ಬ್ರೇಕಿಂಗ್ ನ್ಯೂಸ್
09-06-25 09:20 pm HK News Desk ಕ್ರೈಂ
ಇಂದೋರ್, ಜೂನ್ 9 : ಅದು ಮಧ್ಯಪ್ರದೇಶದ ಇಂದೋರ್ ನಗರದ ಎರಡು ಪ್ರತಿಷ್ಠಿತ ಕುಟುಂಬಗಳ ಮದುವೆ. ಒಂದೂವರೆ ವರ್ಷದ ಹಿಂದೆ ಯುವಕ- ಯುವತಿಯರ ಕೊಡುಕೊಳ್ಳುವಿಕೆಗೆ ವೇದಿಕೆಯಾಗಿದ್ದ ಪುಸ್ತಕದಿಂದ ಶುರುವಾದ ಎರಡು ಕುಟುಂಬಗಳ ಸಂಬಂಧ, ಇಬ್ಬರ ನಡುವೆ ಪ್ರೀತಿಯ ಬೆಸುಗೆ ಬೆಸೆದು ಅರೇಂಜ್ಡ್ ಆಗಿಯೇ ಮದುವೆ ನಡೆದಿತ್ತು. ಆದರೆ ಹೆಣ್ಣು- ಗಂಡು ಹಸೆಮಣೆಯೇರಿ ಮೇಘಾಲಯಕ್ಕೆ ಹನಿಮೂನ್ ತೆರಳಿದ್ದಾಗಲೇ ಯಾರೂ ಊಹಿಸದ ರೀತಿಯ ಕ್ಲೈಮ್ಯಾಕ್ಸ್ ನಡೆದುಹೋಗಿದೆ.
ಈ ರಿಯಲ್ ಕತೆ ಯಾವ ಥ್ರಿಲ್ಲರ್ ಸಿರೀಸ್ ಗೂ ಕಮ್ಮಿಯಿಲ್ಲದಂತೆ ನಡೆದಿದ್ದು, ಮಧ್ಯಪ್ರದೇಶ- ಉತ್ತರ ಪ್ರದೇಶ ಮತ್ತು ಮೇಘಾಲಯ ನಡುವೆ ನಗರ ಪ್ರದೇಶ ಮತ್ತು ಗುಡ್ಡಗಾಡಿನ ನಡುವೆ ಕತೆ ಸಾಗುತ್ತಲೇ ದುರಂತ ಮುಕ್ತಾಯ ಕಂಡಿದೆ. ಬಸ್ ಟ್ರಾನ್ಸ್ ಪೋರ್ಟ್ ಉದ್ಯಮ ಹೊಂದಿದ್ದ ರಾಜಾ ರಘುವಂಶಿಯದ್ದು ಇಂದೋರಿನ ಸಹಕಾರ್ ನಗರದ ಪ್ರತಿಷ್ಠಿತ ಕುಟುಂಬ. ತಂದೆಯ ಮೂವರು ಮಕ್ಕಳಲ್ಲಿ ಇತನೇ ಕಿರಿಯವ. ಸಚಿನ್ ಮತ್ತು ವಿಪಿನ್ ಎನ್ನುವ ಹಿರಿಯ ಸೋದರರಿಗೆ ಮದುವೆಯಾಗಿ ಫ್ಯಾಮಿಲ್ ಸೆಟ್ಲ್ ಆಗಿದ್ದಾರೆ. ಇವರು 2007ರಿಂದಲೇ ಶಾಲೆ, ಕಾಲೇಜುಗಳಿಗೆ ಬಾಡಿಗೆ ಬಸ್ ಗಳನ್ನು ಒದಗಿಸುತ್ತ ಫ್ಯಾಮಿಲ್ ಬಿಸಿನೆಸ್ ಹೊಂದಿದ್ದು ಕಿರಿಯ ಸೋದರ ರಾಜಾನೇ ಈಗ ಎಲ್ಲವನ್ನೂ ನೋಡಿಕೊಳ್ತಿದ್ದ. 29 ವರ್ಷದ ರಾಜಾನಿಗೂ ಮದುವೆಗೆ ಕುಟುಂಬಸ್ಥರು ರೆಡಿ ಮಾಡಿಕೊಂಡಿದ್ದರು. ಆದರೆ ಪ್ರತಿಷ್ಠಿತ ಕುಟುಂಬದ್ದೇ ಹೆಣ್ಣಾಗಬೇಕೆಂದು ಹುಡುಕಾಟವೂ ನಡೆಸಿದ್ದರು.
ಮ್ಯಾಗಜಿನ್ ಬೆಸೆದಿತ್ತು ಮದುವೆ ಸಂಬಂಧ
ಸೋನಮ್ ರಘುವಂಶಿಯದ್ದೂ ಇಂದೋರಿನಲ್ಲೇ ವಾಸವಿದ್ದ ಸಿರಿವಂತ ಕುಟುಂಬ. ತಂದೆ ದೇವಿ ಸಿಂಗ್ ರಘುವಂಶಿ ಫ್ಲೈವುಡ್ ಫ್ಯಾಕ್ಟರಿ ನಡೆಸುತ್ತಿದ್ದು ಕುಶ್ವಾಹ್ ನಗರದಲ್ಲಿ ನೆಲೆಸಿದ್ದರು. ತಂದೆಯ ಜೊತೆಗೆ ಬಿಲ್ಲಿಂಗ್, ಅಕೌಂಟ್, ಸುಪರ್ ವೈಸರ್ ಆಗಿ ಈಕೆಯೂ ಜೊತೆಯಾಗಿದ್ದಳು. 24ರ ಹರೆಯದ ಸೋನಮ್ ಗೆ ಉತ್ತಮ ಗಂಡನ್ನು ತಂದೆ ಹುಡುಕುತ್ತಿದ್ದರು. ಇತ್ತ 2024ರ ಅಕ್ಟೋಬರಿನಲ್ಲಿ ರಘುವಂಶಿ ಸಮುದಾಯದ ಒಳಗಣ ಸಂಬಂಧ ಬೆಳೆಸಿಕೊಳ್ಳುವ ಸಲುವಾಗಿ ಪ್ರಕಟವಾಗುತ್ತಿದ್ದ ಸಮಾಜ್ ಪರಿಚಯ್ ಪುಸ್ತಿಕಾ ಎಂಬ ಮ್ಯಾಗಜಿನ್ನಲ್ಲಿ ಹುಡುಗ- ಹುಡುಗಿಯರ ಫೋಟೋ, ವಿವರ ಕೊಟ್ಟು ಸಂಬಂಧ ಕುದುರಿಸಲು ಅವಕಾಶ ಇತ್ತು. ಅಕ್ಟೋಬರ್ 1ರ ಸಂಚಿಕೆಯಲ್ಲಿ ರಾಜಾ ರಘುವಂಶಿಯ ಫೋಟೋ ಮತ್ತು ಕುಟುಂಬದ ವಿವರ ಪ್ರಕಟವಾಗಿತ್ತು. ಅದೇ ಪುಸ್ತಕದ ಮತ್ತೊಂದು ಪುಟದಲ್ಲಿ ಸೋನಮ್ ರಘುವಂಶಿಯದ್ದೂ ಕುಟುಂಬದ ವಿವರಗಳು ಬಂದಿದ್ದವು. ಇದೇ ನೆಪದಲ್ಲಿ ಇಂದೋರಿನಲ್ಲಿ ಪ್ರತಿಷ್ಠಿತ ಎನಿಸಿದ್ದ ಎರಡೂ ಕುಟುಂಬಗಳ ಮಧ್ಯೆ ಮಾತುಕತೆ ನಡೆದು ಮದುವೆ ಸಂಬಂಧ ಕುದುರಿತ್ತು.
ಒಂದೂವರೆ ವರ್ಷದ ಬಳಿಕ 2025ರ ಮೇ 11ರಂದು ರಾಜಾ ಮತ್ತು ಸೋನಮ್ ಮಧ್ಯೆ ಇಂದೋರಿನಲ್ಲೇ ಮದುವೆ ಸಡಗರ ನಡೆದಿತ್ತು. ಪ್ರತಿಷ್ಠೆ, ಗೌರವದ ಕುಟುಂಬವಾಗಿದ್ದರಿಂದ ಮದುವೆ ಬೆನ್ನಲ್ಲೇ ಮೇ 20ರಂದು ದಂಪತಿ ಸಹಜ ಎನ್ನುವಂತೆ ಮೊದಲೇ ಗೊತ್ತುಪಡಿಸಿದಂತೆ ಮೇಘಾಲಯಕ್ಕೆ ಹನಿಮೂನ್ ಹೊರಟಿದ್ದರು. ಮೇ 21ರಂದು ಮೇಘಾಲಯದ ಶಿಲ್ಲಾಂಗ್ ತಲುಪಿದ್ದ ದಂಪತಿ ಅಲ್ಲಿಯೇ ಸ್ಕೂಟರ್ ಬಾಡಿಗೆ ಪಡೆದು ಎಲ್ಲ ಕಡೆ ಸುತ್ತಾಡಿದ್ದರು. ಆದರೆ ಮೂರು ದಿನ ಕಳೆಯುವಷ್ಟರಲ್ಲಿ ರಾಜಾ ಮತ್ತು ಸೋನಂ ರಘುವಂಶಿ ನಾಪತ್ತೆಯಾಗಿದ್ದರು. ಕಾರು ಹೋಗಲಾಗದ ಬೆಟ್ಟಗಳ ಮೇಲಿನ ರೆಸಾರ್ಟ್ ನಲ್ಲಿ ರೂಮ್ ಬುಕ್ ಮಾಡಿದ್ದವರು ಚಿರಾಪುಂಜಿ ಬಳಿಯಲ್ಲಿ ಸುತ್ತಾಟ ಮಧ್ಯೆ ಕಾಣೆಯಾಗಿದ್ದರು ಎನ್ನುವ ಸುದ್ದಿ ಹಬ್ಬಿತ್ತು. ನೋಂಗ್ರಿಯಾಟ್ ಗ್ರಾಮದಲ್ಲಿ ಕೊನೆಯ ಬಾರಿಗೆ ರಾಜಾನ ಮೊಬೈಲ್ ಲೊಕೇಶನ್ ತೋರಿಸಿತ್ತು. ಅವರು ಸುತ್ತಾಡಿದ್ದ ಸ್ಕೂಟರ್ ಕೂಡ ಅಲ್ಲಿಯೇ ಪತ್ತೆಯಾಗಿತ್ತು.
ಟ್ರಕ್ಕಿಂಗ್ ಕಷ್ಟವಾಯ್ತೆಂದು ಅತ್ತೆಗೆ ಕರೆ
ಮೇ 23ರಂದು ಕೊನೆಯ ಬಾರಿಗೆ ರಾಜಾನ ತಾಯಿ ಉಮಾದೇವಿಗೆ ಫೋನ್ ಕರೆ ಮಾಡಿದ್ದ ಸೋನಮ್, ಟ್ರಕ್ಕಿಂಗ್ ಕಷ್ಟವಾಗಿತ್ತು. ತುಂಬ ಸುಸ್ತಾಗಿದೆ ಎಂದು ಹೇಳಿ ಫೋನ್ ಕಟ್ ಮಾಡಿದ್ದಳು. ಅದೇ ದಿನ ಗೈಡ್ ಜೊತೆಗೆ ಬೆಟ್ಟದ ಮೇಲೇರಿದ್ದರೂ, ಹಿಂತಿರುಗಿ ಬರುವಾಗ ನಾವೇ ಬರುತ್ತೇವೆ ಎಂದು ಹೇಳಿ ಗೈಡನ್ನು ಹಿಂದಕ್ಕೆ ಕಳಿಸಿದ್ದರು ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿತ್ತು. 24 ಗಂಟೆಯಲ್ಲಿ ಇವರು ಸುತ್ತಾಡಿದ್ದ ಸ್ಕೂಟರ್ ಪತ್ತೆಯಾಗಿತ್ತು. ಆದರೆ ಹನಿಮೂನ್ ಬಂದಿದ್ದ ದಂಪತಿ ಕಾಣಸಿಗಲಿಲ್ಲ. ಸ್ಕೂಟರ್ ಮಾಲೀಕನ ಪತ್ತೆಯಾಗುತ್ತಿದ್ದಂತೆ, ದಂಪತಿ ಇಂದೋರಿನವರು ಎನ್ನುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ದಂಪತಿ ನಾಪತ್ತೆಯಾಗಿದ್ದು ಇಂದೋರಿನ ಕುಟುಂಬಸ್ಥರಿಗೂ ತಲುಪಿದ್ದರಿಂದ ತೀವ್ರ ಆತಂಕವೂ ವ್ಯಕ್ತವಾಗಿತ್ತು. ಪ್ರವಾಸ ಹೋಗಿದ್ದವರು ನಾಪತ್ತೆಯಾಗಿದ್ದರಿಂದ ಪೊಲೀಸರ ಮೇಲೂ ಒತ್ತಡ ಬಿದ್ದಿತ್ತು.
ಡ್ರೋಣ್ ಹುಡುಕಾಟದಲ್ಲಿ ಕೊಳೆತ ಶವ ಪತ್ತೆ
ಜೂನ್ 2ರಂದು ಬೆಟ್ಟಗಳ ಮೇಲ್ಗಡೆ ಪೊಲೀಸರು ಡ್ರೋಣ್ ಬಳಸಿ ಶೋಧ ನಡೆಸುತ್ತಿದ್ದಾಗಲೇ ಕೊಳೆತು ಹೋಗಿದ್ದ ರಾಜಾ ರಘುವಂಶಿಯ ಶವ ಪತ್ತೆಯಾಗಿದೆ. ಅದರ ಪಕ್ಕದಲ್ಲೇ ಕಬ್ಬಿಣದ ರಾಡ್ ಕೂಡ ಇತ್ತು. ತಲೆಗೆ ತೀವ್ರ ಪೆಟ್ಟು ಬಿದ್ದ ಗಾಯವೂ ಇತ್ತು. ಹೀಗಾಗಿ ಯಾರೋ ಕೊಲೆ ಮಾಡಿ ಸಾಯಿಸಿದ್ದಾರೆಂದು ಮೇಲ್ನೋಟಕ್ಕೆ ಗೊತ್ತಾಗಿತ್ತು. ಆದರೆ ಆತನ ಜೊತೆಗಿದ್ದ ಸೋನಂ ಬಗ್ಗೆ ಯಾವುದೇ ಕುರುಹು ಸಿಕ್ಕಿರಲಿಲ್ಲ. ಇತ್ತ ಕುಟುಂಬಸ್ಥರು ಯಾರೋ ಆಕೆಯನ್ನು ಕಿಡ್ನಾಪ್ ಮಾಡಿರಬೇಕೆಂದು ಮತ್ತಷ್ಟು ಸಂಶಯಗೊಂಡಿದ್ದರು.
ಮೇಘಾಲಯದಲ್ಲಿ ಪ್ರವಾಸಿಗನ ಹತ್ಯೆ ಸುದ್ದಿ
ಪೊಲೀಸರು ದಂಪತಿ ತೆರಳಿದ್ದ ಶಿಲ್ಲಾಂಗಿನ ಹೊಟೇಲ್, ರೆಸಾರ್ಟ್ ಇನ್ನಿತರ ಪ್ರದೇಶದ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದರು. ಪ್ರವಾಸ ಬಂದಿದ್ದ ಮಧ್ಯಪ್ರದೇಶದ ನವ ದಂಪತಿಯನ್ನು ಕೊಲ್ಲಲಾಗಿದೆ ಎನ್ನುವ ಸುದ್ದಿ ಮೇಘಾಲಯದಲ್ಲಿ ಹರಡಿತ್ತು. ಯಾರು ಇದರ ಹಿಂದಿದ್ದಾರೋ ಅವರನ್ನೆಂದೂ ಹಾಗೇ ಬಿಡಲ್ಲ ಎಂದು ಮೇಘಾಲಯ ಸಿಎಂ ಕೋನ್ರಾಡ್ ಕೆ. ಸಂಗ್ಮಾ ಹೇಳಿದ್ದರು. ದಂಪತಿ ಕೊನೆಯ ಬಾರಿಗೆ ಪತ್ತೆಯಾಗಿದ್ದ ಸಿಸಿಟಿವಿ ಫೂಟೇಜ್ ಅಲ್ಲಿನ ಟಿವಿಗಳಲ್ಲಿ ಹೆಡ್ ಲೈನ್ ಸುದ್ದಿಯಾಗಿತ್ತು. ಯುವಕನ ಶವ ಪತ್ತೆ, ಯುವತಿ ಎಲ್ಲಿ ಹೋದಳು, ಯಾರಿಂದ ಅಪಹರಣ ಆಗಿದೆ ಎನ್ನುವ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ಪ್ರತಿಷ್ಠಿತ ಕುಟುಂಬದ ಸೋನಮ್ ರಘುವಂಶಿ ನಾಪತ್ತೆ ಎನ್ನುವುದೇ ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಮೇಘಾಲಯದಲ್ಲಿ ದೊಡ್ಡ ಸುದ್ದಿಯಾಗಿತ್ತು.
ಯುಪಿಯ ಘಾಜಿಪುರದಲ್ಲಿ ಪತ್ತೆಯಾದ ಸೋನಂ
ಹೀಗಿರುವಾಗಲೇ ಜೂನ್ 8ರಂದು ಉತ್ತರ ಪ್ರದೇಶದ ಘಾಜಿಪುರದಲ್ಲಿ ಸೋನಮ್ ರಘುವಂಶಿ ಪತ್ತೆಯಾಗುತ್ತಾಳೆ. ಯುಪಿ ಪೊಲೀಸರು ಆಕೆ ನಂದ್ ಗಂಜ್ ಎನ್ನುವ ಜಾಗದಲ್ಲಿ ತೀವ್ರ ಜ್ವರದಿಂದ ಬಳಲಿದ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ ಎಂದು ತಿಳಿಸಿದ್ದರು. ಆದರೆ, ಮೇಘಾಲಯ ಪೊಲೀಸರು ಆಕೆ ಒತ್ತಡಕ್ಕೊಳಗಾಗಿ ಉತ್ತರ ಪ್ರದೇಶ ಪೊಲೀಸರ ಮುಂದೆ ಶರಣಾಗಿದ್ದಾಳೆಂದು ತಿಳಿಸಿದ್ದಾರೆ. ಆಕೆಯನ್ನು ವಶಕ್ಕೆ ಪಡೆಯುತ್ತೇವೆ, ಕೊಲೆಯ ಹಿಂದಿನ ನೈಜ ಕಾರಣವನ್ನು ಪತ್ತೆ ಮಾಡುತ್ತೇವೆ ಎಂದಿದ್ದಾರೆ. ಆಕೆಯೇ ಕೊಲೆ ಮಾಡಿದ್ದಾಳೆ ಎನ್ನುವ ವದಂತಿ ಹರಡಿದ್ದರೂ, ಈ ಬಗ್ಗೆ ನೈಜ ಮಾಹಿತಿ ಲಭಿಸಿಲ್ಲ. ಆಕೆಯ ತಂದೆಯೂ ತನ್ನ ಮಗಳು ಕೊಲೆ ಮಾಡಿರಲಿಕ್ಕಿಲ್ಲ, ಏನೋ ಎಡವಟ್ಟು ಆಗಿದೆ ಎಂದು ಹೇಳತೊಡಗಿದ್ದಾರೆ.
ಸುಪಾರಿ ಕಿಲ್ಲರ್ ಹೇಳಿ ಕೊಲೆ ಮಾಡಿಸಿದ್ರಾ..?
ಪೊಲೀಸ್ ಮೂಲಗಳ ಪ್ರಕಾರ, ಸೋನಮ್ ಮತ್ತು ಆಕೆಯ ಜೊತೆಗಿದ್ದ ಮೂವರನ್ನು ಬಂಧಿಸಲಾಗಿದೆ ಎನ್ನುವ ಸುದ್ದಿ ಹಬ್ಬಿದೆ. ಇಂದೋರಿನ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಅಕೌಂಟ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ರಾಜ್ ಕುಶ್ವಾಹ ಎಂಬ ಯುವಕನನ್ನೂ ಪೊಲೀಸರು ಆಕೆಯ ಜೊತೆಗೆ ಬಂಧಿಸಿದ್ದಾರೆ. ಸೋನಮ್ ಮತ್ತು ರಾಜ್ ಕುಶ್ವಾಹ ಸೇರಿಕೊಂಡು ಸುಪಾರಿ ಕಿಲ್ಲರ್ ಗಳಿಗೆ ಹೇಳಿ ರಾಜಾ ರಘುವಂಶಿಯನ್ನು ಉಪಾಯದಿಂದ ಕೊಲೆ ಮಾಡಿಸಿದ್ದಾರೆಂದು ಹೇಳಲಾಗುತ್ತಿದೆ. ಮದುವೆಗೂ ಮೊದಲೇ ಸೋನಂ ಮತ್ತು ರಾಜ್ ಕುಶ್ವಾಹ ನಡುವೆ ಅನೈತಿಕ ಸಂಬಂಧ ಇತ್ತು ಎನ್ನಲಾಗುತ್ತಿದೆ. ಸದ್ಯಕ್ಕೆ ಇಂದೋರ್ ಮತ್ತು ಮೇಘಾಲಯ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮೇಘಾಲಯದಲ್ಲಿ ಹನಿಮೂನ್ ಮತ್ತು ಕಿಲ್ಲರ್ ಲೇಡಿ ಎನ್ನುವ ಹೆಸರಲ್ಲಿ ಸುದ್ದಿ ಹೈಲೈಟ್ ಆಗಿದೆ. ಇಂದೋರಿನ ದೊಡ್ಡ ಕುಟುಂಬಗಳ ಪ್ರತಿಷ್ಠೆ ಬೀದಿಗೆ ಬಂದಿದ್ದು, ಯುವತಿಯೇ ಕೊಲೆಗಾತಿ ಎನ್ನುವ ಸುದ್ದಿ ಕುಟುಂಬಸ್ಥರು ತಮ್ಮ ಕಣ್ಣುಗಳನ್ನು ತಾವೇ ನಂಬದ ಸ್ಥಿತಿ ತಂದಿಟ್ಟಿದೆ. ಗಡದ್ದಾಗಿ ಮದುವೆಯಾದ ಎರಡೇ ವಾರದಲ್ಲಿ ಎರಡೂ ಕುಟುಂಬಗಳ ಮಧ್ಯೆ ಸೂತಕದ ಛಾಯೆ ಆವರಿಸಿದೆ.
The case of a missing honeymooning couple — Raja Raghuvanshi and Sonam Raghuvanshi — from Indore quickly turned into a chilling mystery involving the murder of Raja and disappearance of his wife Sonam. Late on Sunday night, Sonam arrived at a roadside dhaba in Ghazipur, Uttar Pradesh – exhausted, and eventually “surrendered”. She borrowed a phone and called her family, breaking down as she spoke.
01-08-25 09:09 pm
Bangalore Correspondent
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
ಕೆಆರ್ ಐಡಿಎಲ್ ನಿಗಮವನ್ನೇ ಗುಡಿಸಿ ಹಾಕಿದ ಗುಮಾಸ್ತ !...
01-08-25 11:47 am
ಪಾಕಿಸ್ತಾನದಿಂದಲೇ ಭಾರತವನ್ನು ಸ್ಫೋಟಿಸುತ್ತೇನೆ ! ಗೋ...
31-07-25 11:20 pm
01-08-25 11:44 am
HK News Desk
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
01-08-25 11:45 am
Mangalore Correspondent
ಬಂಟ್ವಾಳ ಪಿಎಸ್ಐ ಕೀರಪ್ಪ ಕಾಂಬಳೆ ಆತ್ಮಹತ್ಯೆ ಪ್ರಕರಣ...
31-07-25 11:16 pm
MCC Bank to Inaugurate 20th Branch in Byndoor...
31-07-25 10:14 pm
KMC Hospital Attavar Trains Armed Forces Doct...
31-07-25 09:14 pm
Mangalore KMC Attavar, Workshop: ಅತ್ತಾವರ ಕೆಎಂ...
31-07-25 09:05 pm
01-08-25 05:05 pm
Mangalore Correspondent
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm