್ನು ರಿಜಿಸ್ಟರ್ ಮಾಡಿದ್ದಾಗಿ ನಕಲಿ ದಾಖಲೆ ಪತ್ರಗಳನ್ನು ಕಳಿಸಿಕೊಟ್ಟಿದ್ದರು. ಆದರೆ ಉಳಿದ 46 ಲಕ್ಷ ಹಣಕ್ಕೆ ಬ್ಯಾಂಕ್ ಚೆಕ್ ನೀಡಿದ್ದರು. ಚೆಕ್ ನಗದೀಕರಣಕ್ಕಾಗಿ ಬ್ಯಾಂಕಿಗೆ ಹಾಕಿದಾಗ, ಬೌನ್ಸ್ ಆಗಿತ್ತು. ಈ ಬಗ್ಗೆ ಮಹಿಳೆ ಕೇಳಿದಾಗ ಹಣ ನೀಡುವುದಾಗಿ ನಂಬಿಸುತ್ತಿದ್ದರು.
ಮಹಿಳೆಯು ಆನಂತರ ತನ್ನ ಪರಿಚಯಸ್ಥರ ಬಳಿ ಜಾಗದ ಬಗ್ಗೆ ಕೇಳಿದಾಗ, ಅಲ್ಲಿ ಕಟ್ಟಡ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದ್ದರು. ಅಲ್ಲದೆ, ಪೂರ್ತಿ 77 ಸೆಂಟ್ಸ್ ಜಾಗವನ್ನು ಸದ್ರಿ ಮಹಿಳೆಗೆ ತಿಳಿಯದಂತೆ ಅಶೋಕ್ ಕುಮಾರ್ ಮತ್ತು ರೇಷ್ಮಾ ನಾಯಕ್ ಹೆಸರಿಗೆ ಪೋರ್ಜರಿಯಾಗಿ ಮಾಡಿರುವುದನ್ನು ತಿಳಿಸಿದ್ದರು. ಜಾಗದ ದಾಖಲಾತಿ ಬದಲಿಸಲು ಮಹಿಳೆಯ ಹೆಸರಿನಲ್ಲಿ ಪತ್ರಿಕೆಗೆ ಜಾಹೀರಾತನ್ನೂ ನೀಡಲಾಗಿತ್ತು. ಅದಲ್ಲದೆ, ಜಾಗವನ್ನು ಭೂ ದಾಖಲಾತಿ ಬದಲಾವಣೆಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮಹಿಳೆಯ ಹೆಸರಲ್ಲಿ ಅರ್ಜಿ ಸಲ್ಲಿಸಿದ್ದು ತಿಳಿದುಬಂದಿದೆ. ಜಾಗವನ್ನು ಲಪಟಾಯಿಸಿದ್ದಲ್ಲದೆ, ಅದರ ಬಾಬ್ತು 60 ಲಕ್ಷ ಹಣವನ್ನು ನೀಡದೆ ವಂಚಿಸಿರುವ ಬಗ್ಗೆ ಮಂಗಳೂರಿನ ಸೈಬರ್ ಮತ್ತು ಆರ್ಥಿಕ ಅಪರಾಧಗಳ ಠಾಣೆಯಲ್ಲಿ ಮಹಿಳೆ ಎಡ್ವಿನ್ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ಮಂಗಳೂರಿನ ಅಶೋಕ್ ಕುಮಾರ್ ಮತ್ತು ರೇಷ್ಮಾ ನಾಯಕ್ ಅವರನ್ನು ಬಂಧಿಸಿದ್ದಾರೆ. ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಏಳು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
Mangalore Two arrested for creating fake land documents of 85 cents. The arrested have been identified as Ashok Kumar and Reshma Vasudev Naya.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm