ಕೋಟಿ ರೂ. ಚೀಟಿ ವ್ಯವಹಾರ ಇದೆ, ಹಣ ಸಾಲ ಕೊಟ್ಟರೆ ದುಪ್ಪಟ್ಟು ಕೊಡ್ತೀನಿ! ಟೈಲರ್ ಮಹಿಳೆಯ ಮರುಳು ಮಾತಿಗೆ ಮೂರು ಕೋಟಿ ಪಂಗನಾಮ, ಜುಟ್ಟು ಹಿಡಿದು ಎಳೆದಾಡಿ ಧರ್ಮದೇಟು ಕೊಟ್ಟ ಮಹಿಳೆಯರು 

27-10-25 05:29 pm       HK News Desk   ಕ್ರೈಂ

ಕೋಟಿ ರೂಪಾಯಿ ಚೀಟಿ ದುಡ್ಡು ಬರುತ್ತೆ, ಹಣ ಸಾಲ ಕೊಟ್ಟರೆ ದುಪ್ಪಟ್ಟು ವಾಪಸ್‌ ಕೊಡ್ತೇನೆ ಎಂದು ನಂಬಿಸಿ ಹಾಸನದ ಟೈಲರ್ ಮಹಿಳೆಯೊಬ್ಬರು ಮೂರು ಕೋಟಿಗೂ ಅಧಿಕ ಹಣ ವಂಚಿಸಿದ್ದು ಸಂತ್ರಸ್ತ ಮಹಿಳೆಯರು ನಡುರಸ್ತೆಯಲ್ಲೇ ಆಕೆಯ ಕೂದಲು, ರವಿಕೆ ಎಳೆದಾಡಿ ಧರ್ಮದೇಟು ನೀಡಿದ್ದಾರೆ. ಇದರ ಮೊಬೈಲ್ ವಿಡಿಯೋ ಹಾಸನದಲ್ಲಿ ವೈರಲ್ ಆಗಿದೆ. 

ಹಾಸನ, ಅ.27 : ಕೋಟಿ ರೂಪಾಯಿ ಚೀಟಿ ದುಡ್ಡು ಬರುತ್ತೆ, ಹಣ ಸಾಲ ಕೊಟ್ಟರೆ ದುಪ್ಪಟ್ಟು ವಾಪಸ್‌ ಕೊಡ್ತೇನೆ ಎಂದು ನಂಬಿಸಿ ಹಾಸನದ ಟೈಲರ್ ಮಹಿಳೆಯೊಬ್ಬರು ಮೂರು ಕೋಟಿಗೂ ಅಧಿಕ ಹಣ ವಂಚಿಸಿದ್ದು ಸಂತ್ರಸ್ತ ಮಹಿಳೆಯರು ನಡುರಸ್ತೆಯಲ್ಲೇ ಆಕೆಯ ಕೂದಲು, ರವಿಕೆ ಎಳೆದಾಡಿ ಧರ್ಮದೇಟು ನೀಡಿದ್ದಾರೆ. ಇದರ ಮೊಬೈಲ್ ವಿಡಿಯೋ ಹಾಸನದಲ್ಲಿ ವೈರಲ್ ಆಗಿದೆ. 

ವಂಚಕಿ ಟೈಲರ್‌ ಜುಟ್ಟು ಹಿಡಿದು ವಾಹನಗಳ ಮಧ್ಯೆ ಎಳೆದಾಡಿದ್ದು ಇದರ ದೃಶ್ಯಗಳು ಜಾಲತಾಣದಲ್ಲಿ ವೈರಲ್ ಆಗಿದೆ. ವಂಚಕಿ ಮಹಿಳೆ ವಿರುದ್ಧ ಒಂದೆಡೆ ಪ್ರಕರಣ ದಾಖಲಾಗಿದ್ದರೆ, ತನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಆಕೆಯೂ ದೂರು ಕೊಟ್ಟಿದ್ದಾರೆ.

ಲೇಡಿ ಟೈಲರ್‌ ಹೇಮಾವತಿ ಎಂಬಾಕೆ ಹಾಸನದ ಅರಳಿಪೇಟೆ ರಸ್ತೆಯಲ್ಲಿ ತನ್ನದೇ ಆದ ಟೈಲರಿಂಗ್‌ ಅಂಗಡಿ ಹೊಂದಿದ್ದಳು. ಜ್ಯೋತಿ ಡ್ರೆಸ್ ಮೇಕರ್ಸ್ ಎನ್ನುವ ಅಂಗಡಿಯಿದ್ದು ಬಟ್ಟೆ ಕೊಡುತ್ತಿದ್ದ ಮಹಿಳೆಯರ ಬಳಿ ಸಲುಗೆಯಿಂದ ವ್ಯವಹರಿಸುತ್ತಿದ್ದಳು. ಅವರ ಬಳಿ ಮಾತನಾಡುತ್ತ, ಮಗಳಿಗೆ ವಿದೇಶದಲ್ಲಿ ಮಾಸ್ಟರ್ಸ್‌ ಓದಿಸಬೇಕು. ಈಗ ಕೋಟಿ ರೂಪಾಯಿ ಮೌಲ್ಯದ ಮನೆ ಖರೀದಿಸಿದ್ದೇನೆ ಎಂದು ಹೇಳುತ್ತಿದ್ದಳು. ಸದ್ಯಕ್ಕೆ ಒಂದಷ್ಟು ದುಡ್ಡಿನ ಅಗತ್ಯವಿದೆ, ಕೊಡಚಾದ್ರಿ ಚಿಟ್ಸ್‌ನಲ್ಲಿ 1 ಕೋಟಿ ರೂ.ಗೂ ಅಧಿಕ ದರಕ್ಕೆ ಚೀಟಿ ಹಾಕಿರುವೆ. ಕೆಲವೇ ತಿಂಗಳಲ್ಲಿ ಆ ಹಣ ಕೈಗೆ ಬರುತ್ತದೆ ಎಂದು ನಕಲಿ ಸ್ಲಿಪ್‌ಗಳನ್ನು ಮಹಿಳೆಯರಿಗೆ ತೋರಿಸಿ, ಚಿನ್ನ ಅಡವಿಟ್ಟಾದರೂ ಸರಿ ಸಾಲ ಕೊಡಿ ಎಂದು ಕೇಳುತ್ತಿದ್ದಳಂತೆ. 

ಹೇಮಾವತಿ ಮಾತನ್ನು ನಂಬಿ ಕೆಲವರು ಚಿನ್ನ ಅಡವಿಟ್ಟು ಆಕೆಗೆ ಹಣ ನೀಡಿದ್ದಾರೆ. ನಿತ್ಯವೂ ಅಂಗಡಿಗೆ ಬರುವ ಮಹಿಳೆಯರನ್ನು ಮರುಳು ಮಾಡಿ, ಹಣ ಪಡೆಯುತ್ತಿದ್ದಳು. 45 ಲಕ್ಷ ರೂ.ಗಿಂತ ಹೆಚ್ಚು ಹಣ ಮೋಸ ಮಾಡಿದ್ದಾರೆ ಎಂದು ಹಾಸನ ನಗರ ಠಾಣೆ, ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. 

ವಂಚಕಿ ಹೇಮಾವತಿ ಅವರಿಗೆ ಟೈಲರ್‌‌ ಅಂಗಡಿ ಬಾಡಿಗೆ ಕೊಟ್ಟಿದ್ದ ಮಾಲೀಕರು ಮಾತನಾಡಿ, ಅಂಗಡಿ ಬಾಡಿಗೆ ಎರಡು ವರ್ಷದಿಂದ ಕೊಟ್ಟಿಲ್ಲ. ಬೇಕಂತಲೇ ಹಣ ಕೊಟ್ಟಿಲ್ಲ. ವ್ಯವಹಾರ ಫಲ ಕೊಟ್ಟಿಲ್ಲ ಎಂದರೆ ಏನೋ ಹೇಳಹುದು. ಆದರೆ, ಅಂಗಡಿ ಬ್ಯುಸಿನಸ್‌ ಚೆನ್ನಾಗಿಯೇ ಇತ್ತು. ಆದರೂ ಬಾಡಿಗೆ ವಾಪಸ್‌ ಕೊಟ್ಟಿಲ್ಲ. ಮಗಳನ್ನ ವಿದೇಶಕ್ಕೆ ಕಳುಹಿಸಿದ್ದಾರೆ. ಈಕೆ ಬೇರೆ ದುಬಾರಿ ಬಟ್ಟೆ, ಕಾರು ತಗೊಂಡಿದ್ದಾರೆ. ಕೋಟಿ ಬೆಲೆ ಬಾಳುವ ಮನೆ ಖರೀದಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

A shocking incident took place in Hassan, where a local tailor woman allegedly cheated several women of over ₹3 crore, promising to double their money through a “₹1 crore chit fund scheme.” When her fraud came to light, angry victims dragged her by her hair and thrashed her in the middle of the road, as seen in viral videos circulating on social media.