ಬ್ರೇಕಿಂಗ್ ನ್ಯೂಸ್
04-06-26 12:49 pm HK News Staffer ಕ್ರೈಂ
ಉಡುಪಿ, ಜೂನ್ 4: ನೀರು ಸೇದುತ್ತಿದ್ದಾಗ ಆಕಸ್ಮಿಕವಾಗಿ 30 ಅಡಿ ಆಳದ ಬಾವಿಗೆ ಬಿದ್ದ ಪತ್ನಿಯನ್ನು ರಕ್ಷಿಸಲು 65 ವರ್ಷದ ಪತಿಯೇ ಸ್ವತಃ ಬಾವಿಗೆ ಹಾರಿದ್ದಲ್ಲದೆ, ಆಕೆಗೆ ಧೈರ್ಯ ತುಂಬಿ ಜೀವ ರಕ್ಷಿಸಿದ ಹೃದಯಸ್ಪರ್ಶಿ ಘಟನೆ ಇಲ್ಲಿನ ಕೆಮ್ಮಣ್ಣು ಎಂಬಲ್ಲಿ ನಡೆದಿದೆ.
ಕೆಮ್ಮಣ್ಣು ಸರ್ಕಾರಿ ಶಾಲೆ ಬಳಿಯ ನಿವಾಸಿಗಳಾದ ಗೋಪಾಲಕೃಷ್ಣ ಹೆಗ್ಡೆ (65) ಹಾಗೂ ಶ್ಯಾಮಲಾ (60) ಎಂಬವರೇ ಬಾವಿಗೆ ಬಿದ್ದು ಅಪಾಯದಿಂದ ಪಾರಾದ ದಂಪತಿ. ಬುಧವಾರ ಬೆಳಗ್ಗೆ ಶ್ಯಾಮಲಾ ಅವರು ಮನೆಯ ಬಾವಿಯಿಂದ ನೀರು ಸೇದಲು ಹೋಗಿದ್ದರು. ಬಾವಿಯ ಒಂದು ಬದಿಗೆ ಆವರಣ ಗೋಡೆ ಇರಲಿಲ್ಲ ಎನ್ನಲಾಗಿದೆ. ನೀರು ಸೇದುವ ಭರದಲ್ಲಿ ಕಾಲು ಜಾರಿ ಮಹಿಳೆ ಆಕಸ್ಮಿಕವಾಗಿ ಬಾವಿಯೊಳಗೆ ಬಿದ್ದಿದ್ದಾರೆ.
ಬಾವಿಗೆ ಬಿದ್ದು ಅಪಾಯದಲ್ಲಿರುವುದನ್ನು ಗಮನಿಸಿದ ಗೋಪಾಲಕೃಷ್ಣ ಹೆಗ್ಡೆ ಕೂಡಲೇ ಬೇರೇನೂ ಯೋಚಿಸದೆ ಆಕೆಯನ್ನು ರಕ್ಷಿಸಲು ತಾವೂ ಬಾವಿಗೆ ಧುಮುಕಿದ್ದಾರೆ. ಬಾವಿ ಆಳವಾಗಿದ್ದರಿಂದ ಇಬ್ಬರಿಗೂ ಮೇಲೆ ಬರಲು ಸಾಧ್ಯವಾಗದೆ ಒಳಗೇ ಬಂಧಿಯಾಗಿದ್ದಾರೆ. ನೀರು ಹೆಚ್ಚಿಲ್ಲದ ಕಾರಣ ಗೋಪಾಲಕೃಷ್ಣ ಅವರು ಬಾವಿಯ ತಳದಲ್ಲಿ ಪತ್ನಿಗೆ ಧೈರ್ಯ ತುಂಬುತ್ತಾ, ಯಾರಾದ್ರೂ ರಕ್ಷಣೆಗೆ ಬನ್ನಿ ಎಂದು ಕರೆಯತೊಡಗಿದ್ದಾರೆ.
ಇಬ್ಬರೂ ಬಾವಿಯೊಳಗೆ ಬಿದ್ದಿರುವುದನ್ನು ತಿಳಿದ ಮನೆಯಲ್ಲಿದ್ದ ಮತ್ತೊಬ್ಬ ಮಹಿಳೆ, ತಕ್ಷಣವೇ ಸಮೀಪದ ಶಾಲೆಗೆ ಓಡಿಹೋಗಿ ಅಲ್ಲಿನ ಶಿಕ್ಷಕರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಅಲ್ಲಿನ ಸಿಬಂದಿ ಬಂದಿದ್ದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಆಪದ್ಬಾಂಧವ ಈಶ್ವರ ಮಲ್ಪೆ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡವು ಕಾರ್ಯಾಚರಣೆ ನಡೆಸಿ, ಶ್ಯಾಮಲಾ ಅವರನ್ನು ಹಲಗೆಯ ಸಹಾಯದಿಂದ ಹಾಗೂ ಗೋಪಾಲಕೃಷ್ಣ ಹೆಗ್ಡೆ ಅವರನ್ನು ಕುರ್ಚಿಗೆ ಕಟ್ಟಿ ಮೇಲಕ್ಕೆತ್ತಿದೆ.
ಬಾವಿಯಿಂದ ಮೇಲಕ್ಕೆ ತರುವಷ್ಟರಲ್ಲಿ ದಂಪತಿ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೈ ಕಾಲಿಗೆ ಒಂದಷ್ಟು ಪೆಟ್ಟು ಬಿದ್ದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am