ಬ್ರೇಕಿಂಗ್ ನ್ಯೂಸ್
24-06-25 09:51 pm HK News Desk ಕ್ರೈಂ
ಮಧ್ಯಪ್ರದೇಶ, ಜೂ 24 : ಸಾಮಾನ್ಯವಾಗಿ ಸಾಲ ತೆಗೆದುಕೊಂಡ ಮೇಲೆ ಸಾಲ ತೀರಿಸಲು ಕಷ್ಟವಾದಾಗ ಜನರು ಊರು ಬಿಟ್ಟು ಹೋಗುತ್ತಾರೆ, ಇಲ್ಲವೇ ಪುನಃ ಅಲ್ಲಿ ಇಲ್ಲಿ ಸಾಲ ಮಾಡಿ ಹಳೆಯ ಸಾಲವನ್ನು ತೀರಿಸುತ್ತಾರೆ. ಆದರೆ ಇಲ್ಲೊಬ್ಬ ಪಾಪಿ ಗಂಡ, ಕೇವಲ 50 ಸಾವಿರ ಸಾಲಕ್ಕೆ ತನ್ನ ಹೆಂಡತಿಯನ್ನೇ ಸ್ನೇಹಿತನಿಗೆ ಮಾರುವ ಮೂಲಕ ಹೇಯ ಕೃತ್ಯವೆಸಗಿದ್ದಾನೆ.
ಮಧ್ಯಪ್ರದೇಶದ ಧಾರ್ ಜಿಲ್ಲೆಯ ಕನ್ವಾನ್ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆಯು ಬೆಳಕಿಗೆ ಬಂದಿದೆ. ಅದರಂತೆ, 50,000 ರೂಪಾಯಿಗಳ ಸಾಲವನ್ನು ತೀರಿಸಲು ತನ್ನ ಹೆಂಡತಿಯನ್ನು ತನ್ನ ಸ್ನೇಹಿತನಿಗೆ ಮಾರಾಟ ಮಾಡಿದ ಆರೋಪದ ಅಡಿಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಸ್ನೇಹಿತನು ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಹಾಗಾಗಿ, ಈ ಘಟನೆಯು ಸಮಾಜದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸರ ಪ್ರಕಾರ, ಮಹಿಳೆಯು ಇಂದೋರ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ತನ್ನ ಗಂಡ ಮತ್ತು ಅವನ ಸ್ನೇಹಿತನ ವಿರುದ್ಧ ದೂರು ದಾಖಲಿಸಿದ್ದಾಳೆ. ಇನ್ನು ಆ ದೂರಿನ ಆಧಾರದ ಮೇಲೆ ಜೂನ್ 23, 2025 ರಂದು ಎಫ್‌ಐಆರ್ ದಾಖಲಿಸಲಾಗಿದ್ದು, ನಂತರ ಇದನ್ನು ಧಾರ್ ಜಿಲ್ಲೆಯ ಕನ್ವಾನ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ತದನಂತರ ಆಕೆಯ ಗಂಡ ಜೋಗೇಂದ್ರ ಠಾಕೂರ್‌ನನ್ನು ಜೂನ್ 23, 2025 ರಂದು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿ ಅಂದ್ರೆ ಗಂಡನ ಸ್ನೇಹಿತ ಅಭಿಮನ್ಯು ಠಾಕೂರ್ ಪರಾರಿಯಾಗಿದ್ದಾನೆ.
ಸ್ನೇಹಿತನಿಂದ 8 ಲಕ್ಷ ರೂ. ಸಾಲ;
ಇನ್ನು ಗಂಡನ ಸ್ನೇಹಿತ ಅಭಿಮನ್ಯು ದೆಹಲಿಯಲ್ಲಿ ಸಾಲ ನೀಡಿವ ಕಂಪನಿಯನ್ನ ನಡೆಸುತ್ತಿದ್ದ ಎನ್ನಲಾಗಿದೆ. ಹಾಗಾಗಿ, ಪೊಲೀಸರು ಅವನನ್ನು ಹಿಡಿಯಲು ದೆಹಲಿಗೆ ತಂಡವನ್ನು ಕಳುಹಿಸಿದ್ದಾರೆ. ಇನ್ನು ಈ ಇಬ್ಬರು ಆರೋಪಿಗಳು ಬಾಲ್ಯದ ಸ್ನೇಹಿತರಾಗಿದ್ದು, ಕಳೆದ ಕೆಲವು ವರ್ಷಗಳಿಂದ ಆರ್ಥಿಕ ವ್ಯವಹಾರಗಳಲ್ಲಿ ತೊಡಗಿದ್ದರು. ಅದರಂತೆ, ಜೋಗೇಂದ್ರ, ಅಭಿಮನ್ಯುಗೆ ಸುಮಾರು 8 ಲಕ್ಷ ರೂ. ಸಾಲವನ್ನು ತೀರಿಸಬೇಕಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ನನ್ನ ಗಂಡನಿಗೆ ಜೂಜಾಡುವ ಚಟ ಹೊಂದಿದ್ದಾನೆ. ಈ ಚಟದಿಂದಾಗಿ ಸಾಲದ ಪ್ರಮಾಣವು ದಿನೇ ದಿನೇ ಹೆಚ್ಚಾಗುತ್ತಿತ್ತು. ಕೊನೆಗೆ ಸಾಲವನ್ನು ತೀರಿಸಲು ಸಾಧ್ಯವಾಗದಿದ್ದಾಗ, ತನ್ನ ಸ್ನೇಹಿತನೊಂದಿಗೆ ಒಪ್ಪಂದ ಮಾಡಿಕೊಂಡು, ತನ್ನ ಹೆಂಡತಿಯನ್ನು ದೈಹಿಕ ಸಂಬಂಧಕ್ಕೆ ಒಡ್ಡಿದನು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ.
A disturbing case has surfaced from Kanwan in Madhya Pradesh’s Dhar district, where a man allegedly offered his wife to a friend to settle a financial debt. The shocking incident has sparked widespread outrage and has prompted a police investigation.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm