ಬ್ರೇಕಿಂಗ್ ನ್ಯೂಸ್
08-06-25 03:59 pm HK News Desk ಕ್ರೈಂ
ಜೈಪುರ, ಜೂನ್.8: ಆಕೆಗೀಗ ಕೇವಲ 26 ವರ್ಷ. ಎರಡು ವರ್ಷಗಳ ಹಿಂದೆ ರಾಜಸ್ಥಾನದ ಕೋಟಾದಲ್ಲಿ ಐಸಿಐಸಿಐ ಬ್ಯಾಂಕಿನಲ್ಲಿ ರಿಲೇಶನ್ ಶಿಪ್ ಮ್ಯಾನೇಜರ್ ಆಗಿದ್ದವಳು. ಆದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ, ಕಡಿಮೆ ಸಮಯದಲ್ಲಿ ದುಪ್ಪಟ್ಟು ಹಣ ಮಾಡಬೇಕೆಂಬ ಆಸೆ ಈ ಯುವತಿಯನ್ನು ಈಗ ಜೈಲು ಕಂಬಿ ಎಣಿಸುವಂತೆ ಮಾಡಿದೆ. ಯಾಕಂದ್ರೆ, ಸಾಕ್ಷಿ ಗುಪ್ತಾ ಎನ್ನುವ ಹೆಸರಿನ ಈಕೆ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲೇ 110 ಎಫ್ ಡಿ ಖಾತೆಗಳಲ್ಲಿದ್ದ ಬರೋಬ್ಬರಿ 4.8 ಕೋಟಿ ಹಣವನ್ನು ಎಗರಿಸಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ.
2020ರಿಂದಲೂ ಸಾಕ್ಷಿ ಗುಪ್ತಾ ಬ್ಯಾಂಕಿನಲ್ಲಿ ಬೇರೆ ಯಾರಿಗೂ ತಿಳಿಯದಂತೆ ತನ್ನ ಗುಪ್ತ ವಹಿವಾಟು ನಡೆಸುತ್ತ ಬಂದಿದ್ದಾಳೆ. ಗ್ರಾಹಕರ ಖಾತೆಗಳಿಂದ 4.58 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಂಚಿಸಿದ ಆರೋಪದಲ್ಲಿ ಸಾಕ್ಷಿ ಗುಪ್ತಾಳನ್ನು ಪೊಲೀಸರು ಬಂಧಿಸಿದ್ದಾರೆ. 2020 ಮತ್ತು 2023 ರ ನಡುವೆ ಕೋಟಾ ನಗರದ ಡಿಸಿಎಂ ಪ್ರದೇಶದ ಶ್ರೀರಾಮ್ ನಗರ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಾಕ್ಷಿ ಗುಪ್ತಾ, ಬ್ಯಾಂಕ್ ಸೇವೆಗಳ ವ್ಯಾಪ್ತಿಯಲ್ಲೇ ವಂಚನೆ ಎಸಗಿದ್ದಾಳೆ. ಹೆಚ್ಚಾಗಿ ವೃದ್ಧರು, ವಯಸ್ಸಾದವರು, ಟೆಕ್ನಾಲಜಿ ಬಗ್ಗೆ ತಿಳಿಯದವರ ಖಾತೆಗಳನ್ನೇ ಯಾಮಾರಿಸಿದ್ದಾಳೆ. ಆಕೆ ತನ್ನ ಮಾವನ ಎಫ್ ಡಿ ಖಾತೆಯಿಂದಲೂ ಹಣ ಲಪಟಾಯಿಸಿದ್ದಾಳೆ.
ತನಿಖಾಧಿಕಾರಿಗಳ ಪ್ರಕಾರ, ಸಾಕ್ಷಿ ಗುಪ್ತಾ 41 ಗ್ರಾಹಕರ 110 ಕ್ಕೂ ಹೆಚ್ಚು ಖಾತೆಗಳಿಂದ ಹಣವನ್ನು ಲಪಟಾಯಿಸಿದ್ದಾಳೆ. ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗಳನ್ನು ಮೊದಲು ಬದಲಿಸಿದ್ದು ಬಳಿಕ ಓಟಿಪಿ ಬಳಸಿ ಹಣ ಡ್ರಾ ಮಾಡಿದ್ದಾಳೆ. ಈ ಹಣವನ್ನು ಜೆರೋಧಾ, ಐಸಿಐಸಿಐ ಡೈರೆಕ್ಟ್ ಷೇರು ಮಾರುಕಟ್ಟೆಯಲ್ಲಿ ಇನ್ವೆಸ್ಟ್ ಮಾಡಿದ್ದಾಳೆ.
ಬ್ಯಾಂಕಿನ ಗ್ರಾಹಕರೊಬ್ಬರು ತಮ್ಮ ಎಫ್ಡಿ ಖಾತೆ ಬಗ್ಗೆ ವಿಚಾರಿಸಲು ಬ್ಯಾಂಕಿಗೆ ಬಂದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಆನಂತರ, ಬ್ಯಾಂಕ್ ಶಾಖೆಯಲ್ಲಿ ಮೇಲಧಿಕಾರಿಗಳು ಅಡಿಟ್ ನಡೆಸುತ್ತಿದ್ದಾಗಲೂ ಅವ್ಯವಹಾರ ಆಗಿರುವುದು ಪತ್ತೆಯಾಗಿದೆ. ಇದರಂತೆ, ಬ್ಯಾಂಕಿನ ಮ್ಯಾನೇಜರ್ 2025ರ ಫೆಬ್ರವರಿ 18 ರಂದು ಪೊಲೀಸರಿಗೆ ದೂರು ನೀಡಿದ್ದರು. ಇದಕ್ಕೂ ಮೊದಲೇ ಸಾಕ್ಷಿ ಅಲ್ಲಿ ಕೆಲಸ ಬಿಟ್ಟು ಹೋಗಿದ್ದಳು.
ಬ್ಯಾಂಕ್ ಖಾತೆಗಳೊಂದಿಗೆ ಲಿಂಕ್ ಮಾಡಿದ್ದ ಗ್ರಾಹಕರ ಮೊಬೈಲ್ ಸಂಖ್ಯೆಗಳನ್ನು ಮೊದಲು ಬದಲಿಸಿದ್ದ ಸಾಕ್ಷಿ, ಆಮೂಲಕ ಬ್ಯಾಂಕ್ ವಹಿವಾಟಿನ ಸಂದೇಶಗಳು ಗ್ರಾಹಕರಿಗೆ ಹೋಗದಂತೆ ಮಾಡಿದ್ದಳು. ಆನಂತರ ತನ್ನ ಕುಟುಂಬ ಸದಸ್ಯರ ಫೋನ್ ಸಂಖ್ಯೆಗಳನ್ನು ಅಪ್ಡೇಟ್ ಮಾಡಿದ್ದಳು. ಮೂರು ವರ್ಷಗಳಲ್ಲಿ 4 ಕೋಟಿಗೂ ಹೆಚ್ಚು ಹಣವನ್ನು ಲಪಟಾಯಿಸಿದ್ದಾಳೆ. ಖಾತೆದಾರರಿಗೆ ವಂಚನೆಯ ತಿಳಿಯದಂತೆ ಮಾಡಲು ಬ್ಯಾಂಕ್ ವ್ಯವಸ್ಥೆಯನ್ನೇ ದುರುಪಯೋಗ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್ ಡಿ ಹಾಕಿದ್ದು ಮೆಚ್ಯುರಿಟಿಗೆ ಬರುವ ಮೊದಲೇ ಗ್ರಾಹಕರ ಹೆಸರಿನಲ್ಲಿಯೇ ಡ್ರಾ ಮಾಡುತ್ತಿದ್ದಳು. ಅಲ್ಲದೆ, ಅದರ ಮೇಲೆ ಸಾಲವನ್ನೂ ಪಡೆಯುತ್ತಿದ್ದಳು. 31 ಗ್ರಾಹಕರ ಖಾತೆಯಲ್ಲಿದ್ದ ಫಿಕ್ಸೆಡ್ ಡಿಪಾಸಿಟ್ ಮೊತ್ತದ 1.35 ಕೋಟಿ ರೂ. ಹಣವನ್ನು ಹಲವಾರು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿ, ಅದನ್ನು ತನ್ನ ಡಿಮ್ಯಾಟ್ ಖಾತೆಗೆ ವರ್ಗಾವಣೆ ಮಾಡುತ್ತಿದ್ದಳು. ಸ್ಟಾಕ್ ಮಾರ್ಕೆಟ್ ನಲ್ಲಿ ಹಣ ನಷ್ಟಕ್ಕೀಡಾದ ಸಂದರ್ಭದಲ್ಲಿ ಮತ್ತೆ ಮತ್ತೆ ಮುಗ್ಧ ಗ್ರಾಹಕರ ಖಾತೆಯಲ್ಲಿದ್ದ ಹಣವನ್ನು ಲಪಟಾಯಿಸುತ್ತ ಹೋಗಿದ್ದಳು.
26 Year Old ICICI Bank Manager Arrested for Embezzling rs 4.8 Crore from Senior Citizens, FD Accounts to Invest in Stock Market.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
18-09-25 02:42 pm
Mangalore Correspondent
ಜಾತಿ ಗಣತಿ ಮೊದಲೇ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ ಗೊಂ...
18-09-25 02:19 pm
Dharmasthala: ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನ...
17-09-25 11:05 pm
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm