ಟೆಲಿಗ್ರಾಮ್ ಆ್ಯಪ್‌ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆಸೆಗೆ ಬಿದ್ದ ಕಾರ್ಕಳದ ಯುವಕ ಕಳಕೊಂಡಿದ್ದು 15 ಲಕ್ಷ ! 

23-07-25 03:25 pm       Mangalore Correspondent   ಕ್ರೈಂ

ಆನ್ ಲೈನ್ ಮೂಲಕ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚು ಕಮಿಷನ್ ಪಡೆಯುವ ಆಮಿಷಕ್ಕೆ ಬಲಿಯಾದ ಕಾರ್ಕಳ ಮೂಲದ ಯುವಕ, ಮಂಗಳೂರಿನ ಸಸಿಹಿತ್ಲುವಿನಲ್ಲಿ ವಾಸವಿರುವ ಅಶ್ವಿತ್ (34) ಎಂಬವರು 15.5 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಮಂಗಳೂರು, ಜುಲೈ 23 : ಆನ್ ಲೈನ್ ಮೂಲಕ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚು ಕಮಿಷನ್ ಪಡೆಯುವ ಆಮಿಷಕ್ಕೆ ಬಲಿಯಾದ ಕಾರ್ಕಳ ಮೂಲದ ಯುವಕ, ಮಂಗಳೂರಿನ ಸಸಿಹಿತ್ಲುವಿನಲ್ಲಿ ವಾಸವಿರುವ ಅಶ್ವಿತ್ (34) ಎಂಬವರು 15.5 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಜ.28ರಂದು ಅಶ್ವಿತ್ ಅವರ ವಾಟ್ಸ್ ಆ್ಯಪ್‌ಗೆ ಮೀನಾ ಸಕ್ಸಾಲ್ ಎಂಬ ಹೆಸರಿನಲ್ಲಿ ಸಂದೇಶ ಬಂದಿತ್ತು. ಟೆಲಿಗ್ರಾಮ್ ಆ್ಯಪ್‌ನಲ್ಲಿ ಎಸ್-ಕಾಯಿನ್ ಇನ್ವೆಸ್ಟ್‌ಮೆಂಟ್ ಟಾಸ್ಕ್ ಗೆ ಸೇರುವಂತೆ ಸಂದೇಶದಲ್ಲಿ ತಿಳಿಸಲಾಗಿತ್ತು. ಅದರಂತೆ ಅಶ್ವಿತ್ ಅವರು ಈ ಆ್ಯಪ್‌ ಗೆ ಸೇರಿ ತಮ್ಮ ಖಾತೆಯ ವಿವರಗಳನ್ನು ಹಂಚಿಕೊಂಡಿದ್ದರು.

ಹೆಚ್ಚು ಹಣ ಹೂಡಿದರೆ ಇನ್ನೂ ಹೆಚ್ಚಿನ ಕಮಿಷನ್ ನೀಡುವುದಾಗಿ ವಂಚಕರು ಹೇಳಿದ್ದರು. ಇದನ್ನು ನಂಬಿದ ಅಶ್ವಿತ್ ಒಂದಷ್ಟು ಹಣ ಹೂಡಿಕೆ ಮಾಡಿದ್ದು ಆರಂಭದಲ್ಲಿ ಒಂದಷ್ಟು ಲಾಭಾಂಶ ಸಿಗುವಂತೆ ರುಚಿ ತೋರಿಸಿದ್ದರು. ಆಮೂಲಕ ಅಧಿಕ ಮೊತ್ತ ಹೂಡಿಕೆ ಮಾಡುವಂತೆ ಪ್ರೇರಣೆ ನೀಡಿದರು. ಮಹಾರಾಷ್ಟ್ರ ಬ್ಯಾಂಕ್ ನ ಮಂಗಳೂರು ಶಾಖೆಯಲ್ಲಿರುವ ತಮ್ಮ ಖಾತೆಯ ಮೂಲಕ ಜನವರಿಯಿಂದ ಜೂನ್ ವರೆಗೆ ಅಶ್ವಿತ್ ಹಂತ ಹಂತವಾಗಿ 15,52,650 ರೂ. ವರ್ಗಾಯಿಸಿದ್ದಾರೆ.

ವಂಚಕರು ಇನ್ನೂ ಹೆಚ್ಚಿನ ಹಣ ಹಾಕುವಂತೆ ಕೇಳಿದ್ದು ಅಶ್ವಿತ್ ನಿರಾಕರಿಸಿದ್ದರು. ಅಲ್ಲದೆ, ಈಗಾಗಲೇ ಹಾಕಿರುವ ಹಣವನ್ನು ಮರಳಿಸುವಂತೆ ಕೇಳಿದರು. ಆದರೆ ಹಾಕಿದ ಹಣ ಮರಳಿಸಲು ತೆರಿಗೆ ಪಾವತಿಸಬೇಕು ಎಂದು ಹೇಳಿದ್ದು ಆಬಳಿಕವಷ್ಟೇ ಹಣ ಹಿಂದಿರುಗಿಸುವುದಾಗಿ ತಿಳಿಸಿದ್ದರು. ತಾನು ಮೋಸ ಹೋಗಿರುವ ಕುರಿತು ಕಾರ್ಕಳ ನಗರ ಠಾಣೆಗೆ ಪೊಲೀಸ್ ದೂರು ನೀಡಿದ್ದಾರೆ.

Karkala Youth Loses ₹15.5 Lakh in Telegram Investment Scam Promising High Commissions