ಬ್ರೇಕಿಂಗ್ ನ್ಯೂಸ್
01-06-25 11:02 pm Mangalore Correspondent ಕ್ರೈಂ
ಉಳ್ಳಾಲ, ಜೂ.1 : ನಸುಕಿನ ವೇಳೆ ಗೂಗಲ್ ಮ್ಯಾಪ್ ಅನುಸರಿಸಿ ವಿಳಾಸ ಸಿಗದೆ ದಿಕ್ಕೆಟ್ಟ ಆಟೋ ರಿಕ್ಷಾ ಚಾಲಕನೊಬ್ಬ ಮಾರ್ಕೆಟ್ ಗೆ ಕೆಲಸಕ್ಕೆಂದು ಮತ್ತೊಂದು ಬಾಡಿಗೆ ರಿಕ್ಷಾದಲ್ಲಿ ತೆರಳುತ್ತಿದ್ದ ಇಬ್ಬರು ಯುವಕರಲ್ಲಿ ವಿಳಾಸ ಕೇಳಿದ್ದು, ಮುಂಜಾನೆಯ ವೇಳೆ ಅಪರಿಚಿತನನ್ನ ಕಂಡು ಬೇಸ್ತು ಬಿದ್ದ ಯುವಕರು ತಮ್ಮ ಮೇಲೆ ದಾಳಿ ನಡೆಸುತ್ತಾರೆಂಬ ತಪ್ಪು ಗ್ರಹಿಕೆಯಿಂದ ತಪ್ಪಿಸಿ ಓಡೋಗಿ ಉಳ್ಳಾಲ ಠಾಣೆಗೆ ದೂರು ನೀಡಿರುವ ಘಟನೆ ನಡೆದಿದ್ದು, ಪೊಲೀಸರ ವಿಚಾರಣೆಯಿಂದ ಘಟನೆಯ ಅಸಲಿಯತ್ತು ಬಯಲಾಗಿದೆ.
ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡು ಎಂಬ ಮಾತಿಗೆ ಪೂರಕವೆಂಬಂತಿದೆ ಈ ಘಟನೆ. ಕಳೆದ ಶುಕ್ರವಾರ ಮುಂಜಾನೆ ಕಲ್ಲಾಪುವಿನ ತರಕಾರಿ ಮಾರುಕಟ್ಟೆಗೆ ದೇರಳಕಟ್ಟೆಯಿಂದ ರಿಕ್ಷಾದಲ್ಲಿ ಕುತ್ತಾರು ರಾಣಿಪುರದ ಒಳ ರಸ್ತೆಯಿಂದ ತೆರಳುತ್ತಿದ್ದ ಇಬ್ಬರು ಮುಸ್ಲಿಂ ಯುವಕರ ಮೇಲೆ ಇನ್ನೊಂದು ರಿಕ್ಷಾದಲ್ಲಿ ಬಂದ ತಂಡ ದಾಳಿಗೆ ಯತ್ನಿಸಿದೆ ಎಂಬ ದೂರು ಕೇಳಿಬಂದಿತ್ತು. ಈ ಬಗ್ಗೆ ಇಬ್ಬರು ಮುಸ್ಲಿಂ ಯುವಕರು ಉಳ್ಳಾಲ ಠಾಣೆಗೆ ತಮ್ಮ ಮೇಲೆ ದಾಳಿಗೆ ಯತ್ನ ನಡೆದಿರೋದಾಗಿ ದೂರನ್ನ ನೀಡಿದ್ದರು.
ಪ್ರಕರಣದ ಬೆನ್ನತ್ತಿದ್ದ ಉಳ್ಳಾಲ ಪೊಲೀಸರು ರಾಣಿಪುರ ರಿಷಿವನ ಬಳಿಯ ಸಿಸಿ ಕ್ಯಾಮೆರಾದ ದೃಶ್ಯಾವಳಿಗಳನ್ನ ಪರಿಶೀಲಿಸಿದಾಗ ಘಟನೆಯ ಅಸಲಿಯತ್ತು ಬಯಲಾಗಿದ್ದು ಪ್ರಕರಣ ಠಾಣೆಯಲ್ಲೇ ಇತ್ಯರ್ಥಗೊಂಡಿದೆ.
ಹಾಗಿದ್ದರೆ ನಡೆದಿದ್ದೇನು..?
ಶುಕ್ರವಾರ ಬೆಳ್ಳಂಬೆಳಗ್ಗೆ ಉಳ್ಳಾಲ ತಾಲೂಕಿನಾದ್ಯಂತ ಇತಿಹಾಸ ಕಾಣದ ಧಾರಾಕಾರ ಮಳೆ ಸುರಿದು ಜಲಪ್ರಳಯವೇ ಉಂಟಾಗಿತ್ತು. ದೇರಳಕಟ್ಟೆ ನಿವಾಸಿಗಳಾದ ರುಕ್ಮಾನ್ ಮತ್ತು ರಾಹಿನ್ ಅವರು ಮುಂಜಾನೆ 5 ಗಂಟೆಗೆ ಬಾಡಿಗೆ ರಿಕ್ಷಾದಲ್ಲಿ ಕಲ್ಲಾಪುವಿನ ಗ್ಲೋಬಲ್ ಮಾರುಕಟ್ಟೆಗೆ ಕುತ್ತಾರು- ರಾಣಿಪುರದ ಒಳ ರಸ್ತೆಯಾಗಿ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ರಾಣಿಪುರ ರಿಷಿವನದ ಬಳಿ ಗೂಗಲ್ ಮ್ಯಾಪನ್ನ ಅನುಸರಿಸಿ ಬಂದು ದಿಕ್ಕೆಟ್ಟ ರಿಕ್ಷಾವೊಂದು ಎದುರಾಗಿ ನಿಂತಿದ್ದು, ಅದರ ಚಾಲಕ ರುಕ್ಮಾನ್ ಮತ್ತು ರಾಹಿನ್ ಅವರಲ್ಲಿ ಋಷಿವನದ ದಾರಿಯನ್ನ ಕೇಳಿದ್ದಾರೆ. ಅಷ್ಟಕ್ಕೇ ಭಯಭೀತರಾದ ರುಕ್ಮಾನ್ ಮತ್ತು ರಾಹಿನ್ ಅವರು ಸ್ಥಳದಿಂದ ಓಡಿದ್ದು ಉಳ್ಳಾಲ ಠಾಣೆಗೆ ಹೋಗಿ ತಮ್ಮ ಮೇಲೆ ದಾಳಿಗೆ ಯತ್ನ ನಡೆದಿರೋದಾಗಿ ದೂರು ಕೊಟ್ಟಿದ್ದಾರೆ.
ಉಳ್ಳಾಲ ಪೊಲೀಸರು ವಿಚಾರಣೆ ನಡೆಸಿ ಸಿಸಿಟಿವಿ ಪರಿಶೀಲಿಸಿದಾಗ ರಾಣಿಪುರ ರಿಷಿವನ ಕಾನ್ವೆಂಟ್ಗೆ ಕೊಯಮತ್ತೂರಿನಿಂದ ವ್ಯಕ್ತಿಯೊಬ್ಬರು ಬಂದಿದ್ದು, ಅವರನ್ನು ಮಂಗಳೂರು ರೈಲ್ವೇ ನಿಲ್ದಾಣದಿಂದ ರಿಕ್ಷಾ ಚಾಲಕರೋರ್ವರು ಗೂಗಲ್ ಮ್ಯಾಪ್ ಅನುಸರಿಸಿ ಕರೆತಂದಿದ್ದರು. ಮುಂಜಾನೆ ಒಳರಸ್ತೆಯಲ್ಲಿ ವಿಳಾಸ ಸಿಕ್ಕದೆ ದಿಕ್ಕೆಟ್ಟು ಅಲ್ಲೇ ಎದುರಾದ ರಿಕ್ಷಾವನ್ನ ನಿಲ್ಲಿಸಿ ವಿಳಾಸ ಕೇಳಿದ್ದಾರೆ.
ಇತ್ತೀಚೆಗೆ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಕೋಮು ಸಂಘರ್ಷದ ಕುರಿತಾಗಿ ಆಗಂತುಕರು ದಾರಿ ಕೇಳಿಕೊಂಡು ಬಂದು ದಾಳಿ ನಡೆಸುತ್ತಾರೆಂದು ವಾಟ್ಸಪ್ ಸಂದೇಶಗಳನ್ನ ಓದಿದ್ದೆವು. ಹಾಗಾಗಿ ತಪ್ಪಾಗಿ ಗ್ರಹಿಸಿ ರಿಕ್ಷಾ ನಿಲ್ಲಿಸದೇ ನೇರವಾಗಿ ಹೋಗಿದ್ದೆವೆಂದು ದೂರು ಕೊಟ್ಟ ಮುಸ್ಲಿಂ ಯುವಕರು ಪೊಲೀಸರಲ್ಲಿ ಹೇಳಿದ್ದಾರೆ.
Mangalore Mistaken Identity Sparks Fear; Youth Flee After Auto Driver Asks for Directions at Ullal
30-01-26 10:37 pm
Bangalore Correspondent
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
30-01-26 03:38 pm
HK News Desk
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
30-01-26 09:01 pm
Giridhar Shetty, Mangaluru
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
30-01-26 10:57 pm
HK News Desk
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm