Puttur, Pregnant, Arrest, Jagannivasa Rao: ಸಹಪಾಠಿ ಯುವತಿಗೆ ಮಗು ಕರುಣಿಸಿದ ಹುಡುಗ ಕಡೆಗೂ ಅರೆಸ್ಟ್ ; ಮೈಸೂರಿನಲ್ಲಿ ಯುವಕನ ಬಂಧಿಸಿದ ಪುತ್ತೂರು ಪೊಲೀಸರು

05-07-25 01:20 pm       Mangalore Correspondent   ಕ್ರೈಂ

ಸಹಪಾಠಿ ವಿದ್ಯಾರ್ಥಿನಿಯನ್ನು ಪ್ರೀತಿಸುವ ನೆಪದಲ್ಲಿ ದೈಹಿಕ ಸಂಪರ್ಕ ನಡೆಸಿ, ಗರ್ಭಿಣಿಯಾಗಿಸಿ ಆಕೆ ಮಗುವಿಗೆ ಜನ್ಮವಿತ್ತ ಪ್ರಕರಣದಲ್ಲಿ ಆರೋಪಿ ಯುವಕ ಕೃಷ್ಣ ರಾವ್ (21)ನನ್ನು ಕಡೆಗೂ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು, ಜುಲೈ 5 : ಸಹಪಾಠಿ ವಿದ್ಯಾರ್ಥಿನಿಯನ್ನು ಪ್ರೀತಿಸುವ ನೆಪದಲ್ಲಿ ದೈಹಿಕ ಸಂಪರ್ಕ ನಡೆಸಿ, ಗರ್ಭಿಣಿಯಾಗಿಸಿ ಆಕೆ ಮಗುವಿಗೆ ಜನ್ಮವಿತ್ತ ಪ್ರಕರಣದಲ್ಲಿ ಆರೋಪಿ ಯುವಕ ಕೃಷ್ಣ ರಾವ್ (21)ನನ್ನು ಕಡೆಗೂ ಪೊಲೀಸರು ಬಂಧಿಸಿದ್ದಾರೆ.

ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದಲ್ಲದೆ, ಆಕೆ ಮಗುವಿಗೆ ಜನ್ಮ ನೀಡುತ್ತಲೇ ವರಸೆ ಬದಲಿಸಿದ್ದ ಪುತ್ತೂರು ನಗರಸಭೆ ಸದಸ್ಯ, ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಪುತ್ರ ಕೃಷ್ಣ ಜೆ ರಾವ್, ಪೊಲೀಸರು ಎಫ್ಐಆರ್ ದಾಖಲಿಸಿದ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ. ಹೀಗಾಗಿ ಕಳೆದೊಂದು ವಾರದಿಂದ ಈ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಎರಡು ತಿಂಗಳ ಹಿಂದೆ ಯುವತಿ ಗರ್ಭಿಣಿಯಾಗಿರುವುದು ತಿಳಿಯುತ್ತಲೇ ಯುವಕನ ತಂದೆ, ತಾಯಿ ಪುತ್ತೂರು ಠಾಣೆಗೆ ಬಂದು ಯುವತಿಯನ್ನು ಪುತ್ರನಿಗೆ 21 ವರ್ಷ ಆದ ಕೂಡಲೇ ಮದುವೆ ಮಾಡಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಆದರೆ ಕೊನೆಯಲ್ಲಿ ಅದಕ್ಕೊಪ್ಪದೆ ವಂಚನೆ ಎಸಗಿರುವ ಬಗ್ಗೆ ವಾರದ ಹಿಂದೆ ಪೊಲೀಸರಿಗೆ ದೂರು ನೀಡಲಾಗಿತ್ತು.

ಬಿಜೆಪಿ ಮುಖಂಡನ ಪುತ್ರನಿಂದ ಹಿಂದು ಯುವತಿಗೆ ವಂಚನೆ ಎಂದು ಭಾರೀ ಸುದ್ದಿಯಾಗಿತ್ತು. ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದರೂ, ಪುತ್ತೂರು ಶಾಸಕ ಅಶೋಕ್ ರೈ ಸೂಚನೆಯಂತೆ ಮದುವೆಯಾಗುವ ಭರವಸೆ ಹಿನ್ನೆಲೆಯಲ್ಲಿ ದೂರು ಹಿಂಪಡೆಯಲಾಗಿತ್ತು. ಆನಂತರ, ಹಿಂದು ಸಂಘಟನೆಗಳ ಕಡೆಯಿಂದ ಯುವತಿ ಕುಟುಂಬಕ್ಕೆ ಹತ್ತು ಲಕ್ಷ ರೂ. ಆಫರ್ ಮಾಡಿಸಿದ ಆರೋಪವೂ ಕೇಳಿಬಂದಿತ್ತು. ವಿಷಯ ಶಾಸಕರ ಬುಡಕ್ಕೆ ಬರುತ್ತಿದ್ದಂತೆ, ಕೂಡಲೇ ಆರೋಪಿಯನ್ನು ಅರೆಸ್ಟ್ ಮಾಡುವಂತೆ ಪೊಲೀಸರಿಗೆ ಒತ್ತಾಯ ಮಾಡಿದ್ದರು. ಇದರಂತೆ, ಪೊಲೀಸರು ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಮತ್ತು ಅವರ ಪತ್ನಿಯನ್ನೂ ಠಾಣೆಗೆ ಕರೆಸಿ ಇರಿಸಿಕೊಂಡಿದ್ದರು. ಇದೀಗ ಆರೋಪಿ ಪುತ್ರನನ್ನು ಮೈಸೂರಿನ ಟಿ ನರಸೀಪುರದಲ್ಲಿ ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದು, ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಇದೇ ವೇಳೆ, ಕಾಂಗ್ರೆಸ್ ನಾಯಕರು ಯುವತಿ ಪರವಾಗಿ ನಿಂತಿದ್ದಲ್ಲದೆ, ಆಕೆಯನ್ನು ಅದೇ ಯುವಕನೊಂದಿಗೆ ಮದುವೆ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿಯವರು ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

In a sensational case that stirred public outrage in Dakshina Kannada district, Puttur police have arrested a 21-year-old youth, Krishna J. Rao, for allegedly cheating and impregnating his classmate under the false promise of marriage. The arrest took place in T. Narasipura, Mysuru. Krishna Rao, son of Puttur City Municipal Councillor and BJP leader Jagannivasa Rao, had reportedly developed a physical relationship with his classmate after assuring her of marriage. The victim eventually gave birth to a child, after which the accused allegedly began to avoid taking responsibility and marrying her.