ಬ್ರೇಕಿಂಗ್ ನ್ಯೂಸ್
09-03-22 09:30 pm Mangalore Correspondent ಕ್ರೈಂ
ಪುತ್ತೂರು, ಮಾ.9: ವಿದೇಶದಿಂದ ಕೋಕೋ ಬೀನ್ಸ್ ಖರೀದಿ ಪ್ರಕ್ರಿಯೆಯಲ್ಲಿ ಕ್ಯಾಂಪ್ಕೋ ಸಂಸ್ಥೆಗೆ ಭಾರೀ ಪ್ರಮಾಣದ ವಂಚನೆ ಎಸಗಿದ್ದು ಎರಡು –ಮೂರು ವರ್ಷಗಳ ಹಿಂದೆ ನಡೆದಿತ್ತು. ಪ್ರಕರಣದಲ್ಲಿ ಕ್ಯಾಂಪ್ಕೋ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆಂದು ಗಂಭೀರ ಆರೋಪವೂ ಕೇಳಿಬಂದಿತ್ತು. ಆನಂತರ, ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಸಂಸ್ಥೆಯ ಮ್ಯಾನೇಜರ್ ಫ್ರಾನ್ಸಿಸ್ ಡಿಸೋಜ, ವಂಚನೆ ಪ್ರಕರಣದಲ್ಲಿ 9 ಕೋಟಿ ರೂಪಾಯಿ ನಷ್ಟ ಆಗಿರುವ ಬಗ್ಗೆ ತನಿಖೆ ನಡೆಸುವಂತೆ ಪುತ್ತೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಎರಡು ವರ್ಷದ ಬಳಿಕ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
2016ನೇ ಇಸವಿಯಲ್ಲಿ ಬಂಟ್ವಾಳ ತಾಲೂಕಿನ ಶಂಭೂರಿನಲ್ಲಿರುವ ಜೀವನ್ ಲೋಬೊ ಎಂಬವರಿಗೆ ಸೇರಿದ ಕೋಸ್ಪಾಕ್ ಏಶಿಯಾ ಇಂಟರ್ನ್ಯಾಶನಲ್ ಕಂಪೆನಿ ಜೊತೆಗೆ ಕೊಕ್ಕೋ ಬೀಜ ಖರೀದಿಗೆ ಕ್ಯಾಂಪ್ಕೋ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ, ಕೋಸ್ಪಾಕ್ ಏಶಿಯಾ ಕಂಪನಿಯು ವಿದೇಶಗಳಿಂದ ಅತ್ಯುತ್ತಮ ಕೊಕ್ಕೋ ಬೀಜ ಖರೀದಿಸಿ, ಕ್ಯಾಂಪ್ಕೋ ಸಂಸ್ಥೆಗೆ ಪೂರೈಕೆ ಮಾಡಬೇಕಿತ್ತು. ಆದರೆ ಜೀವನ್ ಲೋಬೊ ತನ್ನ ಮಿತ್ರ ವಿನ್ಸಿ ಪಿಂಟೋ ಎಂಬಾತನ ಮೂಲಕ ಬೋಗಸ್ ಕಂಪನಿ ಹೆಸರಲ್ಲಿ ವಿದೇಶದಿಂದ ಕೊಕ್ಕೋ ಬೀನ್ಸ್ ಖರೀದಿಸಿ, ಸೀಮಾ ಸುಂಕ, ಜಿಎಸ್ಟಿ ಪಾವತಿಸದೆ ಕಡಿಮೆ ಬೆಲೆಯ ಕೊಕ್ಕೋವನ್ನು ಕ್ಯಾಂಪ್ಕೋ ಸಂಸ್ಥೆಗೆ ಪೂರೈಸಿ ಕೋಟಿಗಟ್ಟಲೆ ವಂಚನೆ ಎಸಗಿದ್ದ.
ಮಂಗಳೂರು ಬಂದರಿನ ಮೂಲಕ ವಹಿವಾಟು ನಡೆಯುತ್ತಿದ್ದಾಗಲೇ ಕ್ಯಾಂಪ್ಕೋ ಸಂಸ್ಥೆಗೆ ಹೆಚ್ಚುವರಿ ದರ ತೋರಿಸಿ, ಭಾರೀ ವಂಚನೆ ಎಸಗಲಾಗಿತ್ತು. ಆಫ್ರಿಕಾದಲ್ಲಿ ಬೆಳೆಯುತ್ತಿದ್ದ ಕಡಿಮೆ ಬೆಲೆಯ ಕೊಕ್ಕೋ ಬೀಜಗಳನ್ನು ಥಾಯ್ಲೆಂಟ್ ದೇಶದಲ್ಲಿ ಬೆಳೆದಿದ್ದಾಗಿ ತೋರಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕ್ಯಾಂಪ್ಕೋ ಸಂಸ್ಥೆಗೆ ಪೂರೈಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಇದರ ಬಗ್ಗೆ ಕ್ಯಾಂಪ್ಕೋ ಸಂಸ್ಥೆಯ ಕೆಲವು ಅಧಿಕಾರಿಗಳಿಗೆ ಅರಿವು ಇದ್ದರೂ, ಕ್ರಮ ಜರುಗಿಸಿರಲಿಲ್ಲ. ಇದರಿಂದ ಸರಕಾರದ ಬೊಕ್ಕಸಕ್ಕೆ ಜಿಎಸ್ಟಿ ಮತ್ತು ತೆರಿಗೆ ವಂಚನೆಯೂ ನಡೆದಿತ್ತು. 2019ರಲ್ಲಿ ಕ್ಯಾಂಪ್ಕೋ ಕಂಪನಿಗೆ 9 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಆಗಿರುವ ಬಗ್ಗೆ ಮಾಹಿತಿಗಳಿದ್ದವು. ಆನಂತರ, ಒಟ್ಟು ವಹಿವಾಟಿಗೆ ಏಜಂಟ್ ಆಗಿದ್ದ ಜೀವನ್ ಲೋಬೊ ಬಳಿ ಆಗಿರುವ ನಷ್ಟ ಭರಿಸುವಂತೆ ಮಾತುಕತೆ ನಡೆದಿತ್ತು. ಆದರೆ ಜೀವನ್ ಲೋಬೊ ಅಷ್ಟು ಹಣ ಕೊಡಲು ನಿರಾಕರಿಸಿದ್ದಕ್ಕೆ ಕ್ಯಾಂಪ್ಕೋ ಚಾಕಲೇಟ್ ಸಂಸ್ಥೆಯ ಮ್ಯಾನೇಜರ್ ಫ್ರಾನ್ಸಿಸ್ ಡಿಸೋಜ 2020ರ ಜೂನ್ ತಿಂಗಳಲ್ಲಿ ಸಂಸ್ಥೆಗೆ 9,71,50,113 ರೂಪಾಯಿ ನಷ್ಟ ಆಗಿರುವ ಬಗ್ಗೆ ಮತ್ತು ಜೀವನ್ ಲೋಬೋ ಮತ್ತು ವಿನ್ಸಿ ಪಿಂಟೋ ಸೇರಿ ವಂಚನೆ ಎಸಗಿದ್ದಾರೆಂದು ಪೊಲೀಸ್ ದೂರು ನೀಡಿದ್ದರು.
ಪ್ರಕರಣ ದಾಖಲಾಗಿ, ಎರಡು ವರ್ಷ ಆದರೂ ಆರೋಪಿಗಳು ಪತ್ತೆಯಾಗಿರಲಿಲ್ಲ. ಇವರ ಪತ್ತೆಗಾಗಿ ಪುತ್ತೂರು ನಗರ ಪೊಲೀಸರು ವಿನ್ಸಿ ಪಿಂಟೋ ಮತ್ತು ಜೀವನ್ ಲೋಬೊ ವಿರುದ್ಧ ಲುಕ್ ಔಟ್ ನೋಟೀಸು ನೀಡಿದ್ದರು. ವಿನ್ಸಿ ಪಿಂಟೋ ಮಾ.8ರಂದು ಮುಂಬೈ ಏರ್ಪೋರ್ಟ್ ಮೂಲಕ ವಿದೇಶಕ್ಕೆ ಪರಾರಿಯಾಗುವ ಯತ್ನದಲ್ಲಿದ್ದಾಗ, ಅಲ್ಲಿನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜೀವನ್ ಲೋಬೋ ತಲೆಮರೆಸಿಕೊಂಡಿದ್ದು, ವಿನ್ಸಿ ಪಿಂಟೋನನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕಸ್ಟಮ್ಸ್ ದಂಡ ಹಾಕಿದ್ದನ್ನು ಕಕ್ಕಿಸಲು ದೂರು ?
ಪ್ರಕರಣ ಅಷ್ಟೇ ಆಗಿರುತ್ತಿದ್ದರೆ ಬೆಳಕಿಗೆ ಬರುತ್ತಿರಲಿಲ್ಲ. ವಿದೇಶದಿಂದ ಆಮದು ವಹಿವಾಟು ನಡೆದಿದ್ದರೂ, ಜಿಎಸ್ಟಿ ಮತ್ತು ಕಸ್ಟಮ್ಸ್ ಸುಂಕ ಪಾವತಿಸದೇ ಖರೀದಿ ಪ್ರಕ್ರಿಯೆ ನಡೆಸಿದ್ದು ಕಸ್ಟಮ್ಸ್ ಇಲಾಖೆಗೆ ತಿಳಿದು ತನಿಖೆ ನಡೆಸಿತ್ತು. ಬಳಿಕ ಮಂಗಳೂರು ಬಂದರಿನ ಕಸ್ಟಮ್ಸ್ ಅಧಿಕಾರಿಗಳು ಕ್ಯಾಂಪ್ಕೋ ಸಂಸ್ಥೆಗೆ 9 ಕೋಟಿಗೂ ಹೆಚ್ಚು ಮೊತ್ತ ದಂಡ ವಿಧಿಸಿದ್ದರು. ಏಜಂಟ್ ಜೀವನ್ ಲೋಬೊ ಮೂಲಕ ಹೆಚ್ಚಿನ ದರಕ್ಕೆ ಕೋಕೋ ಬೀನ್ಸ್ ಖರೀದಿಸಿದ ವಹಿವಾಟಿನಲ್ಲಿ ಕ್ಯಾಂಪ್ಕೋ ಒಳಗಿನವರೂ ಶಾಮೀಲಾಗಿದ್ದಾರೆ ಎನ್ನಲಾಗಿತ್ತು. ಆದರೆ ಕಸ್ಟಮ್ಸ್ ಅಧಿಕಾರಿಗಳು 9 ಕೋಟಿಯಷ್ಟು ದಂಡ ವಿಧಿಸಿದ್ದು ಕ್ಯಾಂಪ್ಕೋ ಸಂಸ್ಥೆಗೆ ದೊಡ್ಡ ಹೊರೆಯಾಗಿಸಿತ್ತು. ಅದನ್ನು ತುಂಬುವ ನಿಟ್ಟಿನಲ್ಲಿ ಮತ್ತು ಮಾಧ್ಯಮದಲ್ಲಿ ಸುದ್ದಿ ಬಂದಿದ್ದನ್ನು ಮುಚ್ಚಿ ಹಾಕಲು ಜೀವನ್ ಲೋಬೊ ಮತ್ತು ವಿನ್ಸಿ ಪಿಂಟೋ ತಲೆಗೆ ಕಟ್ಟಿ ಪೊಲೀಸ್ ದೂರು ನೀಡಲಾಗಿತ್ತು. ಇವರಿಬ್ಬರು ರೂವಾರಿಗಳಾಗಿದ್ದರೂ, ವಹಿವಾಟಿನ ಪಾಲನ್ನು ಉಂಡವರು ಸಂಸ್ಥೆಯ ಒಳಗಿನವರೂ ಇದ್ದಾರೆ ಎಂಬ ಆರೋಪಗಳು ದಟ್ಟವಾಗಿದ್ದವು.
Puttur Huge fraud of 9 crores exposed in Campco Chocolate factory company in the name of purchasing Coco beans. Accused who was absconding since two years has been arrested by Puttur police. The arrested has been identified as Jeevan Lobo.
26-08-25 06:06 pm
Bangalore Correspondent
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
SIT Issues Notice, Sujatha Bhat: ಸುಳ್ಳಜ್ಜಿ ಸು...
25-08-25 10:55 pm
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
26-08-25 10:36 am
Mangalore Correspondent
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
26-08-25 05:24 pm
HK News Desk
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm