ಬ್ರೇಕಿಂಗ್ ನ್ಯೂಸ್
29-08-20 10:59 am Udupi Reporter ಕ್ರೈಂ
ಉಡುಪಿ, ಆಗಸ್ಟ್ 29: ಫೇಸ್ ಬುಕ್ ಅನ್ನೋ ಮಾಯಾಜಾಲದಲ್ಲಿ ಸಿಲುಕಿದ ವ್ಯಕ್ತಿಯೊಬ್ಬ ಯುವತಿಯ ಮಾತು ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಪ್ರಸಂಗ ಬೆಳಕಿಗೆ ಬಂದಿದೆ.
ಕೇವಲ ಮೂರು ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಯುವತಿಯ ಮಾತನ್ನು ನಂಬಿ ವ್ಯಕ್ತಿಯೊಬ್ಬರು ಬರೋಬ್ಬರಿ 3.53 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ.
ಉಡುಪಿ ಜಿಲ್ಲೆಯ ಪಡುಬಿದ್ರಿ ನಿವಾಸಿ ಡೇವಿಡ್ ಪೌಲ್ ಕುಮಾರ್(53) ಹಣ ಕಳೆದುಕೊಂಡವರು. ಫೇಸ್‌ಬುಕ್‌ನಲ್ಲಿ ಆಗಸ್ಟ್ 24ರಂದು ಜೋನ್ ಶರ್ರಿ ಮಾರ್ಕ್ಸ್‌ವೆಲ್ ಎಂಬಾಕೆಯ ಪರಿಚಯವಾಗಿತ್ತು.
ಫೇಸ್ ಬುಕ್ ನಲ್ಲಿ ಪರಿಚಯವಾದ ಜೊನ್ ಶೆರ್ರಿ, ಡೇವಿಡ್ ಹುಟ್ಟುಹಬ್ಬಕ್ಕೆ ಬೆಲೆಬಾಳುವ ಗಿಫ್ಟ್ ಪಾರ್ಸೆಲ್ ಕಳುಹಿಸುವುದಾಗಿ ಹೇಳಿದ್ದಳು. ಅದರಂತೆ ದೆಹಲಿ ಏರ್‌ಪೋರ್ಟಿನಿಂದ ಮಹಿಳೆಯೊಬ್ಬರು ಕರೆ ಮಾಡಿ, ವಿದೇಶದಿಂದ ಪಾರ್ಸೆಲ್ ಬಂದಿದೆ ಎಂದು ಡೇವಿಡ್ ಗೆ ತಿಳಿಸಿದ್ದರು.
ಆದರೆ, ಪಾರ್ಸೆಲ್ ಕಳುಹಿಸಬೇಕಾದರೆ 3.53 ಲಕ್ಷ ರೂಪಾಯಿ ಹಣ ಶುಲ್ಕ ಪಾವತಿಸಬೇಕು. ಈ ಕೂಡಲೇ ಹಣ ವರ್ಗಾಯಿಸುವಂತೆ ಹೇಳಿದ್ದಾರೆ. ಮಹಿಳೆಯ ಮಾತು ನಂಬಿದ ಡೇವಿಡ್ ಹಣವನ್ನು ವರ್ಗಾಯಿಸಿದ್ದಾರೆ. ಆದರೆ ಪಾರ್ಸೆಲ್ ಮಾತ್ರ ಕೈ ಸೇರಲಿಲ್ಲ. ಸೈಬರ್ ವಂಚನೆ ಬಗ್ಗೆ ಈಗ ಉಡುಪಿ ಸೈಬರ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 07:46 pm
HK News Staffer
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm