ಬ್ರೇಕಿಂಗ್ ನ್ಯೂಸ್
26-12-20 09:29 am Mangaluru Correspondent ಕ್ರೈಂ
ಉಳ್ಳಾಲ, ಡಿ.26: ಸ್ಕೂಟರಲ್ಲಿ ಸಂಚರಿಸುತ್ತಿದ್ದ ಇಬ್ಬರು ಯುವಕರಿಗೆ ಪಲ್ಸರ್ ಬೈಕಿನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಇರಿದು ಪರಾರಿಯಾದ ಘಟನೆ ನಿನ್ನೆ ರಾತ್ರಿ ಕುತ್ತಾರು ಪದವಿನ ಬಳಿಯ ಅಡು ಎಂಬಲ್ಲಿ ನಡೆದಿದೆ.
ಸೇವಂತಿ ಗುಡ್ಡೆಯ ಆದಿತ್ಯ (23) ಮತ್ತು ಪಂಡಿತ್ ಹೌಸ್ ಶಿವಾಜಿನಗರದ ನಿವಾಸಿ ಪವನ್(22) ಇರಿತಕ್ಕೊಳಗಾದ ಯುವಕರು. ಅದೃಷ್ಟವಶಾತ್ ಇಬ್ಬರು ಕೂಡ ಸಣ್ಣ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದಿತ್ಯ ಅವರ ತಮ್ಮ ಅನೀಷ್ ಎಂಬಾತ ರಾಣಿಪುರಕ್ಕೆ ಕೇಟರಿಂಗ್ ಕೆಲಸಕ್ಕೆ ತೆರಳಿದ್ದು ಅವನನ್ನು ವಾಪಸ್ ಕರೆತರಲು ಆದಿತ್ಯ ಸ್ನೇಹಿತ ಪವನ್ ಜೊತೆ ದ್ವಿಚಕ್ರ ವಾಹನದಲ್ಲಿ ರಾಣಿಪುರಕ್ಕೆ ತೆರಳಿದ್ದಾರೆ. ಪವನ್ ವಾಹನ ಚಲಾಯಿಸುತ್ತಿದ್ದು ಆದಿತ್ಯ ಹಿಂಬಂದಿ ಕೂತಿದ್ದರೆನ್ನಲಾಗಿದೆ. ಸುಮಾರು 9.30 ಗಂಟೆ ಹೊತ್ತಿಗೆ ಋಷಿವನದ ಬಳಿಯ ಅಡು ಎಂಬಲ್ಲಿಗೆ ತಲುಪಿದಾಗ ಹಿಂದಿನಿಂದ ಬಂದ ಪಲ್ಸರ್ ಬೈಕಲ್ಲಿದ್ದ ಇಬ್ಬರು ದುಷ್ಕರ್ಮಿಗಳು ಆದಿತ್ಯರ ಬೆನ್ನು , ಪವನ್ ಅವರ ತೋಳಿಗೆ ಇರಿದು ರಾಣಿಪುರದ ಕಡೆಗೆ ಪರಾರಿಯಾಗಿದ್ದಾರೆ. ಗಾಯಗೊಂಡ ಯುವಕರಿಬ್ಬರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೆಲವು ವರ್ಷಗಳ ಹಿಂದೆ ಉಳ್ಳಾಲ ಪ್ರದೇಶದಲ್ಲಿ ಅಪರಿಚಿತ ಕಪ್ಪು ಪಲ್ಸರ್ ನಲ್ಲಿ ಬರುತ್ತಿದ್ದ ದುಷ್ಕರ್ಮಿಗಳಿಂದ ಸರಣಿ ಇರಿತಗಳಾಗಿದ್ದವು. ಇದೀಗ ಮತ್ತೆ ಅದೇ ರೀತಿಯ ಪಲ್ಸರ್ ಬೈಕ್ ಗುಮ್ಮ ಈ ಪ್ರದೇಶದಲ್ಲಿ ಜಾಗೃತಗೊಂಡಿದ್ದು ಅಶಾಂತಿ ಸೃಷ್ಟಿಸಲು ಸಂಚು ನಡೆಸುತ್ತಿದೆ. ಉಳ್ಳಾಲ ಪೊಲೀಸರು ಕೇಸು ದಾಖಲಿಸಿ ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ.
Two young men who were travelling by a motorbike in Ullal, Mangalore were stabbed by a gang which approached them in another motorbike from behind and caused an accident before stabbing them.
09-08-25 08:00 pm
HK Staff
ಎರಡು ವಂದೇ ಭಾರತ್, ಮೆಟ್ರೋ ಯಲ್ಲೋ ಲೈನ್ ಅನಾವರಣಕ್ಕೆ...
09-08-25 07:28 pm
Siddaramaiah,Ibrahim: ಸಿದ್ದರಾಮಯ್ಯ ಎರಡು ಬಾರಿ ಮ...
09-08-25 03:32 pm
Fraud Case, Dhruva Sarja, Mumbai: ಆಕ್ಷನ್ ಪ್ರಿ...
09-08-25 01:40 pm
ನೂರಾರು ಕೊಲೆ ಮಾಡಿಸಲು ಧರ್ಮಸ್ಥಳದ ಧರ್ಮಾಧಿಕಾರಿ ದಾವ...
08-08-25 06:23 pm
09-08-25 07:38 pm
HK Staff
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
09-08-25 08:10 pm
Mangalore Correspondent
Father Muller Medical College, Hospital, Mang...
09-08-25 04:22 pm
Dharmasthala,16th Spot at Bahubali Hill: ಧರ್ಮ...
09-08-25 02:16 pm
Udupi, Talaq; ವರದಕ್ಷಿಣೆ ಕಿರುಕುಳ ; ವಿದೇಶದಿಂದ ಮ...
09-08-25 11:36 am
Roshan Saldanha, ED Raid, Mangalore, Fraud: ರ...
08-08-25 11:10 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm