Auto Driver Assaulted, Traffic Police in Puttur: ಪುತ್ತೂರಿನಲ್ಲಿ ಆಟೋ ಅಡ್ಡಗಟ್ಟಿ ಚಾಲಕನಿಗೆ ಹಲ್ಲೆ ; ವಿಡಿಯೋ ವೈರಲ್, ಟ್ರಾಫಿಕ್ ಎಎಸ್ಐ ಸೇರಿ ಇಬ್ಬರು ಕರ್ತವ್ಯದಿಂದ ಅಮಾನತು

18-10-25 03:48 pm       Mangalore Correspondent   ಕ್ರೈಂ

ಪುತ್ತೂರಿನಲ್ಲಿ ಆಟೋ ಚಾಲಕನನ್ನು ಅಡ್ಡಗಟ್ಟಿ ಇಬ್ಬರು ಟ್ರಾಫಿಕ್ ಪೊಲೀಸರು ಹಲ್ಲೆ ನಡೆಸಿದ ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆ ಸಂಬಂಧಿಸಿ ಪರಿಶೀಲನೆ ಬಳಿಕ ದಕ್ಷಿಣ ಕನ್ನಡ ಎಸ್ಪಿ ಡಾ.ಅರುಣ್, ಹಲ್ಲೆ ನಡೆಸಿರುವ ಎಎಸ್ಐ ಮತ್ತು ಪೊಲೀಸ್ ಪೇದೆಯನ್ನು ಕರ್ತವ್ಯದಿಂದ ಅಮಾನತು ಮಾಡಿದ್ದಾರೆ.

ಪುತ್ತೂರು, ಅ.18: ಪುತ್ತೂರಿನಲ್ಲಿ ಆಟೋ ಚಾಲಕನನ್ನು ಅಡ್ಡಗಟ್ಟಿ ಇಬ್ಬರು ಟ್ರಾಫಿಕ್ ಪೊಲೀಸರು ಹಲ್ಲೆ ನಡೆಸಿದ ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆ ಸಂಬಂಧಿಸಿ ಪರಿಶೀಲನೆ ಬಳಿಕ ದಕ್ಷಿಣ ಕನ್ನಡ ಎಸ್ಪಿ ಡಾ.ಅರುಣ್, ಹಲ್ಲೆ ನಡೆಸಿರುವ ಎಎಸ್ಐ ಮತ್ತು ಪೊಲೀಸ್ ಪೇದೆಯನ್ನು ಕರ್ತವ್ಯದಿಂದ ಅಮಾನತು ಮಾಡಿದ್ದಾರೆ.

ಪುತ್ತೂರಿನ ದರ್ಬೆಯಲ್ಲಿ ಆಟೋ ಚಾಲಕ ಬಶೀರ್ ಎಂಬಾತ ಸಮವಸ್ತ್ರ ಧರಿಸದೇ ಆಟೋ ಚಲಾಯಿಸಿಕೊಂಡು ತೆರಳುತ್ತಿದ್ದಾಗ ಕರ್ತವ್ಯದಲ್ಲಿದ್ದ ಪುತ್ತೂರು ಸಂಚಾರಿ ಠಾಣೆಯ ಎಎಸ್ಐ ಚಿದಾನಂದ ರೈ ಮತ್ತು ಪೇದೆ ಶ್ರೀಶೈಲ ಎಂ.ಕೆ ಅವರು ನಿಲ್ಲಿಸಲು ಸೂಚಿಸಿದ್ದಾರೆ. ನಿಲ್ಲಿಸದೇ ಇದ್ದಾಗ ಟ್ರಾಫಿಕ್ ಪೊಲೀಸರು ಬೈಕಿನಲ್ಲಿ ಹಿಂಬಾಲಿಸಿ ಅಡ್ಡಗಟ್ಟಿದ್ದು, ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಬೈಕಿನಲ್ಲಿ ಅಡ್ಡಗಟ್ಟುವುದು ಮತ್ತು ಹಲ್ಲೆ ನಡೆಸಿದ ಘಟನೆಯನ್ನು ಸ್ವತಃ ಬಶೀರ್ ತನ್ನ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರಿಂದ ವೈರಲ್ ಆಗಿತ್ತು. ವಿಡಿಯೋ ಆಧರಿಸಿ ಜಿಲ್ಲಾ ಎಸ್ಪಿಯವರು ಕರ್ತವ್ಯ ಲೋಪ ಎಸಗಿದ ಎಎಸ್ಐ ಮತ್ತು ಪೊಲೀಸ್ ಪೇದೆಯನ್ನು ಕರ್ತವ್ಯದಿಂದ ಅಮಾನತು ಮಾಡಿದ್ದಾರೆ.

ಬಶೀರ್ ಹೇಳಿಕೆಯ ಪ್ರಕಾರ, ಫಿಲೋಮಿನಾ ಕಾಲೇಜು ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ದಿನವೂ ವಾಹನಗಳನ್ನು ಅಡ್ಡಗಟ್ಟಿ ದಂಡ ವಿಧಿಸುತ್ತಾರೆ. ನಿನ್ನೆ ಆಟೋ ನಿಲ್ಲಿಸದೇ ಇದ್ದಾಗ ಇಬ್ಬರು ಪೊಲೀಸರು ಹಿಂಬಾಲಿಸಿ ಬಂದು ಅಡ್ಡಗಟ್ಟಿದ್ದಾರೆ. ವಿಡಿಯೋ ಮಾಡಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎಂದಿದ್ದಾರೆ. ಘಟನೆ ಸಂಬಂಧಿಸಿ ಸಮವಸ್ತ್ರ ಧರಿಸದಿರುವುದು ಮತ್ತು ಪೊಲೀಸರ ಸೂಚನೆ ಪಾಲಿಸದೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಬಶೀರ್ ವಿರುದ್ಧವೂ ಪ್ರಕರಣ ದಾಖಲಾಗಿದೆ.

A shocking incident from Puttur has gone viral after a video surfaced showing two traffic policemen assaulting an auto driver. Following an internal inquiry, Dakshina Kannada SP Dr. Arun has suspended Traffic ASI Chidananda Rai and Constable Shreeshaila M.K. for misconduct.