100ಕ್ಕೂ ಹೆಚ್ಚು ಜನರನ್ನು ಹನಿಟ್ರ್ಯಾಪ್‌ ಬಲೆಗೆ ಬೀಳಿಸಿದ ದಂಪತಿ ; ಪತ್ನಿಯನ್ನೇ ಮುಂದಿಟ್ಟು ಮೋಸದ ಜಾಲ, ಪುರುಷರನ್ನು ಬರಸೆಳೆದು ಲಕ್ಷ ಲಕ್ಷ ಬಾಚಿ‌ ಸಿಕ್ಕಿಬಿದ್ದರು ! 

19-01-26 10:20 pm       HK News Desk   ಕ್ರೈಂ

ಸುಮಾರು 100ಕ್ಕೂ ಹೆಚ್ಚು ಜನರನ್ನು ಹನಿಟ್ರ್ಯಾಪ್‌ ಬಲೆಗೆ ಸಿಲುಕಿಸಿ, ಅವರ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿ ಲಕ್ಷಾಂತರ ರೂ. ಹಣ ವಸೂಲಿ ಮಾಡುತ್ತಿದ್ದ ದಂಪತಿಯನ್ನು ತೆಲಂಗಾಣದ ಕರೀಮ್ ನಗರ ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್, ಜ.19 : ಸುಮಾರು 100ಕ್ಕೂ ಹೆಚ್ಚು ಜನರನ್ನು ಹನಿಟ್ರ್ಯಾಪ್‌ ಬಲೆಗೆ ಸಿಲುಕಿಸಿ, ಅವರ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿ ಲಕ್ಷಾಂತರ ರೂ. ಹಣ ವಸೂಲಿ ಮಾಡುತ್ತಿದ್ದ ದಂಪತಿಯನ್ನು ತೆಲಂಗಾಣದ ಕರೀಮ್ ನಗರ ಪೊಲೀಸರು ಬಂಧಿಸಿದ್ದಾರೆ.

​ಹಣದ ಆಸೆಗಾಗಿ ಇವರು ಹಲವಾರು ಪುರುಷರನ್ನು ಟಾರ್ಗೆಟ್ ಮಾಡಿ ಜಾಲ ಬೀಸುತ್ತಿದ್ದರು. ಪತಿಯ ಮಾರ್ಬಲ್ ಮತ್ತು ಇಂಟೀರಿಯರ್ ಡೆಕೋರೇಶನ್ ವ್ಯವಹಾರದಲ್ಲಿ ಭಾರೀ ನಷ್ಟ ಉಂಟಾಗಿತ್ತು. ತಾವು ಖರೀದಿಸಿದ್ದ ಫ್ಲಾಟ್‌ನ ಇಎಂಐ ಪಾವತಿಸಲು ಹಣವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ದಂಪತಿ, ಸುಲಭವಾಗಿ ಹಣ ಸಂಪಾದಿಸಲು ಈ ಹಾದಿ ಹಿಡಿದಿದ್ದರು. ಯೋಜನೆಯಂತೆ ಪತ್ನಿಯ ಅರೆನಗ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಗ್ರಾಹಕರನ್ನು ಸೆಳೆಯುತ್ತಿದ್ದರು.​ಗ್ರಾಹಕರು ಮನೆಗೆ ಬಂದಾಗ, ಪತಿ ರಹಸ್ಯ ಕ್ಯಾಮೆರಾಗಳ ಮೂಲಕ ಅಪರಿಚಿತ ಪುರುಷರು ಪತ್ನಿಯೊಂದಿಗೆ ಇರುವ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದ. ನಂತರ ಆ ವಿಡಿಯೋಗಳನ್ನು ತೋರಿಸಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು. 

ಕಳೆದ ನಾಲ್ಕು ವರ್ಷಗಳಿಂದ ಈ ದಂಧೆ ನಡೆಸುತ್ತಿದ್ದ ದಂಪತಿ, ಸುಮಾರು 60 ಲಕ್ಷ ರೂ. ಹಣವನ್ನು ಲೂಟಿ ಮಾಡಿದ್ದರು. ಈ ಹಣದಿಂದ ಅವರು ಒಂದು ಫ್ಲಾಟ್ ಮತ್ತು ಕಾರನ್ನು ಖರೀದಿಸಿದ್ದು, ಅವುಗಳನ್ನು ಪೊಲೀಸರು ಈಗ ಜಪ್ತಿ ಮಾಡಿದ್ದಾರೆ.

​ಇತ್ತೀಚೆಗೆ ದಂಪತಿ ತಮ್ಮ ಹಳೆಯ ಗ್ರಾಹಕರೊಬ್ಬರಿಗೆ ಮತ್ತೆ ಕಿರುಕುಳ ನೀಡಲಾರಂಭಿಸಿದ್ದರು. ಈಗಾಗಲೇ ಆ ವ್ಯಕ್ತಿಯಿಂದ 12 ಲಕ್ಷ ವಸೂಲಿ ಮಾಡಿದ್ದ ದಂಪತಿ, ಮತ್ತೆ 5 ಲಕ್ಷ ನೀಡುವಂತೆ ಪಟ್ಟು ಹಿಡಿದಿದ್ದರು. ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು.

​ಇದರಿಂದ ನೊಂದ ಸಂತ್ರಸ್ತ ವ್ಯಕ್ತಿ ತಮ್ಮ ಸ್ನೇಹಿತರ ಬಳಿ ವಿಷಯ ತಿಳಿಸಿದ್ದಾರೆ. ಸ್ನೇಹಿತರ ಸಲಹೆಯಂತೆ ಪೊಲೀಸ್ ದೂರು ದಾಖಲಿಸಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ದಂಪತಿಯನ್ನು ಬಂಧಿಸಿದ್ದಾರೆ.

Telangana police have arrested a couple from Karimnagar for allegedly honey-trapping more than 100 men over four years and extorting nearly ₹60 lakh. The husband allegedly used his wife to lure victims through social media, secretly recorded private moments, and blackmailed them for money. The scam came to light after a victim, already extorted of ₹12 lakh, was threatened again and approached the police.