ಬ್ರೇಕಿಂಗ್ ನ್ಯೂಸ್
24-06-25 07:39 pm Bangalore Correspondent ಕ್ರೈಂ
ಬೆಂಗಳೂರು, ಜೂ 24 : ಚೀಟಿ ಹೆಸರಿನಲ್ಲಿ ಬರೋಬ್ಬರಿ 10 ಕೋಟಿ ರೂ. ವಂಚಿಸಿರುವ ಪ್ರಕರಣ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಚೀಟಿ ಹಾಕಿಸಿ ಕೊಂಡಿದ್ದ ಮಹಿಳೆ ತನ್ನ ಕುಟುಂಬ ಸಮೇತ ಪರಾರಿಯಾಗಿದ್ದಾಳೆ. ಈ ಬೆನ್ನಲ್ಲೇ ಇಡೀ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡುವಂತೆ ದಕ್ಷಿಣ ವಿಭಾಗದ ಡಿಸಿಪಿ ನಗರ ಪೊಲೀಸ್ ಆಯಕ್ತರಿಗೆ ಪತ್ರ ಬರೆದಿದ್ದಾರೆ.
ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳಾದ ಜೆ.ಪಿ.ನಗರದ ನಿವಾಸಿ ಸುಧಾ, ಆಕೆಯ ಪತಿ ಸಿದ್ದಾಚಾರಿ, ಯಶವಂತ ಮತ್ತು ವರ್ಷಿಣಿ ಪರಾರಿಯಾಗಿದ್ದಾರೆ. ಆರೋಪಿ ಗಳು ನೂರಾರು ಮಂದಿಗೆ ಬರೋಬರಿ 10 ಕೋಟಿ ರೂ.ಗೂ ಅಧಿಕ ಹಣ ವಂಚಿಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡುವಂತೆ ಕೋರಲಾಗಿದೆ.
ಸದ್ಯ ವಂಚನೆ ಸಂಬಂಧ ಜೆ.ಪಿ.ನಗರದ ಪುಷ್ಪಲತಾ ಎಂಬುವರು ನೀಡಿದ ದೂರಿನ ಮೇರೆಗೆ ನಾಲ್ವರು ಆರೋಪಿಗಳ ವಿರುದ್ಧ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಸುಧಾ, ತನ್ನ ಪತಿ ಹಾಗೂ ಮಕ್ಕಳ ಜತೆ ಸೇರಿ ಸುಮಾರು 20 ವರ್ಷಗಳಿಂದ ಚೀಟಿ ವ್ಯವಹಾರ ಮಾಡುತ್ತಿದ್ದಾರೆ. ಹೀಗಾಗಿ ಸುಧಾ ಬಳಿ 5 ಲಕ್ಷ ರೂ. ಮೌಲ್ಯದ 2 ಚೀಟಿ ಹಾಕಿದ್ದು, 25 ಸಾವಿರ ರೂ. ಕಟ್ಟುತ್ತಿದ್ದೆ. ಈ ಚೀಟಿಗಳಲ್ಲಿ 40 ಮಂದಿ ಇದ್ದಾರೆ. ಹೀಗೆ 20 ತಿಂಗಳ ಚೀಟಿ ಹಣವನ್ನು ಪಾವತಿ ಮಾಡಿದ್ದೇನೆ. ಈ ಮಧ್ಯೆ ಚೀಟಿ ಎತ್ತಿಕೊಡುವಂತೆ ಕೇಳಿದಾಗ, ಸುಧಾ ಇದೇ ಮೊದಲ ಬಾರಿಗೆ ಚೀಟಿ ಹಾಕಿದ್ದಿರಿಂದ ಕೊನೆಯಲ್ಲಿ ಚೀಟಿ ಎತ್ತಿಕೊಳ್ಳಿ ಎಂದರು. ಹೀಗಾಗಿ ಚೀಟಿ ಎತ್ತಿಕೊಂಡಿರಲಿಲ್ಲ. ಈ ಮಧ್ಯೆ ಸುಧಾ ತನ್ನ ಇಡೀ ಕುಟುಂಬದ ಜತೆ ಜೂ. 3 ರಂದು ರಾತ್ರಿ ಮನೆ ಬಿಟ್ಟು ಪರಾರಿಯಾಗಿದ್ದಾಳೆ. ಹೀಗಾಗಿ ತನ್ನ 10 ಲಕ್ಷ ರೂ. ಚೀಟಿ ಹಣವನ್ನು ಪಡೆದು ಪರಾರಿಯಾಗಿರುವ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಪುಷ್ಪಲತಾ ದೂರಿನಲ್ಲಿ ಕೋರಿದ್ದಾರೆ.
10 ಕೋಟಿ ರೂ.ಗೂ ಅಧಿಕ ವಂಚನೆ:
ಈ ಮಧ್ಯೆ ದಿನೇ ದಿನೆ ಆರೋಪಿಗಳ ವಿರುದ್ಧ ದೂರು ನೀಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬ ದೂರುದಾರನಿಂದ ಹಣ ಪಾವತಿಸಿರುವ ಬಗ್ಗೆ ದಾಖಲೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಪ್ರಾಥಮಿಕವಾಗಿ ಆರೋಪಿಗಳು ಬರೋಬರಿ 10 ಕೋಟಿ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಗಳ ಸುಳಿವು ಸಿಕ್ಕರೆ ಸಹಾಯವಾಣಿಗೆ ದೂರು ನೀಡಿ:
ಕೋಟ್ಯಂತರ ರೂ. ದೋಚಿದ ಸುಧಾ ತನ್ನ ಕುಟುಂಬದ ಜೊತೆ ರಾತ್ರೋರಾತ್ರಿ ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಪುಟ್ಟೇನಹಳ್ಳಿ ಪೊಲೀ ಸರು ನಾಲ್ವರು ಆರೋಪಿಗಳ ಫೋಟೋ ಸಹಿತ ಕಾಣೆಯಾದ ಕುರಿತು ಪೊಲೀಸ್ ಪ್ರಕಟಣೆ ಹೊರಡಿಸಿದ್ದು, ಆರೋಪಿಗಳು ಕಂಡು ಬಂದಲ್ಲಿ ಪೊಲೀಸ್ ಸಹಾಯವಾಣಿ 112 ಅಥವಾ ಪೊಲೀ ಸ್ ಠಾಣೆಯ 080-22942566ಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
In a shocking case of financial fraud, a couple from JP Nagar, Bengaluru, has allegedly duped hundreds of people of over ₹10 crore under the pretense of running a chit fund. The accused—Sudha, her husband Siddachari, along with associates Yashwanth and Varshini—have reportedly gone missing overnight, prompting a wider investigation.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm