ಬ್ರೇಕಿಂಗ್ ನ್ಯೂಸ್
10-09-20 12:52 pm Headline Karnataka News Network ಕ್ರೈಂ
ಅಯೋಧ್ಯೆ, ಸೆಪ್ಟೆಂಬರ್ 10: ರಾಮನ ಜನ್ಮಸ್ಥಾನ ಅಯೋಧ್ಯೆಯಲ್ಲಿ ರಾಮನ ಮಂದಿರಕ್ಕೆ ಅಡಿಗಲ್ಲು ಹಾಕಲಾಗಿದೆ. ದೇಶಾದ್ಯಂತ ರಾಮನ ಭಕ್ತರು ಬಹುಕಾಲದ ಬೇಡಿಕೆ ಬಹುಬೇಗ ಈಡೇರಲೆಂದು ಹಣದ ನೆರವನ್ನೂ ನೀಡುತ್ತಿದ್ದಾರೆ. ಆದರೆ, ಇದೇ ವೇಳೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಖಾತೆಗೇ ಕಿಡಿಗೇಡಿಗಳು ಕನ್ನ ಹಾಕಿದ್ದಾರೆ. ನಕಲಿ ಚೆಕ್ ಬಳಸಿ ಬ್ಯಾಂಕಿನಿಂದ ಹಣ ವಿತ್ಡ್ರಾ ಮಾಡಿಕೊಳ್ಳಲಾಗಿದೆ.
ಲಕ್ನೋದ ಬ್ಯಾಂಕ್ನಲ್ಲಿ ಇರುವ ಟ್ರಸ್ಟ್ ಖಾತೆಗಳಿಂದ ಹಣವನ್ನು ಲಪಟಾಯಿಸಲಾಗಿದೆ. ಎರಡು ಖಾತೆಗಳಿಂದ ಈ ಹಣವನ್ನು ವಿತ್ಡ್ರಾ ಮಾಡಲಾಗಿದೆ. ಎರಡು ಬಾರಿ ವಿತ್ಡ್ರಾ ಮಾಡಿದ ಬಳಿಕ ಮೂರನೇ ಬಾರಿಗೆ ಪ್ರಯತ್ನಿಸಿದಾಗ, ಬ್ಯಾಂಕ್ನವರಿಗೆ ಸಂದೇಹ ಬಂದಿದೆ. ಅವರು ಕೂಡಲೇ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಮಾಹಿತಿ ನೀಡಿದ್ದಾರೆ. ಆಗಲೇ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲು ಸೆಪ್ಟೆಂಬರ್ 1ರಂದು ಹಣ ವಿತ್ಡ್ರಾ ಮಾಡಿಕೊಳ್ಳಲಾಗಿತ್ತು. ನಂತರ 3ನೇ ತಾರೀಕಿನಂದು ಮತ್ತೆ ಹಣವನ್ನು ವಿತ್ಡ್ರಾ ಮಾಡಿಕೊಳ್ಳಲಾಗಿದೆ. ಮೂರನೇ ಬಾರಿಗೆ ಲಕ್ನೋದ ಬ್ಯಾಂಕ್ ಆಫ್ ಬರೋಡಾದಲ್ಲಿ 9.86 ಲಕ್ಷ ಚೆಕ್ ವಿತ್ ಡ್ರಾ ಮಾಡುವ ಯತ್ನದಲ್ಲಿ ಬ್ಯಾಂಕ್ ಅಧಿಕಾರಿಗಳಿಗೆ ಸಂಶಯ ಬಂದಿದ್ದು ಚಂಪತ್ ರಾಯ್ ಕರೆ ಮಾಡಿದ್ದಾರೆ.
ಸದ್ಯ ಅಪರಿಚಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಈಗಾಗ್ಲೇ ನಕಲಿ ಚೆಕ್ ಬಳಸಿ ಸುಮಾರು 6 ಲಕ್ಷ ರೂಪಾಯಿ ವಿತ್ ಡ್ರಾ ಮಾಡಿರುವ ಬಗ್ಗೆ ಹೇಳಲಾಗುತ್ತಿದೆ. ಅತ್ತ ರಾಮನ ಮಂದಿರದ ಕೆಲಸ ಆಗುತ್ತಿದ್ದರೆ ಇತ್ತ ರಾಮನ ಹೆಸರಿನ ಹಣವನ್ನು ಕಿಡಿಗೇಡಿಗಳು ನುಂಗಲು ಯತ್ನಿಸಿದ್ದಾರೆ.
23-10-25 03:42 pm
HK News Desk
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
ಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅರ್ಹ ವ್ಯಕ್ತಿ ;...
22-10-25 08:12 pm
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
23-10-25 03:39 pm
HK News Desk
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
23-10-25 07:35 pm
Mangalore Correspondent
ಜಾನುವಾರು ಸಾಗಾಟಕ್ಕೆ ಪೊಲೀಸರ ತಡೆ ; ಲಾರಿಯಿಂದ ಹಗ್ಗ...
22-10-25 09:55 pm
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮ...
21-10-25 09:49 pm
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
23-10-25 07:29 pm
Mangalore Correspondent
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm
Puttur, Illegal cattle transport, Arrest: ಗೋಪ...
22-10-25 11:51 am
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm