ಬ್ರೇಕಿಂಗ್ ನ್ಯೂಸ್
02-07-25 12:24 pm Mangalore Correspondent ಕ್ರೈಂ
ಮಂಗಳೂರು, ಜುಲೈ 2 : ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಲಂಚಾವತಾರ ಹೆಚ್ಚಿದ್ದರಿಂದ ಇತ್ತೀಚೆಗೆ ಲೋಕಾಯುಕ್ತ ದಾಳಿ ಮಾಡಿ ಪರಿಶೀಲನೆ ನಡೆಸಿತ್ತು. ಈ ವೇಳೆ, ಹಲವಾರು ವಹಿವಾಟು ಸರಿಯಾಗಿಲ್ಲದಿರುವುದು, ಏಜಂಟರು ಲಕ್ಷಾಂತರ ನಗದು ಹಣ ಹಿಡಿದುಕೊಂಡು ಪಾಲಿಕೆಗೆ ಬಂದಿರುವುದು ಪತ್ತೆಯಾಗಿತ್ತು. ಆಮೂಲಕ ಪಾಲಿಕೆಯ ಭ್ರಷ್ಟ ವ್ಯವಸ್ಥೆಯ ಮುಖ ಅನಾವರಣಗೊಂಡಿದ್ದರೆ, ಇದೀಗ ಪಾಲಿಕೆಯ ಪ್ರಮುಖ ಆದಾಯವಾಗಿರುವ ಉದ್ಯಮ ಪರವಾನಗಿ ಇನ್ನಿತರ ಪ್ರಮುಖ ತೆರಿಗೆ ನೋಂದಣಿಯಲ್ಲೂ ಭಾರೀ ವಂಚನೆ ಎಸಗುತ್ತಿದ್ದು ಆಮೂಲಕ ಪಾಲಿಕೆ ಬೊಕ್ಕಸಕ್ಕೆ ಕನ್ನ ಹಾಕಿರುವುದು ಬೆಳಕಿಗೆ ಬಂದಿದೆ.
ಮಂಗಳೂರು ನಗರದಲ್ಲಿ ಕೆಲವು ಉದ್ದಿಮೆ ಪರವಾನಗಿ ಮತ್ತು ಆಸ್ತಿ ತೆರಿಗೆಯ ನೋಂದಣಿ ನವೀಕರಣ ಹೆಸರಲ್ಲಿ ಏಜಂಟರು ಕಾರ್ಯ ನಿರ್ವಹಿಸುತ್ತಿದ್ದು, ಇವರು ನಕಲಿ ರಶೀದಿ ತಯಾರಿಸಿ ಪಾಲಿಕೆಗೆ ತೆರಿಗೆಯ ಹಣವನ್ನು ಕಟ್ಟದೆ ವಂಚನೆ ಎಸಗುತ್ತಿರುವುದು ಬಯಲಾಗಿದ್ದು, ಈ ಬಗ್ಗೆ ಸಂತ್ರಸ್ತರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದೇ ವೇಳೆ, ಪಾಲಿಕೆಯ ಹೆಸರಲ್ಲಿ ಉದ್ದಿಮೆ ಪರವಾನಗಿ ನವೀಕರಣದ ಬಗ್ಗೆ ನಕಲಿ ಸರ್ಟಿಫಿಕೇಟನ್ನು ನೀಡುತ್ತಿರುವುದು ಪತ್ತೆಯಾಗಿದೆ.
ವ್ಯಾಪಾರಿಗಳು ತಮ್ಮ ಬಿಝಿ ಮಧ್ಯೆ ಪಾಲಿಕೆಗೆ ತೆರಳಿ ಲೈಸನ್ಸ್ ನವೀಕರಣ ಇತ್ಯಾದಿ ಮಾಡುವುದಕ್ಕೆ ಸಮಯ ಸಾಲುವುದಿಲ್ಲ ಎಂದು ಏಜಂಟರಲ್ಲೇ ಹಣ ಕೊಟ್ಟು ತೆರಿಗೆ ಪಾವತಿಸಲು ಹೇಳುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಏಜಂಟರು ಪಾಲಿಕೆ ಹೆಸರಲ್ಲಿ ನಕಲಿ ರಶೀದಿ ಮತ್ತು ನಕಲಿ ಲೈಸನ್ಸ್ ಅನ್ನು ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಸೃಷ್ಟಿಸಿಕೊಂಡಿದ್ದು, ವ್ಯಾಪಾರಸ್ಥರಲ್ಲಿ ಸಾವಿರಾರು ರೂಪಾಯಿ ಹಣ ಪಡೆದು ನಕಲಿ ರಶೀದಿ ನೀಡಿ ಪಾಲಿಕೆಯ ಬೊಕ್ಕಸಕ್ಕೆ ಭಾರೀ ಕನ್ನ ಹಾಕಿದ್ದಾರೆ. ಸರಕಾರದ ಹೆಸರಲ್ಲಿ ಎಸಗಿರುವ ಭಾರೀ ದೊಡ್ಡ ಭ್ರಷ್ಟಾಚಾರ ಮತ್ತು ವಂಚನೆ ಪ್ರಕರಣ ಇದಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಯಾದರೆ ಅಧಿಕಾರಿಗಳ ಸಹಿತ ಪಾಲಿಕೆಯಲ್ಲಿ ತೂರಿಕೊಂಡಿರುವ ಬ್ರೋಕರ್, ದಲ್ಲಾಳಿಗಳು ಜೈಲು ಪಾಲಾಗಲಿದ್ದಾರೆ.
ಮಹಾನಗರ ಪಾಲಿಕೆಗೆ ವರ್ಷಕ್ಕೆ ಸುಮಾರು 30 ಸಾವಿರ ರೂ. ತೆರಿಗೆ ಪಾವತಿಸುತ್ತಿದ್ದ ಪಡೀಲಿನ ವ್ಯಾಪಾರಸ್ಥರೊಬ್ಬರು ವಕೀಲರ ಸಲಹೆಯಂತೆ 15 ವರ್ಷ ತೆರಿಗೆ ಕಟ್ಟಿದ ದಾಖಲೆ ಪಡೆಯಲು ಮಹಾನಗರ ಪಾಲಿಕೆಗೆ ಬಂದಾಗ, ವಂಚನೆ ಪುರಾಣ ಬಯಲಾಗಿದೆ. ಹಲವಾರು ವರ್ಷಗಳಿಂದ ಇವರ ತೆರಿಗೆಯನ್ನೇ ಕಟ್ಟಿಲ್ಲ ಎನ್ನುವುದು ತಿಳಿದುಬರುತ್ತಿದ್ದಂತೆ, ಉದ್ಯಮಿ ಏಜಂಟನನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ತನ್ನಲ್ಲಿರುವ ರಶೀದಿಯನ್ನು ಪಾಲಿಕೆಯ ಅಧಿಕಾರಿಗಳಿಗೆ ತೋರಿಸಿದ್ದಾರೆ. ಆದರೆ ಆ ಸರ್ಟಿಫಿಕೇಟ್ ನಕಲಿ ಎನ್ನುವುದನ್ನು ಅಧಿಕಾರಿಗಳು ಹೇಳುತ್ತಿದ್ದು, ಉದ್ಯಮಿ ಪೆಚ್ಚಾಗಿದ್ದಾರೆ. ಈ ರೀತಿ ಏಜಂಟರನ್ನು ನಂಬಿ ಹಲವಾರು ಉದ್ಯಮಿಗಳು ವಂಚನೆಗೆ ಒಳಗಾಗಿದ್ದು ಇವರು ಪಾಲಿಕೆಯ ಕಮಿಷನರ್ ರವಿಚಂದ್ರ ನಾಯಕ್ ಬಳಿ ತೆರಳಿ ದೂರು ನೀಡಿದ್ದಾರೆ. ಈ ವೇಳೆ, ನೀವೇ ವಂಚನೆ ಮಾಡಿದವರು, ನಿಮ್ಮ ಮೇಲೆ ಪೊಲೀಸರಿಗೆ ದೂರು ನೀಡಿ ಬಂಧಿಸಲು ಹೇಳುತ್ತೇನೆ ಎಂದು ಕಮಿಷನರ್ ಬೇಜವಾಬ್ದಾರಿ ತೋರಿದ್ದಾರೆಂದು ಸಂತ್ರಸ್ತರು ಹೇಳಿಕೊಂಡಿದ್ದಾರೆ.
ಸಂತ್ರಸ್ತ ವ್ಯಾಪಾರಿಯೊಬ್ಬರು ತೆರಿಗೆ ವಂಚನಾ ಜಾಲದ ಬಗ್ಗೆ ಬರ್ಕೆ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಇದೇ ವೇಳೆ, ಪಾಲಿಕೆಯ ಕಡೆಯಿಂದಲೂ ತಪ್ಪೆಸಗಿದ ಬ್ರೋಕರುಗಳ ವಿರುದ್ಧ ಕ್ರಮ ಜರುಗಿಸಲು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಈ ಬಗ್ಗೆ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತೆ ಅಕ್ಷತಾ, ದಲ್ಲಾಳಿಗಳಿಂದ ವಂಚನೆ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ. ಉದ್ಯಮ ಪರವಾನಗಿ ಮತ್ತು ಆಸ್ತಿ ತೆರಿಗೆಯ ನೋಂದಣಿಯನ್ನು ಕೆಲವರು ಮಧ್ಯವರ್ತಿಗಳ ಮೂಲಕ ಮಾಡಿಸಿದ್ದು, ವಂಚನೆ ಆಗಿರುವುದು ಕಂಡುಬಂದಿದೆ. ಕಚೇರಿ ದಾಖಲೆ ಪರಿಶೀಲಿಸಿದಾಗ ನಕಲಿ ದಾಖಲೆ ಸೃಷ್ಟಿಸಿ ವಂಚಿಸಿರುವುದು ಪತ್ತೆಯಾಗಿದೆ. ಪಾಲಿಕೆಯ ಕಮಿಷನರ್ ಗಮನಕ್ಕೆ ತರಲಾಗಿದ್ದು, ಪೊಲೀಸ್ ದೂರು ನೀಡಲಾಗುವುದು ಎಂದಿದ್ದಾರೆ.
A shocking case of large-scale corruption and fraud has emerged from the Mangaluru City Corporation (MCC), where unauthorized agents have allegedly created fake tax receipts and business licenses, causing massive financial losses to the civic body. Recently, the Lokayukta conducted a raid on MCC following several complaints of corruption. During the probe, numerous irregularities were uncovered, including agents entering the corporation office with lakhs of rupees in cash. This incident exposed the rot within the system.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm