ಬ್ರೇಕಿಂಗ್ ನ್ಯೂಸ್
07-07-25 12:20 pm Mangalore Correspondent ಕ್ರೈಂ
ಪುತ್ತೂರು, ಜು.7 : ಪುತ್ತೂರ ತಾಲೂಕಿನ ಬಿರುಮಲೆಬೆಟ್ಟ ಎಂಬಲ್ಲಿ ಅಪ್ರಾಪ್ತ ಯುವಕ- ಯುವತಿ ಜೊತೆಗಿರುವುದನ್ನು ಕಂಡು ಅನ್ಯಧರ್ಮದ ಯುವಕನೆಂದು ಭ್ರಮಿಸಿ ಕಿಡಿಗೇಡಿಗಳು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದ್ದು ಅವರ ಫೋಟೋ ಹಾಗೂ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ನೀನು ಬ್ಯಾರಿಯಲ್ವಾ ಎಂದು ಹೇಳಿ ನಿಂದಿಸಿದ್ದು ಘಟನೆ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಅರುಣ್ ಮಾಹಿತಿ ನೀಡಿದ್ದು, ಜುಲೈ 5ರಂದು ಮಧ್ಯಾಹ್ನ ಬಿರುಮಲೆಗುಡ್ಡದಲ್ಲಿ ಹುಡುಗ - ಹುಡುಗಿ ಬೈಕ್ ನಲ್ಲಿ ಓಡಾಡುತ್ತಿದ್ದರು. ಇದೇ ಸಂದರ್ಭ ಇಬ್ಬರು ಅಪರಿಚಿತ ವ್ಯಕ್ತಿಗಳು ಜೋಡಿಗಳನ್ನ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ನಿಮ್ಮ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತೀವಿ ಎಂದು ಬೆದರಿಕೆವೊಡ್ಡಿ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೇ ನೀವು ಅನ್ಯಧರ್ಮದವನೆಂದು ನಿಂದಿಸಿ, ಸ್ಥಳದಲ್ಲಿದ್ದ ಇತರ ಸಾರ್ವಜನಿಕರನ್ನು ಕರೆದು ಅವಮಾನಿಸಿ ವಿಡಿಯೋ ಮಾಡಿದ್ದಾರೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಹುಡುಗನ ತಂದೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಪುತ್ತೂರು ನಗರ ಠಾಣೆ ಪೊಲೀಸರು ಕಡಬ ತಾಲೂಕಿನ ಕುದ್ಮಾರು ನಿವಾಸಿ ಪುರುಷೋತ್ತಮ (43) ಹಾಗೂ ಪುತ್ತೂರಿನ ಆರ್ಯಾಪು ನಿವಾಸಿ ರಾಮಚಂದ್ರ (38) ಎಂಬವರನ್ನು ವಶಕ್ಕೆ ಪಡೆದಿದ್ದಾರೆ.
ಬಿರುಮಲೆಗುಡ್ಡೆ ಪ್ರದೇಶಕ್ಕೆ ಕಾಲೇಜು ವಿದ್ಯಾರ್ಥಿಗಳು ಬರುವುದು, ಸುತ್ತಾಡುವುದು ಸಾಮಾನ್ಯ. ಅನ್ಯಧರ್ಮದ ಯುವಕರು ಹಿಂದು ಹುಡುಗಿಯರ ಜೊತೆಗೆ ಬರುತ್ತಾರೆಂಬ ಗುಮಾನಿಯಲ್ಲಿ ಈ ಹಿಂದೆಯೂ ನೈತಿಕ ಪೊಲೀಸರಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಸದ್ರಿ ಘಟನೆಯಲ್ಲಿ ಯುವಕ- ಯುವತಿ ಅಪ್ರಾಪ್ತರಾಗಿರುವುದರಿಂದ ಇವರ ವಿಡಿಯೋ ಜಾಲತಾಣದಲ್ಲಿ ಪ್ರಸಾರ ಮಾಡುವುದು ಕಾನೂನು ಬಾಹಿರ. ಹಾಗಾಗಿ, ನೈತಿಕ ಪೊಲೀಸ್ ಕೃತ್ಯದ ಜೊತೆಗೆ ವಿಡಿಯೋ ತೆಗೆದು ವೈರಲ್ ಮಾಡಿದ ಬಗ್ಗೆಯೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
‘Moral policing’ resurfaced in Dakshina Kannada with the incident of two persons allegedly waylaying two minors, a boy and a girl, insulting them in public and posting the video of the insult on social media in Puttur on Saturday.
09-07-26 02:56 pm
HK News Staffer
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಬೆಳಗಾವಿಯಲ್ಲಿ ಆರೆಸ್ಸೆಸ್ ಪ್ರತಿನಿಧಿ ಸಭೆ ; ಖಾಸಗಿ...
08-07-26 02:06 pm
ಗುಂಡ್ಲುಪೇಟೆ ಬಳಿಯ ಮಲ್ಲಯ್ಯನಪುರ ಗುಡ್ಡದಲ್ಲಿ ಅಪರೂಪ...
08-07-26 01:13 pm
ಮೈಸೂರಿನಲ್ಲಿ ಹುಲಿ ದಾಳಿ ; ಒಂದೂವರೆ ಗಂಟೆ ಮರ ಏರಿ...
07-07-26 09:02 pm
09-07-26 03:40 pm
HK News Staffer
18 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರ...
07-07-26 03:22 pm
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
ಅಟ್ಲಾಂಟಿಕ್ ಸಾಗರದಲ್ಲಿ 80 ವರ್ಷಗಳ ಹಿಂದೆ ಮುಳುಗಿದ್...
05-07-26 08:39 pm
08-07-26 11:04 pm
HK News Desk
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
ಕನ್ನಡದ ಸುದ್ದಿ ವಾಹಿನಿಗಳು ಮಲಯಾಳ ಮಾಧ್ಯಮ ನೋಡಿ ಕಲಿ...
08-07-26 06:53 pm
ಮಾಣಿ-ಸಂಪಾಜೆ ರಸ್ತೆ ದುರಸ್ತಿಗೆ ಕೇಂದ್ರದಿಂದ 49.22...
08-07-26 01:17 pm
ರಾಮ ಮಂದಿರ ದೇಣಿಗೆ ಲೂಟಿ ; ಹಿಂದೂ ಸಂಘಟನೆಗಳು ಯಾಕೆ...
07-07-26 11:13 pm
09-07-26 05:34 pm
HK News Staffer
ಯಲ್ಲಾಪುರ ಅರಬೈಲ್ ಘಾಟ್ನಲ್ಲಿ ಲಾರಿ-ಕ್ರೂಸರ್ ಮುಖಾಮ...
09-07-26 11:38 am
ಅಡುಗೆ ವಿಚಾರದಲ್ಲಿ ಹೆಂಡತಿಯೊಂದಿಗೆ ಜಗಳ ; ಅಡ್ಡ ಬಂದ...
07-07-26 08:07 pm
Konaje Police, Accused Escapes, Mangalore: ಪೋ...
07-07-26 03:50 pm
Mangalore Panambur Truck Block; ಪಣಂಬೂರಿನಲ್ಲಿ...
06-07-26 04:49 pm