ಬ್ರೇಕಿಂಗ್ ನ್ಯೂಸ್
18-09-20 04:37 pm Headline Karnataka News Network ಕ್ರೈಂ
ನೈಜೀರಿಯಾ, ಸೆಪ್ಟಂಬರ್ 18: ಅತ್ಯಾಚಾರ ಪ್ರಕರಣ ಕೇಳಿಬಂದಾಗೆಲ್ಲ ಕೆಲವರು ಗೊಣಗುವುದು ಕೇಳಿರಬಹುದು. ಆತನ ‘ಅದನ್ನೇ’ ಕತ್ತರಿಸಬೇಕು ಎಂದು. ಆದರೆ, ಅಂಥ ಕಾನೂನು ಮಾತ್ರ ಎಲ್ಲಿಯೂ ಜಾರಿಯಾಗಿರಲಿಲ್ಲ. ಈಗ ನೈಜೀರಿಯಾ ಅಂಥದ್ದೊಂದು ಕಠಿಣ ಕಾನೂನು ಜಾರಿಗೆ ಮುಂದಾಗಿದೆ.
ಅತ್ಯಾಚಾರ ಪ್ರಕರಣಗಳಲ್ಲಿ ಬೇರೆ ಬೇರೆ ದೇಶಗಳಲ್ಲಿ ಶಿಕ್ಷೆಗಳೂ ಥರಾವರಿ ಇವೆ. ಕೆಲವೊಂದು ದೇಶಗಳಲ್ಲಿ ಗಲ್ಲು ಶಿಕ್ಷೆ, ಜೀವಾವಧಿ, 20 ವರ್ಷ ಜೈಲು ಹೀಗೆ ಶಿಕ್ಷೆಯ ಪ್ರಕಾರ ಇವೆ. ಇಂಥ ಕಠಿಣ ಶಿಕ್ಷೆಗಳಿದ್ದರೂ, ಅತ್ಯಾಚಾರ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ. ಈಗ ನೈಜೀರಿಯಾ ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದು, ಪುರುಷನ ಲೈಂಗಿಕ ಶಕ್ತಿಯನ್ನೇ ನಿಶ್ಶಕ್ತಿಗೊಳಿಸುವ ಶಿಕ್ಷೆ ಜಾರಿಗೆ ಮುಂದಾಗಿದೆ.
ನೈಜೀರಿಯಾದಲ್ಲಿ ಕಳೆದ ಲಾಕ್ಡೌನ್ ಸಂದರ್ಭದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಿದ್ದರಿಂದ ಹೊಸ ಕಾನೂನು ತರಲಾಗಿದೆ. ನೈಜೀರಿಯಾದ ಕಾಡುನ ಎನ್ನುವ ರಾಜ್ಯದ ಗವರ್ನರ್ ನಾಸಿರ್ ಅಹ್ಮದ್ ಎಲ್ ರಫಾಯಿ, ಅತ್ಯಾಚಾರ ಕಾನೂನಿಗೆ ತಿದ್ದುಪಡಿ ತಂದಿದ್ದು, ಹೊಸ ಕಾಯ್ದೆ ಪ್ರಕಾರ ಅತ್ಯಾಚಾರ ಪ್ರಕರಣದಲ್ಲಿ ಆರೋಪ ಸಾಬೀತಾದರೆ ಪುರುಷನ ವೃಷಣಕ್ಕೆ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಆತನ ಲೈಂಗಿಕ ಶಕ್ತಿಯನ್ನು ತೆಗೆದು ಹಾಕುತ್ತಾರೆ. ಆತನಿಗೆ ಮುಂದೆಂದೂ ಲೈಂಗಿಕ ಆಸಕ್ತಿಯೇ ಬರದಂತೆ ಮಾಡಲಾಗುತ್ತದೆ. ಹಾಗೆಯೇ ಮಹಿಳೆಯರು ಕೂಡ ಇಂಥ ಕೃತ್ಯ ಎಸಗಿದಲ್ಲಿ ಅವರಿಗೂ ಇದೇ ರೀತಿಯ ಶಿಕ್ಷೆ ವಿಧಿಸಲಾಗುವುದು. ಇನ್ನು 14 ವರ್ಷದ ಒಳಗಿನ ಮಕ್ಕಳ ಮೇಲೆ ಅತ್ಯಾಚಾರ ನಡೆಸಿದಲ್ಲಿ ಗಲ್ಲು ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೊಳಿಸಲಾಗಿದೆ.
ಈ ಹಿಂದೆ ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣಗಳಿಗೆ ನೈಜೀರಿಯಾದಲ್ಲಿ ಜೀವಾವಧಿ ಶಿಕ್ಷೆ ಮತ್ತು ಇತರೇ ಪ್ರಕರಣಗಳಿಗೆ 21 ವರ್ಷದ ಶಿಕ್ಷೆ ಜಾರಿಯಲ್ಲಿತ್ತು.
23-10-25 03:42 pm
HK News Desk
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
ಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅರ್ಹ ವ್ಯಕ್ತಿ ;...
22-10-25 08:12 pm
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
23-10-25 03:39 pm
HK News Desk
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
23-10-25 10:52 pm
Mangalore Correspondent
ಸತ್ತು ಬದುಕಿದ ಸುದ್ದಿ ಬಗ್ಗೆ ಯೇನಪೋಯ ಆಸ್ಪತ್ರೆ ಸ್ಪ...
23-10-25 10:46 pm
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾ...
23-10-25 07:35 pm
ಜಾನುವಾರು ಸಾಗಾಟಕ್ಕೆ ಪೊಲೀಸರ ತಡೆ ; ಲಾರಿಯಿಂದ ಹಗ್ಗ...
22-10-25 09:55 pm
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
23-10-25 06:53 pm
Mangalore Correspondent
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm
Puttur, Illegal cattle transport, Arrest: ಗೋಪ...
22-10-25 11:51 am
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm