ಬ್ರೇಕಿಂಗ್ ನ್ಯೂಸ್
27-12-20 09:12 pm Mangaluru Correspondent ಕ್ರೈಂ
ಮಂಗಳೂರು, ಡಿ.27: ಬೈಕಿನಲ್ಲಿ ಬಂದು ಸರ ಕದಿಯೋದನ್ನು ಕೇಳಿದ್ದೇವೆ. ಒಬ್ಬಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ, ಯುವಕರು ಸರ ಕಿತ್ತು ಓಡುತ್ತಿರುವುದನ್ನು ಕಂಡಿದ್ದೇವೆ. ಆದರೆ, ಈಗ ಕಳ್ಳರು ಕದಿಯೋದರಲ್ಲೂ ಹೈ ಫೈ ಆಗುತ್ತಿದ್ದಾರೆ. ಮಂಗಳೂರಿನಲ್ಲಿ ಆಟೋದಲ್ಲಿ ಬಂದು ರಾತ್ರೋರಾತ್ರಿ ತಲೆಗೆ ದೊಣ್ಣೆಯಲ್ಲಿ ಹೊಡೆದು ಕಳವು ಮಾಡೋ ಹೊಸ ರೀತಿಯ ಪ್ರಯೋಗ ಆರಂಭವಾಗಿದೆ.
ಮಂಗಳೂರಿನ ಬಂದರು ಮತ್ತು ಉಳ್ಳಾಲದಲ್ಲಿ ಡಿ.25ರಂದು ರಾತ್ರಿ ಒಂದೇ ದಿನ ಹೀಗೆ ವಿಭಿನ್ನ ರೀತಿಯ ಕಳವು ಕೃತ್ಯ ನಡೆದಿದೆ. ಬಂದರಿನಲ್ಲಿ ಪ್ರಭುದೇವ್ ಎಂಬವರು ಮನೆಯಿಂದ ಹೊರಬಂದು ಮೊಬೈಲಿನಲ್ಲಿ ಮಾತನಾಡುತ್ತಿದ್ದಾಗ, ಆಟೋದಲ್ಲಿ ಬಂದ ವ್ಯಕ್ತಿ ದೊಣ್ಣೆಯಿಂದ ತಲೆಗೆ ಬಡಿದಿದ್ದಾನೆ. ಪ್ರಭುದೇವ್ ಬಳಿಯಿದ್ದ ಮೊಬೈಲನ್ನು ಕಿತ್ತುಕೊಂಡು ಆಟೋದಲ್ಲಿ ಬಂದಿದ್ದ ವ್ಯಕ್ತಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ.

ಇದೇ ರೀತಿಯ ಪ್ರಕರಣ ಉಳ್ಳಾಲದಲ್ಲಿಯೂ ಅದೇ ದಿನ ರಾತ್ರಿ ನಡೆದಿದೆ. ಉಳ್ಳಾಲದಲ್ಲಿ ಜಾಫರ್ ಎಂಬ ವ್ಯಕ್ತಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಟೋದಲ್ಲಿ ಬಂದ ವ್ಯಕ್ತಿ ತಲೆಗೆ ಹೊಡೆದಿದ್ದು ಆತ ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಮೊಬೈಲ್ ಎಗರಿಸಿ ಓಡಿದ್ದಾರೆ.
ಆಟೋದಲ್ಲಿ ಚಾಲಕ ಮತ್ತು ಹಿಂಭಾಗದ ಸೀಟಿನಲ್ಲಿ ಮತ್ತೊಬ್ಬ ಇದ್ದ ಎಂದು ಪೊಲೀಸ್ ದೂರು ನೀಡಲಾಗಿದೆ. ಎರಡು ಪ್ರಕರಣವೂ ಬಂದರು ಮತ್ತು ಉಳ್ಳಾಲ ಠಾಣೆಯಲ್ಲಿ ದಾಖಲಾಗಿದೆ. ಟ್ಯಾಕ್ಸಿ ಆಟೋದಲ್ಲಿ ಬಂದು ಹೀಗೆ ದೊಣ್ಣೆಯಲ್ಲಿ ಹೊಡೆದು ಆತನಲ್ಲಿರುವ ಚಿನ್ನ, ಮೊಬೈಲ್, ಹಣ ಹೀಗೆ ಎಲ್ಲವನ್ನೂ ಕಿತ್ತುಕೊಂಡು ಹೋಗುತ್ತಿರುವುದು ಹೊಸ ರೀತಿಯ ಅಪರಾಧ ಆಗಿದ್ದು ಪೊಲೀಸರು ಇನ್ನಷ್ಟೇ ಈ ಬಗ್ಗೆ ಎಚ್ಚತ್ತುಕೊಳ್ಳಬೇಕಷ್ಟೆ.
Mangalore city has now witnessed Robbers arriving in auto-rickshaw Attacking persons and snatching their Mobile phones and cash. A case has been reported in Bunder and Ullal Police station.
12-06-26 12:02 pm
HK News Staffer
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
15-06-26 04:52 pm
HK News Staffer
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
ಮಧ್ಯರಾತ್ರಿ ಎದೆನೋವಿನಿಂದ ಮನೆಯಲ್ಲೇ ಕುಸಿದು ಬಿದ್ದ...
12-06-26 10:48 pm
15-06-26 04:54 pm
HK News Staffer
ಸೋಲಾಪುರದಲ್ಲಿ ಭೀಕರ ದುರಂತ! ನಿಯಂತ್ರಣ ತಪ್ಪಿ ನಾಲೆಗ...
15-06-26 11:50 am
ಧರ್ಮಸ್ಥಳಕ್ಕೆ ತೆರಳಿದ್ದ ಬೆಂಗಳೂರಿನ ಮೂವರು ಯುವಕರು...
15-06-26 11:27 am
ರೇಣುಕಾಸ್ವಾಮಿ ಕೇಸ್ ಮಾದರಿಯಲ್ಲೇ ಬಳ್ಳಾರಿಯಲ್ಲಿ ಭೀಕ...
14-06-26 10:30 pm
ಮಂಜೇಶ್ವರ; ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಬಾಲಕಿಯರು...
14-06-26 05:08 pm