ಬ್ರೇಕಿಂಗ್ ನ್ಯೂಸ್
26-06-25 02:54 pm HK News Desk ಕ್ರೈಂ
ಮುಂಬೈ, ಜೂನ್ 26 : ದೇಶದ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಯಾಗಿರುವ ಐಐಟಿ ಮುಂಬೈನಲ್ಲಿ ಸಂಶಯಾಸ್ಪದವಾಗಿ ತಿರುಗಾಡಿಕೊಂಡಿದ್ದ ಮಂಗಳೂರು ಮೂಲದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿಲಾಲ್ ಅಹ್ಮದ್ ಫಯಾಜ್ ತೇಲಿ (22) ಬಂಧನಕ್ಕೀಡಾದ ಯುವಕ. ಪಿಯುಸಿ ಕಲಿತಿರುವ ಫಯಾಜ್ ತೇಲಿ ಆನಂತರ ಕಂಪ್ಯೂಟರ್ ಸಾಫ್ಟ್‌ವೇರ್ ಬಗ್ಗೆ ಆರು ತಿಂಗಳ ಕೋರ್ಸ್ ಮಾಡಿದ್ದ. ಜೂನ್ 3ರಿಂದ 7 ಮತ್ತು ಜೂನ್10ರಿಂದ 17ರ ನಡುವೆ ಎರಡು ಬಾರಿ ಐಐಟಿ ವಿದ್ಯಾರ್ಥಿಯೆಂದು ಪೋಸು ಕೊಟ್ಟು ಮುಂಬೈ ಐಐಟಿ ಕ್ಯಾಂಪಸ್ ಒಳಗಡೆಯ ಹಾಸ್ಟೆಲ್ ನಲ್ಲಿ ಅಕ್ರಮವಾಗಿ ವಾಸವಿದ್ದ. ಜೂನ್ 17ರಂದು ಈತನ ಸಂಶಯಾಸ್ಪದ ವರ್ತನೆಯಿಂದಾಗಿ ಸಿಬಂದಿ ಐಡಿ ಕೇಳಿದಾಗ, ಆತನ ಬಳಿ ಇರಲಿಲ್ಲ. ವಿಚಾರಣೆ ಸಂದರ್ಭದಲ್ಲಿ ಅಲ್ಲಿಯ ವಿದ್ಯಾರ್ಥಿ ಅಲ್ಲ ಎಂದು ತಿಳಿದು ಸಿಬಂದಿ ಪೊಲೀಸರಿಗೆ ಒಪ್ಪಿಸಿದ್ದರು.
ಪೊವಾಯಿ ಠಾಣೆಯ ಪೊಲೀಸರು ತೇಲಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಮೊಬೈಲ್ ಜಪ್ತಿ ಮಾಡಿದಾಗ, ಐಐಟಿ ಕ್ಯಾಂಪಸ್ ಒಳಗಡೆಯ ವಿಡಿಯೋ ಮಾಡಿರುವುದು ಪತ್ತೆಯಾಗಿದೆ. ಪೊಲೀಸರು ಕೋರ್ಟಿಗೆ ಹಾಜರುಪಡಿಸಿ 14 ದಿನ ಕಸ್ಟಡಿ ಪಡೆದಿದ್ದಾರೆ. ವಿಡಿಯೋ ಬಗ್ಗೆ ಪ್ರಶ್ನಿಸಿದಾಗ, ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಸಲುವಾಗಿ ತೆಗೆದಿದ್ದೆ ಎಂದು ಹೇಳಿದ್ದ. ಮೊಬೈಲ್ ಪರಿಶೀಲನೆ ವೇಳೆ ಪ್ರತ್ಯೇಕ 21 ಜಿ ಮೇಲ್ ಐಡಿಗಳನ್ನು ಹೊಂದಿರುವುದು ಮತ್ತು ಬೇರೆ ಬೇರೆ ರೀತಿಯ ಆಡಿಯೋ ಸಂವಹನದ ಅಪ್ಲಿಕೇಶನ್ ಬಳಸಿರುವುದು ಪತ್ತೆಯಾಗಿದೆ. ಆದರೆ ಮೊಬೈಲಿನಲ್ಲಿ ಬೇರಾವುದೇ ಸಂಶಯಾಸ್ಪದ ವಿಚಾರಗಳು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯಕ್ಕೆ ಪ್ರಕರಣವನ್ನು ಮುಂಬೈ ಕ್ರೈಮ್ ಬ್ರಾಂಚ್ ತನಿಖೆಗೆ ಹಸ್ತಾಂತರ ಮಾಡಿದ್ದು ಆತನ ಉದ್ದೇಶ ಏನಾಗಿತ್ತು, ಯಾಕಾಗಿ ಐಟಿ ಕ್ಯಾಂಪಸ್ ಒಳಗಡೆ ಹೋಗಿದ್ದ, ಭದ್ರತೆಗೆ ಬೆದರಿಕೆ ಆಗಬಲ್ಲ ಶಂಕಾಸ್ಪದ ನಡೆ ಇದೆಯೇ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದೇ ವೇಳೆ, ಎಟಿಎಸ್ ತಂಡವು ಭಯೋತ್ಪಾದಕರ ಲಿಂಕ್ ಬಗ್ಗೆಯೂ ತನಿಖೆ ನಡೆಸುತ್ತಿದೆ. ತನಿಖೆ ಸಂದರ್ಭದಲ್ಲಿ ಒಂದು ವರ್ಷದ ಹಿಂದೆಯೂ ಮುಂಬೈ ಐಐಟಿ ಕ್ಯಾಂಪಸ್ ಭೇಟಿ ನೀಡಿರುವುದಾಗಿ ಹೇಳಿದ್ದು ಆಗ ಒಂದು ತಿಂಗಳ ಕಾಲ ಉಳಿದುಕೊಂಡಿದ್ದಾಗಿ ತಿಳಿಸಿದ್ದ. ಹೀಗಾಗಿ ಮುಂಬೈ ಐಐಟಿ ಸಂಸ್ಥೆಯ ಭದ್ರತೆ ಬಗ್ಗೆ ಆತಂಕ ಮೂಡಿಸಿದೆ.
ಐಐಟಿ ಕ್ಯಾಂಪಸ್ ಒಳಗಡೆ ಅಕ್ರಮ ಪ್ರವೇಶ ಮಾಡಿರುವ ಬಗ್ಗೆ ಸಂಸ್ಥೆಯ ವಿಜಿಲೆನ್ಸ್ ವಿಭಾಗದ ಅಧಿಕಾರಿ ರಾಹುಲ್ ದತ್ತಾರಾಮ್ ಪಾಟೀಲ್ ಪೊವಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ, ನಾವು ಮೊದಲ ಬಾರಿಗೆ ಜೂನ್ 4ರಂದು ಈತನನ್ನು ಕ್ಯಾಂಪಸ್ ಒಳಗಡೆ ನೋಡಿದ್ದೆವು. ಕ್ರೆಡಿಟ್ ಡಿಪಾರ್ಟ್ಮೆಂಟ್ ಒಳಗಡೆ ಬಂದಿದ್ದನ್ನು ಅಲ್ಲಿಯ ಸಿಬಂದಿ ಪ್ರಶ್ನೆ ಮಾಡಿದ್ದರು. ಈ ವೇಳೆ, ಸಿಬಂದಿ ಐಡಿ ಕೇಳಿದಾಗ ಅಲ್ಲಿಂದ ತಪ್ಪಿಸಿಕೊಂಡಿದ್ದ. ಆನಂತರ, ಸಿಸಿಟಿವಿ ಚೆಕ್ ಮಾಡಿ ಆತನ ಗುರುತು ಪತ್ತೆ ಮಾಡಲು ಯತ್ನಿಸಲಾಗಿತ್ತು. ಮತ್ತೆ ಆ ವ್ಯಕ್ತಿ ಸಿಕ್ಕಿರಲಿಲ್ಲ. ಜೂನ್ 17ರಂದು ಹಿಂದೆ ನೋಡಿದ್ದ ಸಿಬಂದಿಯೇ ಮತ್ತೆ ಈ ಯುವಕನನ್ನು ನೋಡಿ ವಿಜಿಲೆನ್ಸ್ ವಿಭಾಗದ ಗಮನಕ್ಕೆ ತಂದಿದ್ದರು. ಅಂದು ವಿದ್ಯಾರ್ಥಿಗಳ ಲೆಕ್ಚರ್ ಹಾಲ್ ನಲ್ಲಿ ಇದ್ದ. ನಮ್ಮ ಸಿಬಂದಿ ಕೂಡಲೇ ಸ್ಥಳಕ್ಕೆ ತೆರಳಿದ್ದು ವಶಕ್ಕೆ ಪಡೆದಿದ್ದೆವು ಎಂದು ತಿಳಿಸಿದ್ದಾರೆ.
A youth from Mangaluru has been detained for illegally residing within the prestigious Indian Institute of Technology (IIT) Bombay campus. The incident has raised serious security concerns. The accused has been identified as Bilal Ahmad Fayaz Theli (22), who had completed his PUC and later pursued a six-month course in computer software.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm