ಬ್ರೇಕಿಂಗ್ ನ್ಯೂಸ್
26-07-25 09:35 pm HK News Desk ಕ್ರೈಂ
ಬೆಳಗಾವಿ, ಜುಲೈ 26 : ಸೈಬರ್ ವಂಚಕರ ಜಾಲದ ಖದೀಮರಿಗಾಗಿ ನಕಲಿ ದಾಖಲೆಗಳನ್ನು ಮುಂದಿಟ್ಟು ಬ್ಯಾಂಕ್ ಖಾತೆಗಳನ್ನು ಮಾಡಿಕೊಡುತ್ತಿದ್ದ ಮೂವರು ಆರೋಪಿಗಳನ್ನು ಚೆನ್ನೈ ಪೊಲೀಸರು ಬೆಳಗಾವಿಯಲ್ಲಿ ಬಂಧಿಸಿದ್ದಾರೆ.
ಬೆಳಗಾವಿ ನಗರದ ಆರ್‌ಪಿಡಿ ಕ್ರಾಸ್‌ನ ಬಿಬಿಎ ಪದವೀಧರ ಸರ್ವೇಶ ಕಿಣಿ, ಕುವೆಂಪು ನಗರದ ಅನಿಲ್ ಕೊಲ್ಲಾಪುರ, ಗಣೇಶಪುರದ ರೋಹನ್ ಕಾಂಬಳೆ ಬಂಧಿತರು. ಕರ್ನಾಟಕದಲ್ಲಿ ಮೂರು ಸೇರಿ ಈ ಮೂವರ ವಿರುದ್ಧ ದೇಶದ ವಿವಿಧ ಠಾಣೆಗಳಲ್ಲಿ 27 ಕೇಸ್ ದಾಖಲಾಗಿದೆ. ಕಮಿಷನ್ ಆಸೆ ಹುಟ್ಟಿಸಿ ಬ್ಯಾಂಕ್ ನಲ್ಲಿ ಕರೆಂಟ್ ಅಕೌಂಟ್ ತೆರೆದು ಕೊಡುವಂತೆ ಇಬ್ಬರಿಗೂ ಸರ್ವೇಶ್ ಪ್ರಚೋದನೆ ಮಾಡುತ್ತಿದ್ದ.
ಕಂಪನಿಗಳ ಹೆಸರಿನಲ್ಲಿ ಬ್ಯಾಂಕ್‌ಗೆ ನಕಲಿ ದಾಖಲೆ ಕೊಟ್ಟು ಕರೆಂಟ್ ಅಕೌಂಟ್ ತೆರೆಯುತ್ತಿದ್ದ ರೋಹನ್ ಮತ್ತು ಅನಿಲ್ ಅವುಗಳನ್ನು ಸರ್ವೇಶ್ ಮೂಲಕ ಸೈಬರ್ ವಂಚಕರಿಗೆ ಪೂರೈಸುತ್ತಿದ್ದರು. ಈ ಬ್ಯಾಂಕ್ ಖಾತೆಗಳ ಪಾಸ್ ಬುಕ್, ಅಕೌಂಟ್ ನಂಬರ್, ಎಟಿಎಂ ಕಾರ್ಡ್ ಗಳನ್ನು ಸರ್ವೇಶ್ ಗೆ ನೀಡಿದ್ದರು. ಇವರು ಮಾಡಿಕೊಡುತ್ತಿದ್ದ ಬ್ಯಾಂಕ್ ಅಕೌಂಟ್ ಗಳನ್ನು ಸರ್ವೇಶ್ ಸೈಬರ್ ವಂಚಕರಿಗೆ ನೀಡಿದ್ದ.
ಸೈಬರ್ ವಂಚಕರು ಅಮಾಯಕರ ಖಾತೆಗಳನ್ನು ಹ್ಯಾಕ್ ಮಾಡಿ, ಅದರಲ್ಲಿರುವ ಹಣವನ್ನು ಇವರು ಕೊಡುತ್ತಿದ್ದ ಅಕೌಂಟ್‌ಗೆ ವರ್ಗಾಯಿಸಿಕೊಳ್ತಿದ್ದರು. ಬಳಿಕ ಈ ಹಣವನ್ನು ಬೇರೆ ಬೇರೆ ಅಕೌಂಟ್‌ಗೆ ವರ್ಗಾವಣೆ ಮಾಡುತ್ತಿದ್ದುದು, ಹಣವನ್ನು ವಿತ್ ಡ್ರಾ ಮಾಡುತ್ತಿದ್ದುದು ತನಿಖೆಯಲ್ಲಿ ಪತ್ತೆಯಾಗಿದೆ. ಇವರ ಖಾತೆಯಲ್ಲಿ ಒಂದು ಕೋಟಿ ಹಣ ವರ್ಗಾವಣೆಯಾದಲ್ಲಿ 60 ಸಾವಿರ ಕಮಿಷನ್ ನೀಡುವುದಾಗಿ ಅನಿಲ್ ಮತ್ತು ರೋಹನ್‌ಗೆ ಆಮಿಷ ಒಡ್ಡಲಾಗಿತ್ತು. 10 ಕೋಟಿಗೂ ಅಧಿಕ ಹಣ ಬೆಳಗಾವಿಯಲ್ಲಿದ್ದ ವಂಚಕರ ಖಾತೆಗೆ ಬಂದಿರುವ ಶಂಕೆಯಿದ್ದು ಮೂವರನ್ನೂ ಪೊಲೀಸರು ಬಂಧಿಸಿ ಚೆನ್ನೈಗೆ ಕರೆದೊಯ್ದಿದ್ದಾರೆ.
Three individuals have been arrested by Chennai police in Belagavi for providing fake bank accounts to cyber fraudsters. The accused allegedly facilitated fraudulent transactions running into crores by supplying fake documents to open bank accounts on behalf of cybercriminals.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm