ಬ್ರೇಕಿಂಗ್ ನ್ಯೂಸ್
14-01-21 12:36 pm Mangalore Correspondent ಕ್ರೈಂ
ಮಂಗಳೂರು, ಜ.14: ಮಂಗಳೂರು ನಗರದಲ್ಲಿ ಮಕ್ಕಳ ಕಳ್ಳರಿದ್ದಾರೆಂಬ ವದಂತಿ ಕೇಳಿಬಂದಿದೆ. ಬುಧವಾರ ಬೆಳಗ್ಗೆ ಕುದ್ರೋಳಿಯ ಅಳಕೆಯಲ್ಲಿ ಒಬ್ಬ ಮಹಿಳೆಯ ಬಗ್ಗೆ ಗುಮಾನಿ ವ್ಯಕ್ತಪಡಿಸಿ, ಜನರು ಸೇರಿ ಆಕೆಯನ್ನು ಗದರಿ, ಪೊಲೀಸರಿಗೊಪ್ಪಿಸಿದ್ದರು. ನಿನ್ನೆ ಸಂಜೆ ಹೊತ್ತಿಗೆ ಕೊಂಚಾಡಿಯ ಮಹಾಲಸಾ ದೇವಸ್ಥಾನ ಆವರಣದಲ್ಲಿ ಮಗುವೊಂದನ್ನು ಅಪಹರಿಸುವ ಯತ್ನ ನಡೆದಿದೆ ಎನ್ನಲಾಗಿದೆ.
ಕೊಂಚಾಡಿಯಲ್ಲಿ ಬೈಕಿನಲ್ಲಿ ಬಂದಿದ್ದ ಇಬ್ಬರು ಸೇರಿ ಆಟವಾಡುತ್ತಿದ್ದ ಮಗುವೊಂದನ್ನು ಮುಸುಕು ಹಾಕಿ, ಹಿಡಿಯಲು ಯತ್ನಿಸಿದ್ದಾರೆ. ಮಗುವಿನ ತಲೆಯ ಭಾಗಕ್ಕೆ ಮುಸುಕು ಹಾಕುತ್ತಿದ್ದಂತೆ ಅಲ್ಲಿ ಆಟವಾಡುತ್ತಿದ್ದ ಇತರೇ ಮಕ್ಕಳು ಬೊಬ್ಬೆ ಹಾಕಿದ್ದಾರೆ. ಅಷ್ಟರಲ್ಲಿ ಬೈಕಿನಲ್ಲಿ ಬಂದವರು ಪರಾರಿಯಾಗಿದ್ದಾರೆ.

ಮಕ್ಕಳ ಮಾತು ಕೇಳಿ, ಸ್ಥಳೀಯರು ಭಯಗೊಂಡಿದ್ದು ಅಪಹರಣ ಯತ್ನಕ್ಕೆ ಒಳಗಾದ ಮಗುವಿನ ಪಾಲಕರು ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆಗಂತುಕರ ಪತ್ತೆಗಾಗಿ ಕೊಂಚಾಡಿ ಪರಿಸರದ ಸಿಸಿಟಿವಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಮಕ್ಕಳ ಅಪಹರಣಕ್ಕೆ ಯತ್ನಿಸಿದ್ದು ಹೌದೋ, ಅಲ್ಲವೋ ಎನ್ನುವ ಬಗ್ಗೆ ಖಾತ್ರಿಪಡಿಸಲು ದಾಖಲೆ ಹುಡುಕುತ್ತಿದ್ದಾರೆ.

ಇದೇ ವೇಳೆ, ಅಳಕೆಯಲ್ಲಿ ಮಹಿಳೆಯ ಕಿತಾಪತಿ ಬಗ್ಗೆ ಬಂದರು ಪೊಲೀಸರಲ್ಲಿ ವಿಚಾರಿಸಿದರೆ, ಅಲ್ಲಿ ಮಹಿಳೆಯ ಬಗ್ಗೆ ಗುಮಾನಿ ಬಂದಿದ್ದು ಫೋಟೊ ತೆಗೆದು ವಾಟ್ಸಾಪ್ ನಲ್ಲಿ ಹಾಕಿದ್ದು ಗೊತ್ತು. ಅದು ಮಕ್ಕಳ ಅಪಹರಣದ ವಿಷಯ ಅಲ್ಲ. ಆ ಮಹಿಳೆ, ಉತ್ತರ ಭಾರತದ ಮೂಲದವರಾಗಿದ್ದು ಅಳಕೆ ಪರಿಸರದಲ್ಲಿ ಗುಜರಾತಿ ಮೂಲದವರ ಮನೆಗೆ ಬಂದು ಹಣ ಕೇಳುತ್ತಿದ್ದರಂತೆ. ಅದರ ಬಗ್ಗೆ ಯಾರೂ ಕಂಪ್ಲೇಂಟ್ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.
A woman was held by locals at Konchady in Mangalore alleging of Kidnapping Children. The Kankandy Town police have registered the case against her.
30-01-26 10:37 pm
Bangalore Correspondent
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
30-01-26 03:38 pm
HK News Desk
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
30-01-26 09:01 pm
Giridhar Shetty, Mangaluru
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
30-01-26 10:57 pm
HK News Desk
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm