ಬ್ರೇಕಿಂಗ್ ನ್ಯೂಸ್
06-09-20 02:17 pm Bangalore Correspondant ಕ್ರೈಂ
ಬೆಂಗಳೂರು, ಸೆಪ್ಟೆಂಬರ್ 6: ಬಿಬಿಎಂಪಿ ಕಾರ್ಪೋರೇಟರ್ ಒಬ್ಬರ ಮಗನಿಗೆ ಡ್ರಗ್ ನಂಟಿನ ಬಗ್ಗೆ ತನಿಖೆ ನಡೆಸುತ್ತಿರುವ ಎನ್ ಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ರಾಜಾಜಿನಗರದ ಕಾರ್ಪೋರೇಟರ್ ಕೇಶವ ಮೂರ್ತಿ ಮಗ ಯಶಸ್ ಮತ್ತು ಮುಂಬೈನಲ್ಲಿ ಬಂಧಿಯಾಗಿರುವ ಡ್ರಗ್ ಪೆಡ್ಲರ್ ಮಹಮ್ಮದ್ ರೆಹಮಾನ್ ನಡುವೆ ಸಂಪರ್ಕ ಇದ್ದುದು ಪತ್ತೆಯಾಗಿತ್ತು. ಹೀಗಾಗಿ ಬೆಂಗಳೂರಿಗೆ ಆಗಮಿಸಿದ್ದ ಎನ್ಸಿಬಿ ಅಧಿಕಾರಿಗಳು ಕಾರ್ಪೋರೇಟರ್ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ವೇಳೆ ಯಾವುದೇ ಮಾದಕ ವಸ್ತುಗಳು ಪತ್ತೆಯಾಗಿಲ್ಲ. ಸದ್ಯ ವಿಚಾರಣೆಗೆ ಹಾಜರಾಗಲು ಕಾರ್ಪೋರೇಟರ್ ಮಗನಿಗೆ ಎನ್ಸಿಬಿ ನೋಟಿಸ್ ನೀಡಿದೆ. ಮುಂಬೈ ಡ್ರಗ್ಸ್ ಪೆಡ್ಲರ್ ಮಹಮದ್ ರೆಹಮಾನ್ ಜತೆ ಸೇರಿ ಡ್ರಗ್ಸ್ ಖರೀದಿ ಮತ್ತು ಡ್ರಗ್ಸ್ ಮಾರಾಟ ಮಾಡಿರುವ ಅನುಮಾನದ ಮೇಲೆ ನೋಟಿಸ್ ನೀಡಿ, ವಿಚಾರಣೆಗೆ ಕರೆದಿದ್ದಾರೆ. ಮುಂಬೈನ ಎನ್ಸಿಬಿ ಕಚೇರಿಗೆ ಆಗಮಿಸಿ ವಿವರಣೆ ನೀಡುವಂತೆ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಡ್ರಗ್ಸ್ ಪೆಡ್ಲಿಂಗ್ ಜೊತೆಗೆ ಈ ನಿಕಟವರ್ತಿಗಳಿಗೆ ಯಶಸ್ ಹಲವು ಬಾರಿ ಹಣ ವರ್ಗಾವಣೆ ಮಾಡಿರುವುದೂ ಪತ್ತೆಯಾಗಿದೆ. ಸದ್ಯ ಕೇಶವ ಮೂರ್ತಿ ಮಗ ಯಶಸ್ ನಾಪತ್ತೆಯಾಗಿದ್ದು, ಆತನಿಗಾಗಿ ಎನ್ಸಿಬಿ ಹುಡುಕಾಟ ನಡೆಸುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಪೊರೇಟರ್ ಕೇಶವಮೂರ್ತಿ, ಮಗನಿಗೆ ಧೈರ್ಯವಾಗಿರಲು ಹೇಳಿದ್ದೇನೆ. ಮಗ ತಪ್ಪು ಮಾಡಿಲ್ಲ. ಎರಡು ಬಾರಿ ಗೋವಾಗೆ ಹೋಗಿ ಬಂದಿದ್ದ. ಬಂಧಿತರ ಮೊಬೈಲ್ ನಲ್ಲಿ ಮಗನ ನಂಬರ್ ಇದ್ದ ಕಾರಣಕ್ಕೆ ವಿಚಾರಣೆಗೆ ಕರೆದಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 07:46 pm
HK News Staffer
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm