ಬ್ರೇಕಿಂಗ್ ನ್ಯೂಸ್
30-04-26 10:45 am HK News Staffer ಕ್ರೈಂ
ಕೋಲಾರ, ಏಪ್ರಿಲ್ 30: ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಸಂಚಲನ ಮೂಡಿಸಿರುವ ನಕಲಿ ಪಿಎಚ್‌ಡಿ ಹಗರಣ ಇದೀಗ ದೊಡ್ಡ ಮಟ್ಟದಲ್ಲಿ ಬೆಳಕಿಗೆ ಬಂದಿದೆ. ಕೋಲಾರ ಸೇರಿದಂತೆ ವಿವಿಧ ಭಾಗಗಳ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದ 400ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಹಠಾತ್ ರಾಜೀನಾಮೆ ನೀಡಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಸರ್ಕಾರದಿಂದ ದಾಖಲೆ ಪರಿಶೀಲನೆಗಾಗಿ ಕಟ್ಟುನಿಟ್ಟಿನ ಪ್ರಮಾಣಿತ ಕಾರ್ಯವಿಧಾನ (SOP) ಜಾರಿಗೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಅನೇಕರು ನಕಲಿ ಪಿಎಚ್‌ಡಿ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದರೆಂಬುದು ಹೊರಬಿದ್ದಿದೆ. ಕಾಲೇಜು ಶಿಕ್ಷಣ ಇಲಾಖೆಯ ಮಾಹಿತಿಯ ಪ್ರಕಾರ, ಈಗಾಗಲೇ 25ಕ್ಕೂ ಹೆಚ್ಚು ಉಪನ್ಯಾಸಕರು ಸಲ್ಲಿಸಿದ ಪಿಎಚ್‌ಡಿ ಪ್ರಮಾಣಪತ್ರಗಳು ನಕಲಿ ಎಂಬುದು ದೃಢಪಟ್ಟಿದೆ. ಇನ್ನೂ 350ಕ್ಕೂ ಹೆಚ್ಚು ಮಂದಿ ಅನಾರೋಗ್ಯ, ವೈಯಕ್ತಿಕ ಕಾರಣ ಅಥವಾ ಬೇರೆ ಉದ್ಯೋಗ ಸಿಕ್ಕಿದೆ ಎಂದು ಹೇಳಿ ರಾಜೀನಾಮೆ ನೀಡಿದ್ದಾರೆ. 30ಕ್ಕೂ ಹೆಚ್ಚು ಉಪನ್ಯಾಸಕರು ದೀರ್ಘಕಾಲದಿಂದ ಗೈರುಹಾಜರಾಗಿರುವುದೂ ಗಮನಾರ್ಹವಾಗಿದೆ.
ಉದ್ಯೋಗ ಉಳಿಸಿಕೊಳ್ಳುವ ಒತ್ತಡದಲ್ಲಿ ಹಲವರು ಲಕ್ಷಾಂತರ ರೂಪಾಯಿ ಸಾಲ ಮಾಡಿ ನಕಲಿ ಪಿಎಚ್‌ಡಿ ಖರೀದಿಸಿರುವುದಾಗಿ ತಿಳಿದುಬಂದಿದೆ. ಮಧ್ಯವರ್ತಿಗಳು “ಹೊರ ರಾಜ್ಯದ ಮಾನ್ಯತೆ ಹೊಂದಿದ ಪಿಎಚ್‌ಡಿ” ಕೊಡಿಸುವುದಾಗಿ ನಂಬಿಸಿ ಒಬ್ಬರಿಂದ ₹5 ರಿಂದ ₹7 ಲಕ್ಷದವರೆಗೆ ಹಣ ಪಡೆದು, ಕೇವಲ 15 ದಿನಗಳಲ್ಲಿ ಪ್ರಮಾಣಪತ್ರ, ಕೋರ್ಸ್ ವರ್ಕ್ ಹಾಗೂ ಪ್ರಬಂಧಗಳನ್ನೂ ಸಿದ್ಧಪಡಿಸಿ ನೀಡುತ್ತಿದ್ದರೆಂಬ ಮಾಹಿತಿ ಬಹಿರಂಗವಾಗಿದೆ.
ಈ ದಾಖಲೆಗಳನ್ನು ಆಧಾರ ಮಾಡಿಕೊಂಡು ಹಲವರು ಉಪನ್ಯಾಸಕರಾಗಿ ನೇಮಕಗೊಂಡಿದ್ದು, ಈಗ ಎಸ್‌ಒಪಿ ಜಾರಿಯಾದ ನಂತರ ಸಿಕ್ಕಿಬೀಳುವ ಭಯದಿಂದ ಸ್ವಯಂ ರಾಜೀನಾಮೆ ನೀಡುತ್ತಿದ್ದಾರೆ. ಇದರಿಂದ ಹಣ ಕಳೆದುಕೊಂಡವರೂ ಉದ್ಯೋಗ ಕಳೆದುಕೊಂಡವರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಯುಜಿಸಿ ನಿಯಮಗಳ ಪ್ರಕಾರ ಬೋಧಕರಿಗೆ ಸ್ನಾತಕೋತ್ತರ ಪದವಿಯ ಜೊತೆಗೆ ಎನ್‌ಇಟಿ ಅಥವಾ ಕೆ-ಸೆಟ್ ಅರ್ಹತೆ ಹಾಗೂ ಪಿಎಚ್‌ಡಿ ಅಗತ್ಯ. ಈ ನಿಯಮಗಳನ್ನು ದುರುಪಯೋಗಪಡಿಸಿಕೊಂಡು ನಕಲಿ ಪ್ರಮಾಣಪತ್ರಗಳ ಮೂಲಕ ಉದ್ಯೋಗ ಪಡೆದವರ ವಿರುದ್ಧ ಈಗ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಮುಖ್ಯ ಆಡಳಿತಾಧಿಕಾರಿ ಟಿ.ಆರ್. ಶೋಭಾ ತಿಳಿಸಿದ್ದಾರೆ.
12-06-26 12:02 pm
HK News Staffer
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
14-06-26 09:46 pm
HK News Staffer
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
ದಿನಕ್ಕೆ ಒಂದು ವಾಹನಕ್ಕೆ 200 ಲೀಟರ್ ಡೀಸೆಲ್ ಮಾತ್ರ...
13-06-26 03:01 pm
14-06-26 09:47 pm
HK News Staffer
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
ಮಧ್ಯರಾತ್ರಿ ಎದೆನೋವಿನಿಂದ ಮನೆಯಲ್ಲೇ ಕುಸಿದು ಬಿದ್ದ...
12-06-26 10:48 pm
ಎಂಬಿಎ ಲ್ಯಾಬ್ ಶುಲ್ಕ ಅಕ್ರಮ; ಮಂಗಳೂರು ವಿವಿಯ ಆಡಳಿತ...
12-06-26 08:44 pm
14-06-26 10:30 pm
HK News Staffer
ಮಂಜೇಶ್ವರ; ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಬಾಲಕಿಯರು...
14-06-26 05:08 pm
ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಅಪಪ್ರಚಾರ; ಸ್ನೇಹಿ...
13-06-26 09:17 pm
ಬೆಂಗಳೂರಿನ ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ನಲ್ಲಿ ಅನ್...
13-06-26 08:43 pm
ಕಾಲೇಜು ಫೀಸ್ಗೆ ಕೊಟ್ಟ 10 ಸಾವಿರವೇ ಜೀವ ತೆಗೆಯಿತು!...
13-06-26 06:14 pm