ಬ್ರೇಕಿಂಗ್ ನ್ಯೂಸ್
08-01-21 12:37 pm Headline Karnataka News Network ಕ್ರೈಂ
ಚೆನ್ನೈ, ಜ.8 : ದುಬೈ ರಾಷ್ಟ್ರ ಶಾರ್ಜಾದಿಂದ ಹಿಂದಿರುಗುತ್ತಿದ್ದ ಪ್ರಯಾಣಿಕನೊಬ್ಬನ ಬಳಿ ಇದ್ದ 1.97 ಕೋಟಿ ಮೌಲ್ಯದ 3.72 ಕೆಜಿ ಶುದ್ಧ ಚಿನ್ನವನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದುಬೈನ ಎಮಿರೇಟ್ಸ್ ಫ್ಲೈಟ್ ಇಕೆ 544 ಮೂಲಕ ಚೆನ್ನೈಗೆ ಆಗಮಿಸಿದ ಪದ್ಮಾ ಬಾಲಾಜಿ(25) ಎಂಬಾತನನ್ನು ತಪಾಸಣೆ ನಡೆಸಿದಾಗ ಆತ ತನ್ನ ಒಳ ಉಡುಪಿನಲ್ಲಿ ಮರೆಮಾಚಿದ್ದ ದೊಡ್ಡ ಕ್ಯಾಡ್ಬರೀಸ್ ಡೈರಿ ಮಿಲ್ಕ್ ಚಾಕ್ಲೇಟ್ ಕಂಡುಬಂದಿದೆ.

ಚಾಕ್ಲೇಟ್ ತೆರೆದು ನೋಡಿದಾಗ 660 ಗ್ರಾಂ ಚಿನ್ನದ ಪೇಸ್ಟ್ ಹೊಂದಿರುವ ಪ್ಲಾಸ್ಟಿಕ್ ಪ್ಯಾಕೆಟ್ ಮೂಲಕ ಸುತ್ತಿಡಲಾಗಿತ್ತು. ಅದರಲ್ಲಿ 28.7 ಲಕ್ಷ ರೂ ಬೆಲೆ ಬಾಳುವ 546 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಆತನಿಂದ ವಶಪಡಿಸಿಕೊಂಡಿದ್ದು ಪ್ರಯಾಣಿಕ ಪದ್ಮ ಬಾಲಾಜಿಯನ್ನು ಬಂಧಿಸಿದ್ದಾರೆ. ಅಲ್ಲದೆ ಬುಧವಾರ ಏರ್ ಇಂಡಿಯಾ ಫ್ಲೈಟ್ ಮೂಲಕ ಆಗಮಿಸಿದ 11 ಮಂದಿ ಪ್ರಯಾಣಿಕರು ತಮ್ಮ ಗುದನಾಳದಲ್ಲಿ ಅಡಗಿಸಿಕೊಂಡಿದ್ದ 12 ಚಿನ್ನದ ಪೇಸ್ಟ್ ಕಟ್ಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೊರತೆಗೆದಾಗ 2.15 ಕೆಜಿ ಚಿನ್ನವಾಗಿದ್ದು, ಅದರ ಬೆಲೆ 1.14 ಕೋಟಿ ಆಗಿತ್ತು.
ಶಾರ್ಜಾದಿಂದ ಆಗಮಿಸಿದ 3 ಏರ್ ಅರೇಬಿಯಾ ವಿಮಾನದ ಜಿ 9-471 ಎಂಬ ಪ್ರಯಾಣಿಕನ ಗುದನಾಳದಲ್ಲಿ ಇದ್ದ 831 ಗ್ರಾಂ ತೂಕದ ಐದು ಕಟ್ಟುಗಳ ಚಿನ್ನದ ಪೇಸ್ಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ಆತನ ಬಳಿ 685 ಗ್ರಾಂ ಚಿನ್ನವಿದ್ದು, ಇದರ ಬೆಲೆ 36.40 ಲಕ್ಷ ರೂಗಳಾಗಿತ್ತು. ದುಬೈ ಫ್ಲೈಟ್ ಎಫ್‍ಜೆಡ್ 8517 ಪ್ರಯಾಣಿಕನೊಬ್ಬ ನಿರ್ಗಮಿಸುತ್ತಿದ್ದ ವೇಳೆ ತಡೆಹಿಡಿದು ಪರಿಶೀಲಿಸಿದಾಗ ಆತ ತನ್ನ ಗುದನಾಳದಲ್ಲಿ 401 ಗ್ರಾಂ ತೂಕದ ಎರಡು ಚಿನ್ನದ ಪೇಸ್ಟ್ ಕಟ್ಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಹೊರತೆಗೆದಾಗ 18.28 ಲಕ್ಷರೂ ಮೌಲ್ಯದ 347 ಗ್ರಾಂ ಚಿನ್ನ ಸಿಕ್ಕಿತ್ತು.
Customs officials seized a total of 3.72kg of 24K purity gold, valued at Rs.1.97 crore using Dairy Milk Cover, from Dubai and Sharjah returnees.
12-06-26 12:02 pm
HK News Staffer
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
15-06-26 04:52 pm
HK News Staffer
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
ಮಧ್ಯರಾತ್ರಿ ಎದೆನೋವಿನಿಂದ ಮನೆಯಲ್ಲೇ ಕುಸಿದು ಬಿದ್ದ...
12-06-26 10:48 pm
15-06-26 08:37 pm
HK News Staffer
ಕಾರವಾರದ ಕಡ್ಲೆ ಬೀಚ್ನಲ್ಲಿ ರೀಲ್ಸ್ ಮಾಡುಲು ಹೋಗಿ ಅ...
15-06-26 04:54 pm
ಸೋಲಾಪುರದಲ್ಲಿ ಭೀಕರ ದುರಂತ! ನಿಯಂತ್ರಣ ತಪ್ಪಿ ನಾಲೆಗ...
15-06-26 11:50 am
ಧರ್ಮಸ್ಥಳಕ್ಕೆ ತೆರಳಿದ್ದ ಬೆಂಗಳೂರಿನ ಮೂವರು ಯುವಕರು...
15-06-26 11:27 am
ರೇಣುಕಾಸ್ವಾಮಿ ಕೇಸ್ ಮಾದರಿಯಲ್ಲೇ ಬಳ್ಳಾರಿಯಲ್ಲಿ ಭೀಕ...
14-06-26 10:30 pm