ಬ್ರೇಕಿಂಗ್ ನ್ಯೂಸ್
28-12-20 03:08 pm Headline Karnataka News Network ಕ್ರೈಂ
ತಿರುವನಂತಪುರ, ಡಿ.28: 28 ವರ್ಷದ ಯುವಕನೊಬ್ಬ ತನ್ನ 51 ವರ್ಷದ ಪತ್ನಿಯನ್ನು ವಿದ್ಯುತ್ ಶಾಕ್ ಕೊಟ್ಟು ಕೊಲ್ಲಿಸಿದ ಘಟನೆ ತಿರುವನಂತಪುರದಲ್ಲಿ ನಡೆದಿದೆ.
ಅರುಣ್ ಎಂಬ ಯುವಕ, 51 ವರ್ಷದ ಶಾಖಾ ಕುಮಾರಿ ಎಂಬಾಕೆಯನ್ನು ಎರಡು ತಿಂಗಳ ಹಿಂದೆ ಮದುವೆಯಾಗಿದ್ದ. ಆದರೆ, ಮದುವೆಯ ಬಳಿಕ ಆತನನ್ನು ಗೆಳೆಯರು ಕೀಟಲೆ ಮಾಡಿದ್ದರು. 51 ವರ್ಷದ ಮಹಿಳೆಯನ್ನು ಮದುವೆಯಾದ ಬಗ್ಗೆ ತಮಾಷೆ ಮಾಡುತ್ತಿದ್ದರು. ಇದರಿಂದ ಬೇಸತ್ತ ಅರುಣ್, ಪತ್ನಿಯಲ್ಲಿ ಮದುವೆಯ ಫೋಟೋಗಳನ್ನು ಯಾರಲ್ಲೂ ಶೇರ್ ಮಾಡದಂತೆ ಹೇಳಿದ್ದ. ಇದಲ್ಲದೆ, ಆತ ತನ್ನ ಸಂಬಂಧಿಕರು, ಗೆಳೆಯರನ್ನು ಮದುವೆಗೂ ಕರೆದಿರಲಿಲ್ಲ.
ಮೊನ್ನೆ ಶನಿವಾರ ಇದ್ದಕ್ಕಿದ್ದಂತೆ ವಿದ್ಯುತ್ ಶಾಕ್ ಆಗಿದ್ದಾಗಿ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿದ್ದ. ಆಸ್ಪತ್ರೆಯಲ್ಲಿ ಆಕೆ ಮೃತಪಟ್ಟಿದ್ದು, ದೇಹದಲ್ಲಿ ಗಾಯದ ಗುರುತುಗಳಿದ್ದರಿಂದ ಸಾವಿನ ಬಗ್ಗೆ ವೈದ್ಯರು ಸಂಶಯಿಸಿ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ತಪಾಸಣೆ ನಡೆಸಿದಾಗ, ಕ್ರಿಸ್ಮಸ್ ಹಬ್ಬಕ್ಕೆಂದು ಮನೆಯ ಹೊರಭಾಗದಲ್ಲಿ ಅಲಂಕಾರ ಮಾಡಿದ್ದು, ಅದನ್ನು ಪತ್ನಿ ಆಕಸ್ಮಾತ್ ಮುಟ್ಟಿದ ವೇಳೆ ಶಾಕ್ ಆಗಿದೆ ಎಂದಿದ್ದ. ಆದರೆ, ಮನೆಯಲ್ಲಿ ಗಮನಿಸಿದಾಗ, ವಿದ್ಯುತ್ ಮೀಟರ್ ನಿಂದ ಎಳೆದಿದ್ದ ವೈರಿನ ಮತ್ತೊಂದು ತುದಿಯನ್ನು ಪತ್ನಿ ಮಲಗುತ್ತಿದ್ದ ಕೋಣೆಗೆ ಜಾಯಿಂಟ್ ಮಾಡಲಾಗಿತ್ತು. ಸಂಶಯ ಬಂದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಹಿಳೆಯರ ಸಂಬಂಧಿಕರಲ್ಲಿ ವಿಚಾರಿಸಿದಾಗ, ಯುವಕ ಆಕೆಯ ಬಳಿಯಿದ್ದ ಆಸ್ತಿ ಕಬಳಿಸುವುದಕ್ಕಾಗಿಯೇ ಮದುವೆಯಾಗಿದ್ದ ಎಂದಿದ್ದಾರೆ. ಈ ಮೊದಲು ಕೂಡ ಮನೆಯಲ್ಲಿ ಜಗಳವಾಡುತ್ತಿದ್ದು ಒಮ್ಮೆ ಕೊಲ್ಲಲು ಯತ್ನಿಸಿದ್ದ. ಮನೆಯಲ್ಲಿ ಆಕೆಯ ತಾಯಿ ಬೆಡ್ಡಿನಲ್ಲಿ ಮಲಗಿದಲ್ಲೇ ಇದ್ದಾಳೆ. ಅವರನ್ನು ನೋಡಿಕೊಳ್ಳಲು ಹೋಮ್ ನರ್ಸ್ ಅನ್ನು ಇಟ್ಟುಕೊಂಡಿದ್ದಾರೆ. ಹೋಮ್ ನರ್ಸ್ ಬಳಿ ಕೇಳಿದರೆ, ಆಕೆಯೂ ಗಂಡ- ಹೆಂಡತಿ ನಡುವೆ ಜಗಳ ಆಗುತ್ತಿದ್ದುದನ್ನು ಹೇಳಿದ್ದಾಳೆ. ಹೀಗಾಗಿ ಪತಿಯೇ ಪತ್ನಿಗೆ ವಿದ್ಯುತ್ ಶಾಕ್ ನೀಡಿ, ಕೊಲ್ಲಿಸಿದ್ದಾಗಿ ಆರೋಪ ಕೇಳಿಬಂದಿದೆ.
ಮೂಗು, ಬಾಯಿಯಲ್ಲಿ ರಕ್ತ ಬರುತ್ತಿದ್ದುದರಿಂದ ವೈದ್ಯರು ಸಾವಿನ ಬಗ್ಗೆ ಸಂಶಯಪಟ್ಟಿದ್ದರು. ಪೊಲೀಸರು ವಿಚಾರಣೆ ನಡೆಸಿದಾಗ, ಮಹಿಳೆಯ ಬಳಿ ತಿರುವನಂತಪುರದಲ್ಲಿ ಹತ್ತು ಎಕರೆ ಆಸ್ತಿ ಇತ್ತು. ಅಲ್ಲದೆ, ಮದುವೆಗೂ ಮೊದಲೇ ಯುವಕ ಮಹಿಳೆಯ ಬಳಿಯಿಂದ ಹತ್ತು ಲಕ್ಷ ರೂ. ಸಾಲ ಪಡೆದಿದ್ದ. ಅಲ್ಲದೆ, ತಾನು ಒಳ್ಳೆಯವನೆಂದು ತೋರಿಸಿಕೊಂಡು ಪುಸಲಾಯಿಸಿ ಮದುವೆಯಾಗಿದ್ದಾನೆ. ಆಕೆಯ ಆಸ್ತಿ ದೋಚುವುದಕ್ಕಾಗಿಯೇ ಮದುವೆಯಾಗಿದ್ದಾನೆಂದು ಸಂಬಂಧಿಕರು ಆರೋಪಿಸಿದ್ದಾರೆ.
ಇನ್ಸೂರೆನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ 51 ವರ್ಷದ ಮಹಿಳೆಗೆ ಮದುವೆಯಾಗಿರಲಿಲ್ಲ. ಮದುವೆಯಾಗದೇ ಉಳಿದಿದ್ದ ಈಕೆಗೆ ಮೂರು ವರ್ಷಗಳ ಹಿಂದೆ ಆಸ್ಪತ್ರೆ ಒಂದರಲ್ಲಿ ಯುವಕ ಅರುಣ್ ಪರಿಚಯ ಆಗಿದ್ದ. ಆನಂತರ ಗೆಳೆತನ ಆಗಿ, ಎರಡು ತಿಂಗಳ ಹಿಂದೆ ಮದುವೆ ಮಾಡಿಕೊಂಡಿದ್ದರು. ಮದುವೆಯನ್ನೂ ಗುಪ್ತವಾಗಿಯೇ ಮಾಡಿದ್ದ. ಇತ್ತೀಚೆಗೆ ಮದುವೆಯ ಫೋಟೊಗಳನ್ನು ಮಹಿಳೆ ತನ್ನ ಫೇಸ್ಬುಕ್ ನಲ್ಲಿ ಹಾಕಿದ್ದು ಜಗಳಕ್ಕೆ ಕಾರಣವಾಗಿತ್ತು.
A 51-year old woman who died in suspicious circumstances in Thiruvananthapuram on Saturday was suspected to be inflicted electric shock by her 28-year old husband.
10-08-25 01:57 pm
Bangalore Correspondent
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
ಬೆಂಗಳೂರಿನಲ್ಲಿ ಮತ್ತೊಂದು ಹೊಸ ಸ್ಟೇಡಿಯಂ ; 80 ಸಾವಿ...
09-08-25 08:00 pm
ಎರಡು ವಂದೇ ಭಾರತ್, ಮೆಟ್ರೋ ಯಲ್ಲೋ ಲೈನ್ ಅನಾವರಣಕ್ಕೆ...
09-08-25 07:28 pm
Siddaramaiah,Ibrahim: ಸಿದ್ದರಾಮಯ್ಯ ಎರಡು ಬಾರಿ ಮ...
09-08-25 03:32 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 02:26 pm
Mangalore Correspondent
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
Drug’s Mangalore, Police, Arrest: ಡ್ರಗ್ಸ್ ಮುಕ...
09-08-25 09:42 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm