ಬ್ರೇಕಿಂಗ್ ನ್ಯೂಸ್
22-12-20 05:30 pm Headline Karnataka News Network ಕ್ರೈಂ
ಮುಂಬೈ, ಡಿ.22: ಬಸ್ ಚಾಲಕನೊಬ್ಬ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕತ್ತು ಹಿಸುಕಿ ಗೋಣಿಚೀಲದಲ್ಲಿ ತುಂಬಿಸಿ ಎಸೆದುಹೋದ ಘಟನೆ ಮುಂಬೈ- ಅಹ್ಮದಾಬಾದ್ ಹೆದ್ದಾರಿಯ ವಾಲೀವ್ ಎಂಬಲ್ಲಿ ನಡೆದಿದೆ.
ಭಯಂದರ್ ಭೋಲಾರಂ ಕೊಳೆಗೇರಿ ಬಳಿ ನಿಲ್ಲಿಸಿದ್ದ ಬಸ್ಸಿನಲ್ಲಿ ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ, ಚಾಲಕ ಆಗಮಿಸಿದಾಗ ಮಕ್ಕಳು ಗಬಕ್ಕನೆ ಬಸ್ಸಿನಿಂದ ಹೊರಕ್ಕೆ ಹಾರಿ ತಪ್ಪಿಸಿಕೊಂಡಿದ್ದಾರೆ. ಆದರೆ, ಒಬ್ಬಳು ಬಾಲಕಿಗೆ ಬಸ್ಸಿನಿಂದ ಇಳಿಯಲು ಸಾಧ್ಯವಾಗದೆ ಅದರಲ್ಲೇ ಉಳಿದುಕೊಂಡಿದ್ದಳು. ಬಸ್ ಚಾಲನೆಗೊಂಡು ಮುಂದೆ ಸಾಗಿದಾಗ, ಮಗು ಚೀರಾಡಿದೆ. ಆದರೆ, ಚಾಲಕ ಬಸ್ಸನ್ನು ನಿಲ್ಲಿಸದೆ ಮುಂದೆ ಹೋಗಿದ್ದು, ನಿರ್ಜನ ಪ್ರದೇಶಕ್ಕೆ ಒಯ್ದು ಅತ್ಯಾಚಾರ ಎಸಗಿದ್ದಾನೆ. ಈ ಸಂದರ್ಭ ಮಗು ಪ್ರಜ್ಞೆ ತಪ್ಪಿದ್ದು, ಮೃತಪಟ್ಟಿದ್ದಾಗಿ ತಿಳಿದು ಗೋಣಿಚೀಲದಲ್ಲಿ ಕಟ್ಟಿ ಹೊರಕ್ಕೆ ಎಸೆದು ಹೋಗಿದ್ದಾನೆ.
ಆದರೆ, ಗೋಣಿಚೀಲದಲ್ಲಿದ್ದ ಬಾಲಕಿಗೆ ಪ್ರಜ್ಞೆ ಬಂದು ಅಲ್ಲಾಡುವುದನ್ನು ತಿಳಿದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದರು. ಬಾಲಕಿ ಅರೆ ಪ್ರಜ್ಞಾವಸ್ಥ ಸ್ಥಿತಿಯಲ್ಲಿರುವುದನ್ನು ತಿಳಿದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೇ ವೇಳೆ, ತನ್ನ ಮಗು ನಾಪತ್ತೆಯಾಗಿರುವ ಬಗ್ಗೆ ಆಕೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದಾಗ, ಮಗುವಿಗೆ ಅತ್ಯಾಚಾರ ಆಗಿರುವುದು ಕಂಡುಬಂದಿದೆ. ಸಿಸಿಟಿವಿ ಆಧರಿಸಿ ಬಸ್ ಚಾಲಕನನ್ನು ಬಂಧಿಸಿ, ಪೋಕ್ಸೋ ಕೇಸು ದಾಖಲಿಸಿದ್ದಾರೆ.
A luxury bus driver allegedly raped a 4-year-old girl, stuffed her inside a gunny bag and threw her near a petrol pump. The gunny bag stuffed with the girl was found near Waliv on Mumbai-Ahmedabad Highway. The girl was playing inside the bus when the accused abducted her.
09-08-25 08:00 pm
HK Staff
ಎರಡು ವಂದೇ ಭಾರತ್, ಮೆಟ್ರೋ ಯಲ್ಲೋ ಲೈನ್ ಅನಾವರಣಕ್ಕೆ...
09-08-25 07:28 pm
Siddaramaiah,Ibrahim: ಸಿದ್ದರಾಮಯ್ಯ ಎರಡು ಬಾರಿ ಮ...
09-08-25 03:32 pm
Fraud Case, Dhruva Sarja, Mumbai: ಆಕ್ಷನ್ ಪ್ರಿ...
09-08-25 01:40 pm
ನೂರಾರು ಕೊಲೆ ಮಾಡಿಸಲು ಧರ್ಮಸ್ಥಳದ ಧರ್ಮಾಧಿಕಾರಿ ದಾವ...
08-08-25 06:23 pm
09-08-25 07:38 pm
HK Staff
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
09-08-25 08:10 pm
Mangalore Correspondent
Father Muller Medical College, Hospital, Mang...
09-08-25 04:22 pm
Dharmasthala,16th Spot at Bahubali Hill: ಧರ್ಮ...
09-08-25 02:16 pm
Udupi, Talaq; ವರದಕ್ಷಿಣೆ ಕಿರುಕುಳ ; ವಿದೇಶದಿಂದ ಮ...
09-08-25 11:36 am
Roshan Saldanha, ED Raid, Mangalore, Fraud: ರ...
08-08-25 11:10 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm