Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತು ಬೆಳೆದು ಪತ್ನಿಯನ್ನು ಇರಿದು ಕೊಂದ ಪತಿರಾಯ, ತೆಕ್ಕಾರಿನಲ್ಲಿ ಘಟನೆ, ಆರೋಪಿ ಅರೆಸ್ಟ್ 

17-07-25 02:30 pm       Mangalore Correspondent   ಕ್ರೈಂ

ಕೌಟುಂಬಿಕ ಜಗಳದಲ್ಲಿ ಪತಿಯೇ ತನ್ನ ಪತ್ನಿಯನ್ನು ಚೂರಿಯಿಂದ ಇರಿದು ಇರಿದು ಕೊಲೆ ಮಾಡಿದ ಘಟನೆ ಉಪ್ಪಿನಂಗಡಿ ಠಾಣೆ ವ್ಯಾಪ್ತಿಯ ತೆಕ್ಕಾರು ಗ್ರಾಮದ ಬಾಜಾರು ಎಂಬಲ್ಲಿ ನಡೆದಿದೆ.

ಪುತ್ತೂರು, ಜುಲೈ 17 : ಕೌಟುಂಬಿಕ ಜಗಳದಲ್ಲಿ ಪತಿಯೇ ತನ್ನ ಪತ್ನಿಯನ್ನು ಚೂರಿಯಿಂದ ಇರಿದು ಇರಿದು ಕೊಲೆ ಮಾಡಿದ ಘಟನೆ ಉಪ್ಪಿನಂಗಡಿ ಠಾಣೆ ವ್ಯಾಪ್ತಿಯ ತೆಕ್ಕಾರು ಗ್ರಾಮದ ಬಾಜಾರು ಎಂಬಲ್ಲಿ ನಡೆದಿದೆ.

ಝೀನತ್ (40) ಎಂಬ ಮಹಿಳೆ ಕೊಲೆಯಾದವರು. ಪತಿ ರಫೀಕ್ (47) ಮತ್ತು ಪತ್ನಿಯ ನಡುವೆ ಕೌಟುಂಬಿಕ ಕಲಹ ನಡೆಯುತ್ತಿದ್ದು ಕೆಲವು ತಿಂಗಳಿನಿಂದ ವೈಮನಸ್ಸು ಉಂಟಾಗಿತ್ತು. ಗುರುವಾರ ಬೆಳಗ್ಗೆ ದಂಪತಿ ಮಧ್ಯೆ ಜಗಳ ನಡೆದಿದ್ದು, ಈ ವೇಳೆ ರಫೀಕ್ ಪತ್ನಿ ಝೀನತ್ ಮೇಲೆ ಚೂರಿಯಿಂದ ಇರಿದಿದ್ದಾನೆ. 

ಕೂಡಲೇ ಸ್ಥಳೀಯರು ಮಹಿಳೆಯನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು ಅಷ್ಟರಲ್ಲಿ ಮೃತಪಟ್ಟಿದ್ದಾರೆ. ಪೊಲೀಸರು ಆರೋಪಿ ರಫೀಕ್ ನನ್ನು ಬಂಧಿಸಿದ್ದು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ರಫೀಕ್ ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಎರಡು ವರ್ಷಗಳ ಹಿಂದೆ ಊರಿಗೆ ಮರಳಿದ್ದ. ಈಗ ಕೂಲಿ ಕೆಲಸ ಮಾಡುತ್ತಿದ್ದು ಈ ನಡುವೆ ಪತ್ನಿಯೊಂದಿಗೆ ಜಗಳವಾಗಿತ್ತು.

A tragic incident of domestic violence turned fatal when a man allegedly stabbed his wife to death following a heated argument in Tekkaru village, within the Uppinangady police limits. The deceased has been identified as Zeenath (40). Her husband, Rafique (47), is said to have had ongoing marital disputes with her for the past several months.