ಬ್ರೇಕಿಂಗ್ ನ್ಯೂಸ್
08-06-25 10:29 pm HK News Desk ಕ್ರೈಂ
ಫರೀದಾಬಾದ್, ಜೂನ್.8: ಎಂಬಿಬಿಎಸ್ ಡಿಗ್ರಿ ಪೂರೈಸಿದ್ದ ಡಾಕ್ಟರ್ ಒಬ್ಬ ತನ್ನನ್ನು ಕಾರ್ಡಿಯೋಲಜಿಸ್ಟ್ ಎಂದು ನಕಲಿ ಸರ್ಟಿಫಿಕೇಟ್ ರೆಡಿ ಹೇಳಿಕೊಂಡು ಖಾಸಗಿ ಆಸ್ಪತ್ರೆಗೆ ಸೇರಿಕೊಂಡಿದ್ದಲ್ಲದೆ, ಕೇವಲ ಎಂಟು ತಿಂಗಳಲ್ಲಿ 50ಕ್ಕೂ ಹೆಚ್ಚು ಹಾರ್ಟ್ ಆಪರೇಶನ್ ಮಾಡಿರುವ ಪ್ರಸಂಗ ಉತ್ತರ ಪ್ರದೇಶದ ಫರೀದಾಬಾದ್ ನಲ್ಲಿ ಬೆಳಕಿಗೆ ಬಂದಿದೆ.
ಪಂಕಜ್ ಮೋಹನ್ ಶರ್ಮಾ ಎಂಬಾತ ಈ ರೀತಿ ನಕಲಿ ಸರ್ಟಿಫಿಕೇಟ್ ಮಾಡಿಕೊಂಡು ಪೋಸು ಕೊಟ್ಟಾತ. ಕಳೆದ ಎಪ್ರಿಲ್ 11ರಂದು ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಸಂಜಯ್ ಗುಪ್ತಾ ಪೊಲೀಸರಿಗೆ ದೂರು ನೀಡಿ, ಪಂಕಜ್ ಶರ್ಮಾನ ವೈದ್ಯಕೀಯ ದಾಖಲೆ ಬಗ್ಗೆ ತನಿಖೆ ಮಾಡುವಂತೆ ಆಗ್ರಹ ಮಾಡಿದ್ದರು. ಇದರಂತೆ ಪೊಲೀಸರು ತನಿಖೆ ನಡೆಸಿದಾಗ, ವೈದ್ಯನ ನಕಲಿತನ ಬಯಲಾಗಿದೆ.
ತನಿಖೆಯ ಸಂದರ್ಭದಲ್ಲಿ ಪಂಕಜ್ ಶರ್ಮಾ ತನ್ನ ನೋಂದಣಿ ಸಂಖ್ಯೆ 2456 ಎಂದು ತಿಳಿಸಿದ್ದ. ಅದರ ಬಗ್ಗೆ ಶೋಧ ನಡೆಸಿದಾಗ, ಡಾ.ಪಂಕಜ್ ಮೋಹನ್ ಎಂಬ ಹೆಸರನ್ನು ಹೊಂದಿದ್ದ ಬೇರೆಯದ್ದೇ ಕಾರ್ಡಿಯೋಲಜಿಸ್ಟ್ ಒಬ್ಬರ ನೋಂದಣಿ ಸಂಖ್ಯೆಯಾಗಿತ್ತು. ಪಂಕಜ್ ಶರ್ಮಾ ಕೇವಲ ಜನರಲ್ ಫಿಸೀಶಿಯನ್ ಮಾತ್ರ ಆಗಿದ್ದು, ಆತನ ನೋಂದಣಿ ಸಂಖ್ಯೆ 28482 ಎಂಬುದಾಗಿತ್ತು. ಪಂಕಜ್ ಶರ್ಮಾ 2024ರ ಜುಲೈ ತಿಂಗಳಲ್ಲಿ ಮೆಡಿಟರ್ನಿಯಾ ಹಾಸ್ಪಿಟಲ್ ಅಧೀನದ ಫರೀದಾಬಾದ್ ನಲ್ಲಿರುವ ಬಾದ್ ಶಾ ಖಾನ್ ಸಿವಿಲ್ ಆಸ್ಪತ್ರೆಯಲ್ಲಿ ಕಾರ್ಡಿಯೋಲಜಿಸ್ಟ್ ಆಗಿ ಸೇರ್ಪಡೆಯಾಗಿದ್ದ. ಕಾರ್ಡಿಯೋಲಜಿ ಬಗ್ಗೆ ಕಲಿತಿರದಿದ್ದರೂ, ಕಾರ್ಡಿಯೋಲಜಿ ಎಂಡಿ ಮತ್ತು ಡಿಎನ್ ಬಿ ಎಂದು ತನ್ನ ಹೆಸರಿನೊಂದಿಗೆ ನಮೂದಿಸಿಕೊಂಡಿದ್ದ.
ನಕಲಿ ಡಾಕ್ಟರ್ ಬಗ್ಗೆ ಸುದ್ದಿಯಾಗುತ್ತಿದ್ದಂತೆ ರಿಯಲ್ ಡಾಕ್ಟರ್ ಡಾ.ಪಂಕಜ್ ಮೋಹನ್ ತನ್ನ ನೋದಣಿ ಸಂಖ್ಯೆಯನ್ನು ದುರುಪಯೋಗ ಮಾಡಿದ್ದಾಗಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ನಿಗೆ ದೂರು ನೀಡಿದ್ದಾರೆ. ಅಲ್ಲದೆ, ಆರೋಪಿತ ಪಂಕಜ್ ಶರ್ಮಾಗೆ ಲೀಗಲ್ ನೋಟೀಸ್ ಕೂಡ ನೀಡಿದ್ದಾರೆ. ಆಬಳಿಕ ಆಸ್ಪತ್ರೆಗೆ ಬರುತ್ತಿದ್ದ ರೋಗಿ ಮತ್ತು ಸಂಬಂಧಿಕರು ಕೂಡ ಪಂಕಜ್ ಶರ್ಮಾ ಸರ್ಟಿಫಿಕೇಟ್ ಬಗ್ಗೆ ಪ್ರಶ್ನೆ ಮಾಡುತ್ತಿದ್ದರು. ಪೊಲೀಸರು ಪ್ರಕರಣ ದಾಖಲಿಸಿದ ಬಳಿಕ ಆಸ್ಪತ್ರೆ ಆಡಳಿತ ಮಂಡಳಿಯೇ ಪಂಕಜ್ ಶರ್ಮಾನನ್ನು ತೆಗೆದು ಹಾಕಿತ್ತು.
A doctor with only an MBBS degree allegedly posed as a cardiologist and conducted over 50 heart procedures in eight months at Badshah Khan Civil Hospital in Faridabad.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
18-09-25 02:42 pm
Mangalore Correspondent
ಜಾತಿ ಗಣತಿ ಮೊದಲೇ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ ಗೊಂ...
18-09-25 02:19 pm
Dharmasthala: ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನ...
17-09-25 11:05 pm
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm