Cyber Crime Tumkur, Facebook, Mangalore Police, ಫೇಸ್ಬುಕ್ ನಲ್ಲಿ ಕಮೆಂಟ್ ಹಾಕುತ್ತಿದ್ದವರನ್ನು ಸೈಬರ್ ಪೊಲೀಸ್ ಎಂದು ಯಾಮಾರಿಸಿ ಹಣ ಕೀಳುತ್ತಿದ್ದ ಹರಾಮಿ ; ತುಮಕೂರು ಯುವಕ ಮಂಗಳೂರು ಪೊಲೀಸ್ ಬಲೆಗೆ 

16-07-25 11:04 pm       Mangalore Correspondent   ಕ್ರೈಂ

ಫೇಸ್ ಬುಕ್ ಖಾತೆ, ಕನ್ನಡ ಮಾಡೆಲ್ಸ್ , ಟ್ರೋಲ್ ಮಾಸ್ಟರ್, ಟ್ರೋಲ್ ಬಸ್ಯಾ ಇತ್ಯಾದಿ ಪೇಜ್ ಗಳಲ್ಲಿ ಕಮೆಂಟ್ಸ್ ಹಾಕಿರುವ ವ್ಯಕ್ತಿಗಳಿಗೆ ಕರೆಮಾಡಿ ಸೈಬರ್ ಕ್ರೈಂ ಪೊಲೀಸ್ ಎಂದು ಪರಿಚಯಿಸಿ ಕೇಸು ಹಾಕುವುದಾಗಿ ಬೆದರಿಸಿ ಹಣ ಪೀಕಿಸುತ್ತಿದ್ದ ತುಮಕೂರು ಮೂಲದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ‌

ಮಂಗಳೂರು, ಜುಲೈ 16: ಫೇಸ್ ಬುಕ್ ಖಾತೆ, ಕನ್ನಡ ಮಾಡೆಲ್ಸ್ , ಟ್ರೋಲ್ ಮಾಸ್ಟರ್, ಟ್ರೋಲ್ ಬಸ್ಯಾ ಇತ್ಯಾದಿ ಪೇಜ್ ಗಳಲ್ಲಿ ಕಮೆಂಟ್ಸ್ ಹಾಕಿರುವ ವ್ಯಕ್ತಿಗಳಿಗೆ ಕರೆಮಾಡಿ ಸೈಬರ್ ಕ್ರೈಂ ಪೊಲೀಸ್ ಎಂದು ಪರಿಚಯಿಸಿ ಕೇಸು ಹಾಕುವುದಾಗಿ ಬೆದರಿಸಿ ಹಣ ಪೀಕಿಸುತ್ತಿದ್ದ ತುಮಕೂರು ಮೂಲದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ‌

ತುಮಕೂರು ಜಿಲ್ಲೆಯ ಬಾರ್ ಲೈನ್ ರಸ್ತೆ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಕೋತಿತೋಪು ನಿವಾಸಿ ಅರುಣ್ ಟಿ (27) ಬಂಧಿತ ಆರೋಪಿ.‌ ಈತನ ವಿರುದ್ಧ ಜುಲೈ 15 ರಂದು ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ: 37/2025 ಕಲಂ. 66 (ಸಿ) 66 (ಡಿ) ಐಟಿ ಕಾಯ್ದೆ ಹಾಗೂ ಕಲಂ 112,308(2), 318(4) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಾಗಿತ್ತು. ‌

ಸೈಬರ್ ಪೊಲೀಸ್ ಬೆಂಗಳೂರು,  ಸುಶೀಲ್ ಕುಮಾರ್ ಎಂದು ಹೇಳಿ ತನ್ನನ್ನು ಪರಿಚಯಿಸಿ ನಿಮ್ಮ ಮೇಲೆ ದೂರು ಬಂದಿದೆ, ನಿಮ್ಮನ್ನು ಅರೆಸ್ಟ್ ಮಾಡುತ್ತೇನೆ ಎಂದು ಹೆದರಿಸಿ ಸಾರ್ವಜನಿಕರಿಂದ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದ. ಮೇಲಿನ ಪ್ರಕರಣದಲ್ಲಿ ವ್ಯಕ್ತಿಯೊಬ್ಬರಿಗೆ ಹೆದರಿಸಿ ಒಟ್ಟು 1,23,000 ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. ಮೊಬೈಲ್ ಲೊಕೇಶನ್ ಆಧರಿಸಿ ಬೆನ್ನು ಬಿದ್ದು ಪೊಲೀಸರು ತುಮಕೂರಿನಲ್ಲಿ ಬಂಧನ ಮಾಡಿದ್ದಾರೆ.  ಆರೋಪಿತನ ಮೇಲೆ ಸೈಬರ್ ಪೋರ್ಟಲ್ ನಲ್ಲಿ ಒಟ್ಟು 11 ದೂರುಗಳು ದಾಖಲಾಗಿರುತ್ತವೆ.‌

A calculated cybercriminal from Tumakuru has been apprehended by Mangaluru Central Crime Police after allegedly impersonating a Bengaluru Cybercrime officer and extorting Rs 1.23?lac from Facebook users.The accused, Arun T (27), son of the late Timmaraju and resident near Chamundeshwari Temple, Bar Line Road, Kothitopu, registered at Mangaluru Central Crime Police Station on July 15