ಬ್ರೇಕಿಂಗ್ ನ್ಯೂಸ್
22-03-22 10:38 am Mangalore Correspondent ಕ್ರೈಂ
ಮಂಗಳೂರು, ಮಾ.22: ಒಂದೆಡೆ ಹೆಲ್ಪ್ ಇಂಡಿಯಾ ಹೆಸರಲ್ಲಿ ಸಮಾಜಸೇವಕನ ಫೋಸು, ಪೊಲೀಸ್ ಅಧಿಕಾರಿಗಳು, ರಾಜಕೀಯ ಗಣ್ಯರ ನಂಟು, ಇನ್ನೊಂದೆಡೆ ಕತ್ತಲ ಸಾಮ್ರಾಜ್ಯದಲ್ಲಿ ಅನೈತಿಕ ದಂಧೆ... ಪಿಯುಸಿ ಹುಡುಗಿಯರ ಬ್ಲಾಕ್ಮೇಲ್, ವೇಶ್ಯಾವಾಟಿಕೆ ದಂಧೆಯಲ್ಲಿ ಉಳ್ಳಾಲದ ಸ್ವಯಂಘೋಷಿತ ಸಮಾಜ ಸೇವಕ, ಶಾಸಕ ಯುಟಿ ಖಾದರ್ ಆಪ್ತ ರಾಝಿಕ್ ಉಳ್ಳಾಲ್ ನನ್ನು ನಗರದ ಸಿಸಿಬಿ ಪೊಲೀಸರು ಪೋಕ್ಸೊ ಕಾಯ್ದೆಯಡಿ ಬಂಧಿಸಿದ್ದಾರೆ.
ಇತ್ತೀಚೆಗೆ ಮಂಗಳೂರು ನಗರದ ನಂದಿಗುಡ್ಡೆಯ ಫ್ಲಾಟ್ ಒಂದರಲ್ಲಿ ನಡೆಯುತ್ತಿದ್ದ ಅಪ್ರಾಪ್ತ ಪಿಯುಸಿ ಹುಡುಗಿಯರ ಬ್ಲಾಕ್ಮೇಲ್, ವೇಶ್ಯಾವಾಟಿಕೆ ಪ್ರಕರಣ ಸಂಬಂಧಿಸಿ ಮಂಗಳೂರು ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದ್ದರು. ಇಬ್ಬರು ಅಪ್ರಾಪ್ತ ಬಾಲಕಿಯರ ದೂರಿನಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿದ್ದವು. ಈಗಾಗಲೇ 15 ಮಂದಿಯನ್ನು ಬಂಧಿಸಿದ್ದು ತನಿಖೆ ಚುರುಕುಗೊಳಿಸಿದಾಗ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಉಳ್ಳಾಲದ ಸ್ವಯಂಘೋಷಿತ ಸಮಾಜ ಸೇವಕ ಅಬ್ದುಲ್ ರಾಝೀಕ್ (44) ಯಾನೆ ರಫೀಕ್ ಉಳ್ಳಾಲ ಸಿಕ್ಕಿಬಿದ್ದಿದ್ದಾನೆ. ಮಂಗಳೂರು ಸಿಸಿಬಿ ಪೊಲೀಸರು ಆರೋಪಿಯನ್ನು ಮಾ.18ರಂದು ಸದ್ದಿಲ್ಲದೆ ಪೋಕ್ಸೊ ಕಾಯ್ದೆಯಡಿ ಜೈಲಿಗೆ ತಳ್ಳಿದ್ದು ಮೂರು ದಿನಗಳ ಬಳಿಕ ವಿಷಯ ಬಯಲಾಗಿದೆ.
ಖೆಡ್ಡಾಕ್ಕೆ ಬಿದ್ದ ಅನಾಥರ ಆರೈಕೆ ಸೋಗಿನ ಸಮಾಜಸೇವಕ !
ರಸ್ತೆ ಬದಿಯಲ್ಲಿ ಬಿದ್ದುಕೊಂಡಿದ್ದ ಒಂದಿಬ್ಬರು ಅನಾಥರನ್ನ ಕರೆತಂದು ಅವರ ಕೂದಲು, ಗಡ್ಡ ಬೋಳಿಸಿ ಪ್ರಚಾರ ಪಡೆದು ದಿಢೀರನೆ ಸಮಾಜ ಸೇವಕನಾಗಿದ್ದ ರಾಝಿಕ್ ಉಳ್ಳಾಲ್, ಹೆಲ್ಪ್ ಇಂಡಿಯಾ ಫೌಂಡೇಷನ್ ಎಂಬ ಸಂಸ್ಥೆಯನ್ನೂ ಹುಟ್ಟುಹಾಕಿದ್ದ. ಶಾಸಕ ಖಾದರ್ ಆಪ್ತನಾಗಿದ್ದರಿಂದ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಹೆಲ್ಪ್ ಇಂಡಿಯಾಕ್ಕೆ ಲಭಿಸುವಂತೆ ಮಾಡಿದ್ದ. ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದು ಅದರ ಪ್ಲೆಕ್ಸನ್ನ ಉಳ್ಳಾಲದೆಲ್ಲೆಡೆ ಹಾಕಿಸಿದ್ದ.
ಈ ಮೊದಲು ತೊಕ್ಕೊಟ್ಟಿನಲ್ಲಿ ನಷ್ಟದಲ್ಲೇ ಫಾಸ್ಟ್ ಫುಡ್ ವ್ಯವಹಾರ ನಡೆಸುತ್ತಿದ್ದ ರಾಝಿಕ್, ದಿಢೀರ್ ಆಗಿ ಐಷಾರಾಮಿ ಜೀವನ ನಡೆಸುತ್ತಾ ಸಮಾಜ ಸೇವೆಯ ಸೋಗು ಹಾಕಿದ್ದ. ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಕಾಂಗ್ರೆಸ್, ಬಿಜೆಪಿ ಪಕ್ಷದ ನಾಯಕರ ಒಡನಾಟ ಇರಿಸಿಕೊಂಡು, ಅವರ ಜೊತೆಗೆ ತೆಗೆದಿದ್ದ ಫೋಟೊಗಳನ್ನ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ. ನಕಲಿ ಸಮಾಜ ಸೇವಕ ರಾಝಿಕ್ ಕತ್ತಲ ಸಾಮ್ರಾಜ್ಯವು ಈಗ ಅನಾವರಣಗೊಂಡಿದ್ದು ಪಿಯುಸಿ ಹುಡುಗಿಯರ ಬ್ಲಾಕ್ಮೇಲ್ ದಂಧೆಯಲ್ಲಿ ಈತನದ್ದೂ ಪ್ರಮುಖ ಕೈವಾಡ ಇರುವುದು ಬೆಳಕಿಗೆ ಬಂದಿದೆ.
ರಾಝಿಕ್ ಮೂರು ದಿನಗಳ ಹಿಂದೆಯೇ ಬಂಧನ ಆಗಿದ್ದರೂ, ಈತ ಅವರಿಗೆ ಆಪ್ತ ಎನ್ನುವ ಕಾರಣಕ್ಕಾಗಿಯೋ ಏನೋ, ಆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮಾಧ್ಯಮಕ್ಕೆ ಸುದ್ದಿ ನೀಡದೆ ರಹಸ್ಯವಾಗಿಟ್ಟಿದ್ದರು. ಇದಲ್ಲದೆ, ರಾಝಿಕ್ ಉಳ್ಳಾಲ್ ತನಗೆ ಉಳ್ಳಾಲದ ನಟೋರಿಯಸ್ ಗ್ಯಾಂಗ್ ಒಂದರಿಂದ ಕೊಲೆ ಬೆದರಿಕೆ ಇದೆಯೆಂದು ಹೇಳಿ ಪರವಾನಗಿ ಹೊಂದಿರುವ ರಿವಾಲ್ವರನ್ನೂ ಪಡೆದಿದ್ದು ಅದನ್ನು ಹಿಡಿದುಕೊಂಡೇ ತಿರುಗಾಡುತ್ತಿದ್ದ.
ಹರೆಯದ ಹುಡುಗಿಯರೇ ದಾಳ, ಹಣಕ್ಕಾಗಿ ಹೀನ ದಂಧೆ !
ಅತ್ತಾವರದ ನಂದಿಗುಡ್ಡೆಯ ಫ್ಲಾಟ್ ಒಂದರಲ್ಲಿ ಸಮೀನಾ ಎಂಬ ಮಹಿಳೆಯ ನೇತೃತ್ವದಲ್ಲಿ ಹರೆಯದ ಹುಡುಗಿಯರನ್ನು ದಾಳವಾಗಿಸಿ ಅನೈತಿಕ ದಂಧೆ ನಡೆಸುತ್ತಿದ್ದುದನ್ನು ಫೆಬ್ರವರಿ ಮೊದಲ ವಾರದಲ್ಲಿ ಪತ್ತೆ ಮಾಡಲಾಗಿತ್ತು. ಈ ಬಗ್ಗೆ ಇಬ್ಬರು ಪಿಯುಸಿ ಹುಡುಗಿಯರು ನೀಡಿದ ದೂರನ್ನು ಆಧರಿಸಿ, ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಹತ್ತು ಪ್ರಕರಣ ದಾಖಲಾಗಿದ್ದು 15 ಮಂದಿಯನ್ನು ಬಂಧಿಸಲಾಗಿದೆ. ಹುಡುಗಿಯರ ಹೇಳಿಕೆ ಮತ್ತು ಪಿಂಪ್ ಆಗಿರುತ್ತಿದ್ದ ಮಹಿಳೆಯರ ಮೊಬೈಲ್ ನಲ್ಲಿ ದಾಖಲಾದ ಗಿರಾಕಿಗಳ ಹೆಸರು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಅಪ್ರಾಪ್ತ ಬಾಲಕಿಯರಿಗೆ ಬ್ಲಾಕ್ಮೇಲ್ ಮತ್ತು ಹಣದ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಕಳೆದ ಬಾರಿ 65 ವರ್ಷ ಮೀರಿದ ನಾಲ್ವರು ಮುದುಕರನ್ನೂ ಇದೇ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಇದೀಗ ಮಾರ್ಚ್ 18 ರಂದು ರಾಝಿಕ್ ಉಳ್ಳಾಲ್ ಎಂಬಾತನನ್ನು ಖಚಿತ ಸಾಕ್ಷ್ಯದ ಜೊತೆಗೆ ಪೊಲೀಸರು ಬಂಧಿಸಿದ್ದು ಪೋಕ್ಸೋ ಕಾಯ್ದೆ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಈವರೆಗೆ ಒಟ್ಟು 16 ಮಂದಿ ಬಂಧಿತರಾಗಿದ್ದಾರೆ.
Mangalore Human trafficking, prostitution racket at Nandigudda social worker and close aide of U T Khader Razak Ullal arrested. The city crime branch (CCB) police have undertaken investigation into human trafficking of minor girls and women, prostitution etc which were going on in a flat at Nandigudda in the city. So far, a total of ten cases for these crimes have been registered in the women's police station here on the basis of complaints made by two minor girls. Fifteen persons have been arrested and produced in the court, after which all of them were remanded to judicial custody. The police, in their intensified operations connected with the sexual harassment of minor girls, took into custody and arrested Abdul Razik Ullal (44) alias Rafiq Ullal from Ullal here on March 18. He was produced in the court and sent to judicial custody.
26-08-25 07:07 pm
Bangalore Correspondent
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
SIT Issues Notice, Sujatha Bhat: ಸುಳ್ಳಜ್ಜಿ ಸು...
25-08-25 10:55 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:36 am
Mangalore Correspondent
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
26-08-25 05:24 pm
HK News Desk
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm